ಭಾರತ-ಚೀನಾ ಯುದ್ಧವಾದಲ್ಲಿ ಚೀನಾಗೆ ದೊರೆಯಬಹುದು ಈ ದೇಶಗಳ ಬೆಂಬಲ! ಭಾರತಕ್ಕಿದೆ ದೊಡ್ಡ ಅಪಾಯ!
ವರ್ತಮಾನ ಸ್ಥಿತಿಯಲ್ಲಿ ಭಾರತ ಮತ್ತು ಚೀನಾದ ಮದ್ಯೆ ಸೀಮೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಯಾವಾಗ ಬೇಕಾದರೂ ಯುದ್ಧ ಪ್ರಾರಂಭವಾಗುವ ಪರಿಸ್ಥಿತಿ ಇದೆ. ಆದರೆ ಎಲ್ಲಕ್ಕೂ ದೊಡ್ಡ ಸಮಸ್ಯೆ ಏನೆಂದರೆ, ಒಂದು ವೇಳೆ ಯುದ್ಧ ನಡೆದರೆ ಚೀನಾದ ಜೊತೆಗೆ ಯಾವ ಯಾವ ರಾಷ್ಟ್ರಗಳು ಎದ್ದು ನಿಲ್ಲುವವು.
ಒಂದು ರಿಪೋರ್ಟ್ ಪ್ರಕಾರ ಭಾರತ ಮತ್ತು ಚೀನಾದ ನಡುವೆ ಯುದ್ಧವಾದರೆ ಪಾಕಿಸ್ತಾನ ಮೊದಲು ಇದರ ಲಾಭ ಪಡೆಯುವದು ಖಚಿತ, ಹಾಗೂ ಇದೆ ಅಮಯದಲ್ಲಿ ಅದು ಸಹ ಭಾರತದ ಮೇಲೆ ದಾಳಿ ಮಾಡಬಹುದು. ಈ ಸ್ಥಿತಿಯಲ್ಲಿ ಭಾರತಕ್ಕೆ ಒಂದೇ ಸಲ ಎರಡು ದೇಶಗಳ ಜೊತೆಗೆ ಯುದ್ಧ ಮಾಡಬೇಕಾಗುವ ತೊಂದರೆ ನಿರ್ಮಾಣವಾಗುವದು. ಇದು ದೇಶಕ್ಕೆ ದೊಡ್ಡ ಗಂಡಾಂತರವಾಗಿದೆ.

ಚೀನಾ ಹಾಗೂ ಪಾಕಿಸ್ತಾನದ ನಡುವೆ ಒಳ್ಳೆಯ ಮಿತ್ರತ್ವವಿದೆ. ಭಾರತದ ಜೊತೆಗೆ ಈ ಎರಡು ದೇಶಗಳ ಗಡಿವಿವಾದವಿದೆ. ಸೇನೆಯ ಪೂರ್ವ ಅಧಿಕಾರಿಗಳ ಹೇಳಿಕೆಯ ಪ್ರಕಾರ, ಭಾರತ ಒಮ್ಮೆಲೇ ಎರಡು ರಾಷ್ಟ್ರಗಳ ಜೊತೆಗೆ ಹೋರಾಟ ಮಾಡುವ ತಯಾರಿಯಲ್ಲಿರಬೇಕು.
ಮುಂಬರುವ ಸಮಯದಲ್ಲಿ ಭಾರತ ಎರಡು ಯುದ್ಧಗಳ ತಯಾರಿಯಲ್ಲಿರಬೇಕು. ಯಾಕೆಂದರೆ ಚೀನಾ ಮತ್ತು ಪಾಕಿಸ್ತಾನ ಯಾವುದೇ ಸಮಯದಲ್ಲಿ ನಮ್ಮ ಮೇಲೆ ಆಕ್ರಮಣ ಮಾಡಬಹುದಾಗಿದೆ.
ಅಷ್ಟೇ ಅಲ್ಲ, ಒಂದು ವೇಳೆ ಚೀನಾ ನಮ್ಮ ಮೇಲೆ ದಾಳಿ ಮಾಡಿದರೆ ಅದಕ್ಕೆ ತುರ್ಕಿ ಹಾಗೂ ಉತ್ತರ ಕೊರಿಯಾ ಈ ಎರಡು ದೇಶಗಳ ಬೆಂಬಲ ದೊರೆಯುತ್ತದೆ. ಯಾಕೆಂದರೆ ಈ ದೇಶಗಳ ಜೊತೆಗೆ ಭಾರತದ ಸಂಬಂಧಗಳು ಅಷ್ಟೊಂದು ಚೆನ್ನಾಗಿಲ್ಲ. ಬದಲಾಗಿ ಚೀನಾ ಈ ದೇಶಗಳಲ್ಲಿ ತನ್ನ ಸಾಮಾನುಗಳನ್ನು ಮಾರಾಟ ಮಾಡುತ್ತದೆ, ಮತ್ತು ಇವರೊಂದಿಗೆ ಸೈನ್ಯ ಸಹಯೋಗವನ್ನು ಮಾಡುತ್ತದೆ.