ಪುನೀತ್ ರಾಜ್ ಕುಮಾರ ಅವರ ಜೀವನದಿಂದ ನಾವು ಕಲಿಯಬೇಕಾದದ್ದು! ತಪ್ಪದೆ ಓದಿ…….
ಪುನೀತ್ ರಾಜ್ ಕುಮಾರ್ ನಮ್ಮನ್ನೆಲ್ಲ ಅಗಲಿ ಎಷ್ಟೋ ದಿನಗಳು ಕಳೆದರು ಸಹ ಅವರ ಮೇಲಿನ ಪ್ರೀತಿ ಇನ್ನೂ ಹೆಚ್ಚುತ್ತಲೇ ಇದೆ. ಅವರ ಸತ್ಕಾರ್ಯ, ನಡುವಳಿಕೆ ಮತ್ತು ಸಾಮಾಜಿಕ ಕಾರ್ಯ ಇವುಗಳನ್ನು ಕೇಳಿದರೆ ಅವರು ನಿಜವಾದ ದೇವರು ಅಂತ ಅನಿಸುತ್ತೇ. ಅಂತಹ ದೇವತಾ ಮನುಷ್ಯನನ್ನು ವಿಧಿ ಅಷ್ಟು ಬೇಗನೆ ಕರೆದುಕೊಂಡು ಹೋಗುತ್ತೇ ಅಂತ ಯಾರೂ ಕೂಡ ಊಹಿಸಿರಲಿಲ್ಲ. ಅವರ ಅಗಲುವಿಕೆಯ ದುಃಖ ಇಡೀ ಜಗತ್ತಿಗೆ ತಗಲಿದೆ. ಇಂದು ಜಗತ್ತಿನ ಪ್ರತಿಯೊಂದು ಮೂಲೆ ಮೂಲೆಯಲ್ಲಿ ಸಹ ಪುನೀತ್ ಅವರ ಹೆಸರು ಅಜರಾಮರ. ಪುನೀತ್ ರಾಜಕುಮಾರ್ ಅವರು ನಡೆದುಬಂದ ದಾರಿ, ಅವರ ಜೀವನದ ಶೈಲಿ ಮತ್ತು ಸಾಮಾಜಿಕ ಕಾರ್ಯ ಇವುಗಳ ಆಧಾರದ ಮೇಲೆ ನಾವು ಕಲಿತುಕೊಳ್ಳಬೇಕಾದ ಕೆಲವು ಅಂಶಗಳು ಕೆಳಗಿನಂತಿವೆ.

- ಇನ್ನೂ ನಮ್ಮ ಬಳಿ ಬಹಳ ಸಮಯವಿದೆ ಎಂದು ಕಾಯುತ್ತ ಕೂರುವುದಕ್ಕಿಂತ, ಈಗಲೇ ಮಾಡಬೇಕೇನಿಸುವ ಸತ್ಕಾರ್ಯಗಳನ್ನು ಮಾಡಿ ಬಿಡಬೇಕು.
- ಯಾರಿಗಾದರೂ ಮನ ನೋಯುವಂತೆ ನಡೆದುಕೊಂಡಿದ್ದರೆ ಕ್ಷಮೆ ಕೇಳಿಬಿಡಬೇಕು.
- ನಾಳೆ ಎನ್ನದೇ ಈಗಿನಿಂದಲೇ ಮನೆಯವರು, ಬಂಧು ಬಾಂಧವರು , ಸ್ನೇಹಿತರ ಹಾಗೂ ನೆರೆಹೊರೆಯವರ ಜೊತೆ ಉತ್ತಮ ಭಾಂಧವ್ಯ ಸೃಷ್ಟಿಸಿಕೊಂಡು ಬಿಡಬೇಕು.
- ನಾಳೆಯೇ ಸತ್ತು ಹೋಗುತ್ತೇನೇನೋ ಎಂಬಂತೆ ಬದುಕಿ ಬಿಡಬೇಕು.
- ಸತ್ತಾಗ ಶವದ ಎದುರು ನಿಂತು ಹಾಡಿ ಹೊಗಳುವುದಕ್ಕಿಂತ, ಕಣ್ಣೀರು ಸುರಿಸುವದಕ್ಕಿಂತ ಈಗಲೇ ಒಳ್ಳೆಯ ಮಾತು ಹಾಗೂ ಒಂದಿಷ್ಟು ಸಮಯ ಕೊಟ್ಟು ಬಿಡಬೇಕು.
- ಈ ಜಗತ್ತು ಮನುಷ್ಯನು ಉತ್ತಮವಾಗಿ ಬದುಕಿ ಸುಖ ಸಂತೋಷದಿಂದ ಬಾಳಲು ಇರುವ ಮಹಾನ್ ವೇದಿಕೆ.
- ಸ್ವಾರ್ಥ, ದ್ವೇಷ, ಅಸೂಯೆ ಕೋಪ, ತಾಪ, ಶತ್ರುತ್ವ ಹಾಗೂ ಭವಿಷ್ಯದ ಬೇಡದ ಚಿಂತೆ ಎಲ್ಲವೂ, ನಮ್ಮ ಆನಂದದ ಬದುಕನ್ನು ಕಸಿಯಲು ಬಂದ ನಕಾ#ರಾತ್ಮಕ ಅಂಶಗಳು.
- ನಾವು ಮಾಡುವ ಸಾಮಾಜಿಕ ಕಾರ್ಯಗಳನ್ನು ಜನರಿಗೆ ತೋರುವುದರ ಬದಲಾಗಿ ಕಾರ್ಯ ಮಾಡಿಯು ಸಹ ಮಾಡದಂತಿರಬೇಕು.
- ಜನರು ನಾವು ಇದ್ದಾಗ ಎಷ್ಟು ಬೆಲೆ ಕೊಡುವರು ಎನ್ನುದು ಮುಖ್ಯವಲ್ಲ, ಇರದಿದ್ದಾಗ ನಮ್ಮನ್ನು ಎಷ್ಟು ನೆನಪಿಸಿಕೊಳ್ಳುವರು ಎಂಬುದು ಮುಖ್ಯ.
- ಮತ್ತೇ ಬೇಕು ಎಂದರೆ ಸಿಗದ, ಈ ಜನ್ಮ ವನ್ನು ನಾವೆಲ್ಲರೂ ಖುಷಿ ಖುಷಿಯಾಗಿ ಕಳೆಯೋಣ.
- ಎಷ್ಟೇ ಹಣ, ಹೆಸರು, ಕೌಟುಂಬಿಕ ಹಿನ್ನೆಲೆ ಇದ್ದರೂ ಸಹ ಆರೋಗ್ಯವನ್ನು ನಾವು ನಿರ್ಲಕ್ಷ್ಯ ಮಾಡಿದರೆ, ಇರುವುದೆಲ್ಲವೂ ನಿರರ್ಥಕವಾಗುತ್ತದೆ.
- ಇಲ್ಲಿ ನಾವು ಕೇವಲ ಅತಿಥಿಗಳು ಮಾತ್ರ, ಅಲ್ಲಿಹುದು ನಮ್ಮ ಮನೆ,ಇಲ್ಲಿ ಬಂದಿಹೆವು ಸುಮ್ಮನೆ.
ಓದಿ ತಪ್ಪದೇ ಶೇರ್ ಮಾಡಿ ಬದುಕು ಇಷ್ಟೇ ಅಂತ ಈಗಾಲಾದ್ರೂ ಎಲ್ಲರಿಗೂ ತಿಳಿಯಲಿ….