ಕೈ-ಕಾಲು ಉಪಯೋಗಿಸದೆ ಸರಸರನೆ ಮರ ಹತ್ತಿದ: ಈ ವ್ಯಕ್ತಿಯ jugaada video ನೋಡಿ ಬೆಚ್ಚಿಬಿದ್ದ ನೆಟ್ಟಿಗರು……!!

ಮರವನ್ನು ಹತ್ತುವದು ಅಂದರೆ ನಮ್ಮ ಕೈ ಕಾಲುಗಳ ಉಪಯೋಗ ಮಾಡಲೇ ಬೇಕು. ಆದರೆ ಕೈ ಕಾಲುಗಳ ಉಪಯೋಗ ಮಾಡದೆ ಮರವನ್ನು ಹತ್ತಿದ್ದಾನೆ ಎಂದರೆ ಸಹಜವಾಗಿ ಎಲ್ಲರೂ ಆಶ್ಚ#ರ್ಯ ಪಡುವ ಸಂಗತಿಯಾಗಿದೆ. ಇದು ಅಸಾಧ್ಯವಾದದು ಎಂದು ಸಹ ಹೇಳುತ್ತಾರೆ. ಆದರೆ ನಮಗೇ ಅಸಾಧ್ಯವೆಂದು ಅನಿಸುವ ಈ ವಿಷಯ ಸರಳವಾಗಿ ಸಾಧ್ಯ ಮಾಡಿ ತೋರಿಸಿದ್ದಾನೆ ಈ ವ್ಯಕ್ತಿ. ಈ ವ್ಯಕ್ತಿಯ ವಿಡಿಯೋ ನೋಡಿ ಎಲ್ಲರೂ ಬೆಚ್ಚಿಬೀಳುತ್ತಿದ್ದಾರೆ.

ಒಬ್ಬ ವ್ಯಕ್ತಿ ತನ್ನ ಕೈ-ಕಾಲುಗಳ ಉಪಯೋಗ ಮಾಡದೆ ಅಂದರೆ ತನ್ನ ಕೈ ಕಾಲುಗಳನ್ನು ಮರಕ್ಕೆ ಸ್ಪರ್ಶ ಮಾಡದೆ ಸರಸರನೆ ಮರವನ್ನು ಹತ್ತಿದ್ದಾನೆ. ಆತನು ಮರವನ್ನು ಹತ್ತಿದ ಮತ್ತು ಇಳಿದ ವೇಗ ನೋಡಿ ಎಲ್ಲರೂ ಆ#ಶ್ಚರ್ಯ ಪಡುತ್ತಿದ್ದಾರೆ. ಈ ರೀತಿಯಾಗಿ ಮರವನ್ನು ಹೇಗೆ ಹತ್ತಿದ್ದಾನೆ ಎಂಬ ಪ್ರಶ್ನೆ ನಿಮ್ಮ ಮನದಲ್ಲಿ ಸದ್ಯಕ್ಕೆ ಮೂಡಿರಬಹುದು ಅಲ್ಲದೆ ಈತ ಮರ ಹತ್ತಿದ ವೀಡಿಯೋ ನೋಡಲು ಉತ್ಸುಕತೆ ಸಹ ನಿಮ್ಮಲ್ಲಿ ನಿರ್ಮಾಣವಾಗಿರಬಹುದು.

ಪ್ರಸ್ತುತ ವೀಡಿಯೋದಲ್ಲಿ ನೀವು ನೋಡಬಹುದು. ಒಬ್ಬ ವ್ಯಕ್ತಿ ಎತ್ತರವಾದ ಮರದ ಕೆಳಗೆ ನಿಂತಿದ್ದಾನೆ. ಆತನ ಕೈಯಲ್ಲಿ ಒಂದು ಮಷಿನ್ ಇದೆ. ಮರದ ಬುಡಕ್ಕೆ ಆ ಮಷಿನ್ ತಾಗಿಸುತ್ತಾನೆ. ತದನಂತರ ಆ ಮಷಿನ್ ಮೇಲೆ ಕುಳಿತುಕೊಳ್ಳುತ್ತಾನೆ. ಮಷಿನ್ ಕೆಳಗಡೆ ತನ್ನ ಎರಡು ಕಾಲುಗಳನ್ನು ಇಡುತ್ತಾನೆ ಮತ್ತು ತನ್ನ ಕೈಗಳಿಂದ ಎರಡು ಹ್ಯಾಂಡಲ್ ಹಿಡಿಯುತ್ತಾನೆ. ನಂತರ ಮಷಿನ್ ನಡೆಸುತ್ತಾ ಆತ ಮರವನ್ನು ಹತ್ತುತ್ತಾನೆ. ರಸ್ತೆಯ ಮೇಲೆ ಹೇಗೆ ನಾವು ಬೈಕ್ ನಡೆಸುತ್ತೇವೆಯೋ ಹಾಗೆ ಈತ ಮರದ ಮೇಲೆ ಮಷಿನ್ ನಡೆಸುತ್ತಾನೆ.

ಕೆಲವೇ ಸೆಕೆಂಡ್ ಗಳಲ್ಲಿ ಆತ ಎತ್ತರದ ಮರವನ್ನು ಹತ್ತುತ್ತಾನೆ ಮತ್ತು ಕೆಳಗೆ ಸಹ ಬರುತ್ತಾನೆ. ಕೈ ಕಾಲು ಸ್ಪರ್ಶ ಮಾಡದೆ ಮರವನ್ನು ಹತ್ತುವದು ಅಷ್ಟೊಂದು ಸರಳವಾದದಲ್ಲ. ಆದರೆ ಈ ಮಷಿನ್ ಮುಖಾಂತರ ನಾವು ಸಹಜವಾಗಿ ಮರವನ್ನು ಹತ್ತಬಹುದು.

ವಿಡಿಯೋ ನೋಡಿ

ಜುಗಾಡ್ ಲೈಫ್ ಹ್ಯಾಕ್ ಎಂಬ ಹೆಸರಿನ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ಈ ವಿಡಿಯೋ ಶೇರ್ ಮಾಡಲಾಗಿದೆ. ದೇಶಿ ಸ್ಟೈಲ್ ನಲ್ಲಿ ಮರ ಹತ್ತುವ ಟೆಕ್ನೋಲೊಜಿ ಅಂತ ಕ್ಯಾಪ್ಶನ್ ನೀಡಲಾಗಿದೆ. ಕರ್ನಾಟಕ,ಗೋವಾಗಳಲ್ಲಿ ಹೆಚ್ಚಾಗಿ ಈ ಯಂತ್ರದ ಉಪಯೋಗ ಮಾಡಲಾಗುತ್ತದೆ ಎಂಬ ಮಾಹಿತಿ ಸಹ ಈ ಪೋಸ್ಟ್ ನಲ್ಲಿ ನೀಡಲಾಗಿದೆ.