ವಿಜಯ್ ಮಲ್ಯ ಮತ್ತು ನೀರವ್ ಮೋದಿ ಇಬ್ಬರ ಆಸ್ತಿ ಮಾರಾಟದಿಂದ ವಸೂಲಿಯಾದ ಹಣವೆಷ್ಟು? ಲೋಕಸಭೆಯಲ್ಲಿ ಹಣಕಾಸು ಸಚಿವರು ನೀಡಿದರು ಉತ್ತರ.
ಲೋಕಸಭೆಯ ಚಳಿಗಾಲದ ಅಧಿವೇಶನದಲ್ಲಿ ಸೋಮವಾರದಂದು ಹಣಕಾಸು ಸಚಿವೆಯರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಕೊರೊನಾ ವೈರಸ್ ಹಿನ್ನಲೆಯಲ್ಲಿ ಆರ್ಥಿಕತೆಯ ಮೇಲೆ ಗಮನ ಕೇಂದ್ರೀಕರಿಸುವ ಸರ್ಕಾರದ ಬದ್ಧತೆಯನ್ನು ಪ್ರಸ್ತಾಪಿಸಿದರು.
ಇದೇ ಸಂದರ್ಭದಲ್ಲಿ ನೀರವ್ ಮೋದಿ, ಮೆಹುಲ್ ಚೋಕ್ಸಿ ಮತ್ತು ವಿಜಯ್ ಮಲ್ಯ ಇವರ ಹೆಸರಿಗೆ ಇದ್ದ ಆಸ್ತಿಯನ್ನು ಮಾರಾಟ ಮಾಡಿ ಬ್ಯಾಂಕುಗಳು ಒಟ್ಟು 13109 ಕೋಟಿ ರೂಪಾಯಿಗಳನ್ನು ವಸೂಲಿ ಮಾಡಿವೆ ಎಂದು ಕೇಂದ್ರದ ಹಣಕಾಸು ಸಚಿವರಾದ ನಿರ್ಮಲ ಸೀತಾರಾಮನ್ ಅವರು ಲೋಕಸಭೆಯ ಚಳಿಗಾಲದ ಅಧಿವೇಶನದಲ್ಲಿ ಮಾಹಿತಿ ನೀಡಿದರು. ಹಾಗೆಯೇ ಸಾರ್ವಜನಿಕ ವಲಯದ ಬ್ಯಾಂಕುಗಳು ಕಳೆದ ಏಳು ವರ್ಷಗಳಲ್ಲಿ ಸೆಟಲ್ಮೆಂಟ್ ಮತ್ತು ಇತರ ಮಾಧ್ಯಮಗಳಿಂದ 5.49 ಲಕ್ಷ ಕೋಟಿ ರೂಪಾಯಿಗಳನ್ನು ವಸೂಲಿ ಮಾಡಿದೆ. ಏತನ್ಮಧ್ಯೆ ದೇಶದಲ್ಲಿಯ ಅನೇಕ ಬ್ಯಾಂಕುಗಳಿಂದ ಸಾವಿರಾರು ಕೋಟಿ ರೂಪಾಯಿಗಳ ಮೋಸ ಮಾಡಿ ಓಡಿ ಹೋದ ಉದ್ಯಮಿ ವಿಜಯಮಲ್ಯ ಮತ್ತು ವಜ್ರದ ವ್ಯಾಪಾರಿ ನೀರವ್ ಮೋದಿ ಇವರಿಬ್ಬರಿಂದ ಇಲ್ಲಿಯವರೆಗೆ 13 ಸಾವಿರ 109 ಕೋಟಿ ರೂಪಾಯಿಗಳನ್ನು ವಸೂಲಿ ಮಾಡಲಾಗಿದೆ. ತಲೆಮರೆಸಿಕೊಂಡಿರುವ ಈ ಇಬ್ಬರು ಸಾಲಗಾರರ ಆಸ್ತಿಯನ್ನು ಮಾರಾಟ ಮಾಡಿ ಬ್ಯಾಂಕುಗಳು ಇಲ್ಲಿಯವರೆಗೆ ಈ ಹಣವನ್ನು ವಸೂಲಿ ಮಾಡಿದ್ದಾರೆ ಎಂದು ಹಣಕಾಸು ಸಚಿವೆ ಈ ಮಾಹಿತಿಯನ್ನು ಅಧಿಕೃತವಾಗಿ ನೀಡಿದ್ದಾರೆ.
ವಿಜಯ ಮಲ್ಯ ಅವರ ಮೇಲೆ ಅನೇಕ ಬ್ಯಾಂಕ್ ಗಳ ಒಟ್ಟು 9000 ಕೋಟಿ ರೂಪಾಯಿಗಳ ಸಾಲ ವಂಚನೆಯ ಆರೋಪವಿದೆ. ಇನ್ನು ನೀರವ್ ಮೋದಿ ಹಾಗೂ ಅವರ ಸಂಬಂಧಿಕರಾದ ಮೇಹುಲ್ ಚೊಕ್ಸಿ ಪಿಎನ್ ಬಿ ಸಹ ಅನೇಕ ಬ್ಯಾಂಕ್ ಗಳ ಒಟ್ಟು 13000 ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚಿಗೆ ವಂಚನೆ ಮಾಡಿದ್ದಾರೆ.