83 ರಲ್ಲಿ ವರ್ಲ್ಡ್ ಕಪ್ ಗೆದ್ದ ಲಿಜೆಂಡ್ ಗಳು 38 ವರ್ಷಗಳ ನಂತರ ಜೊತೆ ಜೊತೆಯಲ್ಲಿ ಹೇಗೆ ಕಾಣಿಸುತ್ತಿದ್ದಾರೆ ಒಮ್ಮೆ ನೋಡಿ ಈ ವಿಡಿಯೋದಲ್ಲಿ…

ಭಾರತದಲ್ಲಿ ಕ್ರಿಕೆಟ್ ಆಟಕ್ಕೆ ಇರುವ ಮಹತ್ವ ಮತ್ತು ಜನಪ್ರಿಯತೆ ಬೇರೆ ಯಾವ ಆಟಕ್ಕೂ ಇಲ್ಲವೆಂದೇ ಹೇಳಬಹುದು. ಏಕೆಂದರೆ ಭಾರತ 1983 ರಲ್ಲಿ ವರ್ಲ್ಡ್ ಕಪ್ ಗೆದ್ದ ನಂತರ ಕ್ರಿಕೆಟ್ ಆಟಕ್ಕೆ ತುಂಬಾ ಮಹತ್ವ ಬಂದಿತು. ಹೀಗಾಗಿ ಈ ಆಟವು ಭಾರತದಲ್ಲಿ ದಿನದಿಂದ ದಿನಕ್ಕೆ ಪ್ರಸಿದ್ಧಿ ಪಡೆಯಲು ಹಾಗೂ ಬೆಳೆಯಲು ಅನುಕೂಲವಾಯಿತು.

ಈಗ ಸದ್ಯದಲ್ಲೇ 1983 ರ ವರ್ಲ್ಡ್ ಕಪ್ ಐತಿಹಾಸಿಕ ವಿಜಯದ ಮೇಲೆ ಆಧಾರಿತವಾದ ಬಾಲಿವುಡ್ ಫಿಲಂ ’83’ ಈ ಚಿತ್ರವು ಶುಕ್ರವಾರ ಡಿಸೆಂಬರ್ 24 ರಂದು ತೆರೆ ಕಾಣಲಿದೆ. ಈ ಚಿತ್ರವು ಭಾರತಕ್ಕೆ ಮೊದಲ ವರ್ಲ್ಡ್ ಕಪ್ ಗೆಲ್ಲಿಸಿ ಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಮಾಜಿ ನಾಯಕ ಕಪಿಲ್ ದೇವ್ ಅವರ ಜೀವನದ ಮೇಲೆ ಆಧಾರಿತವಾಗಿದೆ.

ಈ ಚಿತ್ರದಲ್ಲಿ ಕಪಿಲ್ ದೇವ್ ಅವರ ರೋಲ್ ನಲ್ಲಿ ಬಾಲಿವುಡ್ ನ ಡ್ಯಾಶಿಂಗ್ ನಟ ರಣವೀರ್ ಸಿಂಗ್ ಕಾಣಿಸಿಕೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ’83’ ರಲ್ಲಿ ವರ್ಲ್ಡ್ ಕಪ್ ಗೆದ್ದ ತಂಡದಲ್ಲಿಯ ಆಟಗಾರರನ್ನು ಒಂದು ಕಾರ್ಯಕ್ರಮಕ್ಕೆ ಆಮಂತ್ರಿಸಲಾಗಿತ್ತು. ಅದೇ ಸಂದರ್ಭದಲ್ಲಿಯ ವಿಡಿಯೋ ಒಂದು ಯುಟ್ಯೂಬ್ ನಲ್ಲಿ ಅಪ್ಲೋಡ್ ಮಾಡಲಾಗಿದೆ.

ಭಾರತ ಈ ಐತಿಹಾಸಿಕ ಸಾಧನೆ ಮಾಡಿ 38 ವರ್ಷಗಳೇ ಕಳೆದವು. ಈ ಸಾಧನೆಗೆ ಕಾರಣರಾದ ಆಗಿನ ಟೀಮ್ ಇಂಡಿಯಾ ಆಟಗಾರರು 38 ವರ್ಷಗಳ ನಂತರ ಹೇಗೆ ಕಾಣುತ್ತಿದ್ದಾರೆ ಎಂಬ ಉತ್ಸುಕತೆ ನಿಮಗಿರಬಹುದು, ಅಲ್ವಾ?

ಹಾಗಾದರೆ ನೋಡಿ ಈ ವಿಡಿಯೋದಲ್ಲಿ…