ಈ ಡಾಲ್ಫಿನ್ ತರ ಎಲ್ಲರೂ ಇದ್ದರೆ ಯಾರ ಫೋನು ಕಳೆಯುತ್ತಿರಲಿಲ್ಲ! ಯಾಕೆ ಗೊತ್ತಾ? 85 ಲಕ್ಷ ಜನರು ನೋಡಿದ ಈ ವಿಡಿಯೋ ನೋಡಿ!

ಜಗತ್ತಿನಲ್ಲಿ ಮನುಷ್ಯನು ಎಲ್ಲ ಪ್ರಾಣಿಗಳಲ್ಲಿ ಅತೀ ಬುದ್ಧಿವಂತ ಪ್ರಾಣಿ ಎಂದು ತಿಳಿಯಲಾಗುತ್ತದೆ. ಆದರೆ ಈತ ಬುದ್ಧಿವಂತನಿರಬಹುದು ಪ್ರಾಮಾಣಿಕನಲ್ಲ. ಪ್ರಾಮಾಣಿಕತೆಗೆ ಮನುಷ್ಯನನ್ನು ಬಿಟ್ಟು ಉಳಿದೆಲ್ಲಾ ಪ್ರಾಣಿಗಳು ಹೆಸರುವಾಸಿಯಾಗಿವೆ ಎಂದರೆ ತಪ್ಪಾಗಲಾರದು.

ಪ್ರಾಣಿಗಳಿಗೆ ಒಮ್ಮೆ ಪ್ರೀತಿ ವಾತ್ಸಲ್ಯವನ್ನು ನೀಡಿದರೆ ಅವು ಎಂದಿಗೂ ನಮ್ಮೊಂದಿಗೆ ವಿಶ್ವಾಸದ್ರೋಹ ಮಾಡುವುದಿಲ್ಲ. ತಮ್ಮ ಜೀವ ಹೋದರೂ ಚಿಂತೆ ಮಾಡದೆ ತನ್ನ ಮಾಲಿಕನ ಜೀವಕ್ಕೆ ಅಪಾಯ ಬರದಂತೆ ನೋಡಿಕೊಳ್ಳುತ್ತವೆ.

ಸೋಶಿಯಲ್ ಮೀಡಿಯಾದಲ್ಲಿ ಪ್ರಾಣಿಗಳ ಜೊತೆಗಿನ ಅನೇಕ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇದೇ ರೀತಿಯ ಒಂದು ವಿಡಿಯೋ ನಿಮಗಾಗಿ ಇಲ್ಲಿ ತಂದಿದ್ದೇವೆ. ಈ ವಿಡಿಯೋವನ್ನು ಇಲ್ಲಿಯವರೆಗೆ 85 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ.

ವಿಡಿಯೋದಲ್ಲಿ ಹುಡುಗಿಯೊಬ್ಬಳು ಡಾಲ್ಫಿನ್ ಜೊತೆಗೆ ಆಟ ಆಡುತ್ತಿದ್ದಾಳೆ. ಆ ಸಂದರ್ಭದಲ್ಲಿ ಆಕೆಯ ಮೊಬೈಲ್ ಆಕಸ್ಮಿಕವಾಗಿ ನೀರು ಪಾಲಾಗುತ್ತದೆ. ಸ್ವಲ್ಪ ಸಮಯದಲ್ಲಿ ಡಾಲ್ಫಿನ್ ಆಕೆಯ ಮೊಬೈಲನ್ನು ತನ್ನ ಬಾಯಿಯಲ್ಲಿ ಹಿಡಿದುಕೊಂಡು ನೀರಿನಲ್ಲಿಂದ ಮೇಲೆ ಬಂದು ಪುನ: ಆಕೆಗೆ ಕೊಡುತ್ತದೆ. ಈ ದೃಶ್ಯವು ನೋಡಲು ತುಂಬಾ ಸುಂದರ ಹಾಗೂ ಸೊಗಸಾಗಿದೆ.

ವಿಡಿಯೋ ನೋಡಿ

ಆದ್ದರಿಂದಲೇ ಹೇಳುವುದು ಎಲ್ಲರೂ ಈ ಡಾಲ್ಫಿನ್ ತರ ಇದ್ದರೆ ಯಾರ ಮೊಬೈಲ್ ಸಹ ಕಳೆಯುತ್ತಿರಲಿಲ್ಲ. ಏಕೆಂದರೆ ಕಳೆದ ಮೊಬೈಲ್ ಬೇಗನೆ ಸಿಗುತ್ತಿತ್ತು. ಅಲ್ವಾ?