Video: ದೇಶದ ಯೋಧನಾಗಿ ಮೊದಲನೆಯ ಬಾರಿ ಮನೆಗೆ ಬಂದ, ಮಗನನ್ನು ಕಂಡು ತಾಯಿ-ತಂದೆಯರ ಪ್ರತಿಕ್ರಿಯೆ ಹೇಗಿತ್ತು ನೋಡಿ!!!!

ನಮ್ಮ ದೇಶದ ಯೋಧರನ್ನು ಕಂಡರೆ ಸಾಕು ದೇಶದ ಪ್ರತಿಯೋಬ್ಬರು ಸೆಲ್ಯೂಟ್ ಹೊಡೆಯಲೇ ಬೇಕು. ಏಕೆಂದರೆ ತಮ್ಮ ಜೀವವನ್ನು ಮುಡಿಪಾಗಿಟ್ಟು ನಮ್ಮನ್ನು ರಕ್ಷಣೆ ಮಾಡುತ್ತಾರೆ. ಇಂದು ನಾವೆಲ್ಲ ಮನೆಯಲ್ಲಿ ಅಥವಾ ಹೊರಗಡೆ ನಿಸ್ಸಂಕೋಚವಾಗಿ ತಿರುಗಾಡಲು ಮುಖ್ಯ ಕಾರಣವೇ ನಮ್ಮ ದೇಶದ ಯೋಧರು. ನಮ್ಮ ದೇಶದ ಪ್ರತಿಯೊಬ್ಬ ನಾಗರಿಕರನ್ನು ಸುರಕ್ಷಿತವಾಗಿ ಕಾಪಾಡುವದು ಅವರ ಆದ್ಯ ಕರ್ತವ್ಯವಾಗಿದೆ. ದೇಶದ ಯೋಧರು ನಮಗಾಗಿ ಪಡುವ ಕಷ್ಟವನ್ನು ಕಂಡರೆ ನಿಜವಾಗಿ ಅವರೇ ದೇಶದ ರಕ್ಷಕರು. ಆದರೆ ಕೆಲವೊಮ್ಮೆ ರಕ್ಷಣೆ ಮಾಡುವ ಸಂದರ್ಭದಲ್ಲಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ದೇಶಕ್ಕಾಗಿ ಬ#ಲಿದಾನವಾಗುತ್ತಾರೆ ಹೊರೆತು ನಮ್ಮ ದೇಶದ ಶತ್ರುಗಳನ್ನು ಒಳಗಡೆ ಬರಲು ಬಿಡುವದಿಲ್ಲ.

ನಾವೆಲ್ಲ ಆಗಾಗ್ಗೆ ಕೇಳುತ್ತೆವೇ ನಮ್ಮ ದೇಶದ ರಕ್ಷಣಾ ಕಾರ್ಯದಲ್ಲಿ ಯೋಧ ಮಡಿದ ಅಂತ. ಆದರೆ ಆತನ ಸುದ್ದಿ ಕೇಳಿ ನಮಗೆ ಎಷ್ಟೋ ದುಃಖವಾಗುತ್ತೆ ಅಂತಹದರಲ್ಲಿ ಅವರ ಕುಟುಂಬದವರು ಎಷ್ಟೊಂದು ದುಃಖ ಪಡುತ್ತಿರಬಹುದು ಅನ್ನೋ ವಿಚಾರ ಮಾಡಿದರೆ ಕಣ್ಣಲ್ಲಿ ನೀರು ಬರುತ್ತೆ. ಕೆಲವು ದಿನಗಳ ಹಿಂದೆ ಜನರಲ್ ಬಿಪಿನ್ ರಾವತ್ ಹಾಗೂ ಅವರ ಪತ್ನಿಯೊಂದಿಗೆ ಹಲವಾರು ಯೋಧರು ಹೆಲಿಕ್ಯಾಪ್ಟರ್ ದುರಂತದಲ್ಲಿ ಅ#ಸುನೀಗಿದರು. ಅವರ ಸುದ್ದಿ ಕೇಳಿ ಇಡೀ ದೇಶವೇ ದುಃಖದಲ್ಲಿ ಮುಳುಗಿತ್ತು ಅಂತಹ ನಿಷ್ಠಾವಂತ ಎಷ್ಟೋ ಅಧಿಕಾರಿಗಳು ನಮ್ಮ ದೇಶದ ಸಲುವಾಗಿ ತಮ್ಮ ಪ್ರಾಣ ಬಲಿದಾನ ನೀಡಿದ್ದಾರೆ.

ಯೋಧರ ಕುರಿತು ಅದೆಷ್ಟೇ ಹೇಳಿದರು ಸಾಲದು. ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಈ ವಿಡಿಯೋ ಒಬ್ಬ ಯೋಧನ ವಿಡಿಯೋ ಆಗಿದ್ದು. ವಿಡಿಯೋದಲ್ಲಿ ಯೋಧನ ಕಂಡು ತಂದೆ ತಾಯಿಯರು ಪಟ್ಟ ಖುಷಿ ಹಾಗೂ ಮಗನ ಮೇಲಿನ ಪ್ರೀತಿ ಇವೆಲ್ಲ ಈ ವಿಡಿಯೋದಲ್ಲಿ ಕಾಣಬಹುದು. ಪ್ರಸ್ತುತ ವಿಡಿಯೋದಲ್ಲಿ ಒಬ್ಬ ಯುವಕ ದೇಶದ ಸಲುವಾಗಿ ಯೋಧನಾದ ಮೇಲೆ ತನ್ನ ಕರ್ತವ್ಯ ನಿಭಾಯಿಸಲು ದೇಶದ ಗಡಿಯಾಚಿಗೆ ಹೋಗುತ್ತಾನೆ. ತದನಂತರ ಕೆಲವು ತಿಂಗಳಿನ ನಂತರ ಮೊದಲನೆಯ ಬಾರಿ ಅಂದರೆ ಯೋಧನಾದ ನಂತರ ಮೊದಲನೆಯ ಬಾರಿ ತನ್ನ ಮನೆಗೆ ಬರುವದನ್ನು ತನ್ನ ತಂದೆ ತಾಯಿಗಳಿಗೆ ಹೇಳುತ್ತಾನೆ.

ಮೊದಲನೆಯ ಬಾರಿ ತನ್ನ ಮಗ ಮನೆಗೆ ಬರುತ್ತಿದ್ದಾನೆ ಅಂದು ಭಾವಿಸಿ ಆ ದಂಪತಿಗಳು ಮಗನ ಸ್ವಾಗತ ವಿಭಿನ್ನವಾಗಿ ಮಾಡಬೇಕು ಎಂದು ನಿರ್ಧಾರ ಮಾಡುತ್ತಾರೆ. ಅವರು ಮನೆಯ ಮುಂದೆ ಶೃಂಗಾರ ಮಾಡುತ್ತಾರೆ ಅಂದರೆ ಬಲೂನ್ ಗಳಿಂದ ಅಲಂಕಾರ ಮಾಡಿ ಅಂಗಳಲ್ಲಿ ಹೂವಿನಿಂದ ಹಾಸಿಗೆ ಮಾಡುತ್ತಾರೆ. ಮೊದಲನೆಯ ಬಾರಿ ಸಮವಸ್ತ್ರದಲ್ಲಿ ಬಂದ ಯೋಧ ಇದನ್ನು ಕಂಡು ತುಂಬಾ ಖುಷಿಯಾಗುತ್ತಾನೆ. ಮನೆಯ ಮುಂಭಾಗದಿಂದ ತನ್ನ ತಂದೆ ತಾಯಿಯವರೆಗೆ ಪರೇಡ್ ತರಹ ನಡೆಯುತ್ತ ತಂದೆ ತಾಯಿಯರ ಮುಂದೆ ನಿಂತು ಸೆಲ್ಯೂಟ್ ಹೊಡೆಯುತ್ತಾನೆ. ಈ ದೃಶ್ಯ ನೋಡಿದರೆ ಪ್ರತಿಯೊಬ್ಬರು ಹೆಮ್ಮೆ ಪಡಲೇಬೇಕು.

ನೀವು ಸಹ ಈ ವಿಡಿಯೋ ನೋಡಿ..

ಪ್ರಸ್ತುತ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದ್ದು ಇದುವರೆಗೆ 20 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. ಅಲ್ಲದೆ ಎಂಟು ಸಾವಿರಕ್ಕೂ ಹೆಚ್ಚು ಲೈಕ್ಸ್ ಸಹ ನೀಡಿದ್ದಾರೆ. ದೇಶದ ಯೋಧನ ಕುರಿತು ಹಲವಾರು ಕಾಮೆಂಟ್ ಸಹ ಬರೆದಿದ್ದಾರೆ. ನಿಮಗೂ ಸಹ ನಮ್ಮ ದೇಶದ ಯೋಧನ ಮೇಲೆ ತುಂಬಾ ಪ್ರೀತಿ ಇದ್ದರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ. ಜೈ ಹಿಂದ್ ಜೈ ಭಾರತ್!