ಫೋಟೋ ಝೂಮ್ ಮಾಡಿ ನೋಡಬಹುದು…ನಿಮ್ಮ ಕಣ್ಣುಗಳಿಗಿದೆ ಮತ್ತೊಂದು ಚಾಲೆಂಜ್! ಹೇಳಬಲ್ಲಿರಾ ಇಲ್ಲಿ ಯಾವ ವಿಶೇಷತೆ ಅಡಗಿದೆ ಅಂತ?

ಸೋಶಿಯಲ್ ಮೀಡಿಯಾ ಇದು ಜಗತ್ತಿನಲ್ಲಿಯ ಏನಾದರೊಂದು ಹೊಸದನ್ನು ತಿಳಿಸುವ, ತೋರಿಸುವ, ವಿವಿಧ ಜ್ಞಾನ ನೀಡುವ ಹಾಗೂ ಅದರ ಜೊತೆಗೆ ನಮ್ಮಲ್ಲಿರುವ ಜ್ಞಾನಕ್ಕೆ ಸಾಣೆ ಹಚ್ಚುವ ಕೆಲಸ ಅದ್ಭುತವಾಗಿ ಮಾಡುತ್ತದೆ.

ಈ ಪ್ಲಾಟ್ ಫಾರ್ಮ್ ನಲ್ಲಿ ದಿನನಿತ್ಯ ಅನೇಕ ಫೋಟೋ ಮತ್ತು ವಿಡಿಯೋಗಳು ವೈರಲ್ ಆಗುತ್ತವೆ. ಅವುಗಳಲ್ಲಿ ಕೆಲವಂತೂ ತುಂಬಾ ಮೋಜಿನ, ಇನ್ನು ಕೆಲವು ಚಿಂತನೆಗೆ ಈಡು ಮಾಡುವ ಹಾಗೂ ಇನ್ನು ಕೆಲವು ನಮ್ಮ ಬುದ್ಧಿಶಕ್ತಿಯನ್ನು ಪರೀಕ್ಷಿಸುವ ಹಾಗೂ ಕೆಲವು ನಮ್ಮ ಕಣ್ಣುಗಳಲ್ಲಿಯ ತೀಕ್ಷ್ಣತೆಯನ್ನು ಪರೀಕ್ಷಿಸುವ ಫೋಟೋಗಳು ಅಥವಾ ವಿಡಿಯೋ ಆಗಿರುತ್ತವೆ.

ಇಂದು ನಿಮಗಾಗಿ ತಂದಿರುವ ಈ ಫೋಟೋ ಸಹ ನಿಮ್ಮ ಕಣ್ಣುಗಳಿಗೆ ಒಂದು ಚಾಲೆಂಜ್ ಆಗಿದೆ. ಏಕೆಂದರೆ ಈ ಫೋಟೋವನ್ನು ಇಲ್ಲಿಯವರೆಗೆ ನೀವು ನೊಡಿಲ್ಲ. ಇದು ತುಂಬಾ ಹೊಸದಾದ ಫೋಟೋ ಆಗಿದೆ.

ಈ ಫೋಟೋ ನೋಡಿದಾಗ ಒಂದು ಆಫೀಸ್ ನಲ್ಲಿಂದ ಕ್ಲಿಕ್ ಮಾಡಿದ್ದಾಗಿದೆ ಎಂಬುದು ತಿಳಿದು ಬರುತ್ತದೆ. ಪ್ರಸ್ತುತ ಫೋಟೋ ನೋಡಿದಾಗ ಇದರಲ್ಲಿ ಪೇಪರ್ ಫೈಲ್ ಗಳ ಹೊರತಾಗಿ ಬೇರೇನೂ ನಮ್ಮ ಕಣ್ಣಿಗೆ ಕಂಡು ಬರುವದಿಲ್ಲ. ಆದರೆ ಸೂಕ್ಷ್ಮವಾಗಿ ನೋಡುವವರ ಕಣ್ಣಿಗೆ ಇದರಲ್ಲಿ ಒಂದು ವಿಶೇಷತೆ ಮಾತ್ರ ನಿಶ್ಚಿತವಾಗಿಯೂ ಕಂಡು ಬರುತ್ತದೆ.

ಏನಂತೀರಾ?

ಈ ಫೋಟೋದಲ್ಲಿ ಸಹಜವಾಗಿ ನೋಡಿದಾಗ ಯಾವ ಪ್ರಾಣಿ ಅಥವಾ ಯಾವ ಜೀವಿಯೂ ಇಲ್ಲಿ ಕಾಣುವದಿಲ್ಲ. ಆದರೆ ಸ್ವಲ್ಪ ಗಮನವಹಿಸಿ ಕೆಳಗಿರುವ ಎರಡನೆಯ ರ್ಯಾಕ್ ನಲ್ಲಿ ಸೂಕ್ಷ್ಮವಾಗಿ ನೋಡಿದಾಗ ಅಲ್ಲಿ ಒಂದು ಬೆಕ್ಕು ಕುಳಿತಿರುವುದು ಸ್ಪಷ್ಟವಾಗಿ ಕಣ್ಣಿಗೆ ಗೋಚರಿಸುವುದು. ಈಗಲಾದರೂ ನಿಮ್ಮ ಕಣ್ಣಿಗೆ ಸಿಕ್ಕಿತಾ? ಕೆಳಗಿನ ರ್ಯಾಕ್ ನಲ್ಲಿ ಕಪ್ಪು ಮತ್ತು ಬಿಳಿಯ ಬಣ್ಣದ ಮುಖ ಹೊತ್ತು ಕುಳಿತಿರುವ ಈ ಬೆಕ್ಕು? ಹಾಗಾದರೆ ಹೇಳಿ ನೋಡೋಣ ನಿಮ್ಮ ಕಾಮೆಂಟ್ ನಲ್ಲಿ.