‘ಆ ಜುಗಾಡ್ ಜೀಪ್ ನನಗೆ ಕೊಡು ಬದಲಾಗಿ ನಾನು ನಿನಗೆ…”: ಆನಂದ್ ಮಹಿಂದ್ರಾ ಕಡೆಯಿಂದ ‘ರಾಂಚೊ’ ಅವರಿಗೆ ಬಂಪರ್ ಆಫರ್….!!!

ಮಹಿಂದ್ರಾ ಕಂಪನಿಯ ಮಾಲೀಕ ಆನಂದ ಮಹಿಂದ್ರಾ ನೆಟ್ಟಿಗರ ನಡುವೆ ತುಂಬಾ ಚರ್ಚೆಯಲ್ಲಿ ಇರುತ್ತಾರೆ. ಅಷ್ಟೇ ಅಲ್ಲ ಅವರು ತುಂಬಾ ಜನಪ್ರಿಯತೆಯನ್ನು ಸಹ ಪಡೆದುಕೊಂಡಿದ್ದಾರೆ. ಅವರು ತಮ್ಮ ಟ್ವಿಟ್ಟರ್ ಅಕೌಂಟ್ ಮೂಲಕ ಬೇರೆ ಬೇರೆಯಾದ ವಿಷಯದ ಆಧಾರದ ಮೇಲೆ ಮಾಡುವ ಟ್ವೀಟ್ ನಿಂದಾಗಿ ಅವರು ತುಂಬಾ ಚರ್ಚೆಯಲ್ಲಿ ಇರುವರು. ಆನಂದ್ ಅವರು ಅನೇಕ ವ್ಯಕ್ತಿಗಳ ಬೇರೆ ಬೇರೆಯಾದ ಸಾಧನೆ ಕಂಡು ಆಗಾಗ್ಗೆ ಹೋಗಳುವದು ಮತ್ತು ಅವರಿಗೆ ಪ್ರೋತ್ಸಾಹ ನೀಡುವದನ್ನು ನಾವು ನೋಡಿದ್ದೇವೆ. ಅವರು ಒಬ್ಬ ವ್ಯಕ್ತಿಗೆ ಪ್ರೋತ್ಸಾಹ ನೀಡುವಾಗ ಏನಾದ್ರೂ ಒಂದು ಆಕರ್ಷಕ ಕೊಡುಗೆ ಸಹ ನೀಡುತ್ತಾರೆ ಎಂಬುದು ನಮಗೆಲ್ಲ ತಿಳಿದ ಸಂಗತಿಯಾಗಿದೆ.

ಥ್ರಿ ಇಡಿಯಟ್ ಚಿತ್ರದಲ್ಲಿ ರಾಂಚೊ ಎಂಬ ಹೆಸರನ್ನು ಇಟ್ಟುಕೊಂಡು ಅಮೀರ್ ಖಾನ್ ಹೇಗೆ ಹೊಸ ಹೊಸ ಜುಗಾಡ್ ಮಾಡುತ್ತಿದ್ದರೋ ಅದೇ ತರಹ ಸಾಂಗ್ಲಿಯಲ್ಲಿಯ ರಾಂಚೊ ಎನ್ನುವ ವ್ಯಕ್ತಿ ಜುಗಾಡ್ ಸ್ವರೋಪದಲ್ಲಿ ಒಂದು ಮೀನಿ ಜೀಪಿನ ರಚನೆ ಮಾಡಿದ್ದಾರೆ. ಈ ಮೀನಿ ಜೀಪ ಆನಂದ ಮಹಿಂದ್ರಾ ಅವರಿಗೆ ಎಷ್ಟೊಂದು ಇಷ್ಟವಾಗಿದೆ ಎಂದರೆ ಅವರು ಈ ಜೀಪ ತನಗೆ ಕೊಡಲು ಹೇಳಿ ಬದಲಾಗಿ ಒಂದು ಆಕರ್ಷಕ ಕೊಡುಗೆ ಕೊಡುವದಾಗಿ ತಿಳಿಸಿದ್ದಾರೆ.

ಮೊದಲು ವಿಡಿಯೋ ಶೇರ್ ಮಾಡಿದರು.

ನಮ್ಮಲ್ಲಿ ಅನೇಕ ಜನರು ದ್ವಿಚಕ್ರವಾಹನಗಳನ್ನು ಕಿಕ್ ಹೊಡೆದು ಸ್ಟಾರ್ಟ್ ಮಾಡುವದನ್ನು ನೋಡಿದ್ದೇವೆ, ಆದರೆ ಕಿಕ್ ಹೊಡೆದು ಜೀಪ್ ಚಾಲು ಮಾಡುವದನ್ನು ಎಂದಾದ್ರೂ ನೋಡಿದಿರಾ. ಕೆಲವು ದಿವಸಗಳಿಂದ ಕಿಕ್ ಹೊಡೆದು ಜೀಪ್ ಚಾಲು ಮಾಡುವ ವಿಚಿತ್ರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಚರ್ಚೆಯಲ್ಲಿದೆ. ಈ ವಿಡಿಯೋ ಆನಂದ್ ಮಹಿಂದ್ರಾ ಅವರು ತಮ್ಮ ಟ್ವಿಟ್ಟರ್ ಹ್ಯಾಂಡಲ್ ಮುಖಾಂತರ ಶೇರ್ ಮಾಡುತ್ತಾ’ ಇದು ಸ್ಪಷ್ಟವಾಗಿ ಯಾವುದೇ ನಿಯಮಕ್ಕೆ ಹೊಂದಾಣಿಕೆ ಯಾಗುವದಿಲ್ಲ, ಆದರೆ ನಮ್ಮ ಜನರ ಸಾಧಾರಣ ಸ್ವಭಾವದ ಮತ್ತು ಕನಿಷ್ಠ ಕ್ಷಮತೆಯ ಕುರಿತು ನಾನು ಹೊಗಳಲು ನಾನು ಯಾವತ್ತೂ ಹಿಂಜರಿಯುವದಿಲ್ಲ. ಇಂದಿನ ಗತಿಶೀಲತೆಯೊಂದಿಗೆ ಅವರ ಹವ್ಯಾಸ ಸಹ ಆಶ್ಚ#ರ್ಯಕಾರಕ ವಾಗಿವೆ”. ಎಂದು ವಿಡಿಯೋ ಗೆ ಕ್ಯಾಪ್ಶನ್ ಸಹ ನೀಡಿದ್ದಾರೆ.

ಮಿನಿ ಜೀಪ್ ತಯಾರಕ ಯಾರು?

ಪ್ರಸ್ತುತ ವಿಡಿಯೋ ವೈರಲ್ ಆದ ನಂತರ ಮಿನಿ ಗಾಡಿ ತಯಾರಿಸಿದ ವ್ಯಕ್ತಿ ಮಹಾರಾಷ್ಟ್ರದ ಸಾಂಗ್ಲಿಯವರು ಎಂಬುದು ಬೆಳಕಿಗೆ ಬಂದಿದೆ. ಕಡಿಮೆ ಶಿಕ್ಷಣ ಪಡೆದಿರುವ ದತ್ತಾತ್ರಯ ಲೋಹರ್ ಅವರು ದ್ವಿಚಕ್ರ ವಾಹನ ಎಂಜಿನ್, ನಾಲ್ಕು ಚಕ್ರ ವಾಹನದ ಬೋನಟ್ ಮತ್ತು ರಿಕ್ಷಾ ಚಕ್ರಗಳನ್ನು ಬಳಸಿ ಸುಮಾರು 60,000 ರೂಪಾಯಿಗಳ ಖರ್ಚು ಮಾಡುವ ಮೂಲಕ ಅದ್ಭುತವಾದ ಕಿಕ್ ಸ್ಟಾರ್ಟ್ ಜೀಪ ತಯಾರು ಮಾಡಿದರು. ಸ್ವಂತ ಫ್ಯಾಬ್ರಿಕೇಶನ್ ವರ್ಕ್‌ಶಾಪ್ ಹೊಂದಿರುವ ದತ್ತಾತ್ರಯ ವಿನ್ಯಾಸಗೊಳಿಸಿದ ಈ ಜೀಪ್ ಒಂದು ಲೀಟರ್ ಪೆಟ್ರೋಲ್‌ನಲ್ಲಿ ಸುಮಾರು 40 ರಿಂದ 45 ಕಿಲೋಮೀಟರ್ ಪ್ರಯಾಣಿಸಬಹುದು. ಬಿಬಿಸಿ ಮರಾಠಿಯೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಜೀಪ್ ತಯಾರು ಮಾಡಲು ಅನೇಕ ಜನರು ಆರ್ಡರ್ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಆನಂದ್ ಮಹೀಂದ್ರಾ ಅವರ ವೀಡಿಯೋ ವೈರಲ್ ಆದ ನಂತರ, ದತ್ತಾತ್ರಯ ಅವರ ಕಾರ್ಯಗಳು ದೇಶಾದ್ಯಂತ ಚರ್ಚೆಯಾಗುತ್ತಿವೆ.

ಆನಂದ್ ಮಹಿಂದ್ರಾ ನೀಡಿದ್ದಾರೆ ಈ ಬಂಪರ್ ಆಫರ್!

ವಿಡಿಯೋ ವೈರಲ್ ಆದ ಮರುದಿನ, ಆನಂದ್ ಮಹೀಂದ್ರಾ ಟ್ವಿಟರ್‌ನಲ್ಲಿ ದತ್ತಾತ್ರಯ ಅವರಿಗೆ ಒಂದು ಬಂಪರ್ ಆಫರ್ ನೀಡಿದ್ದಾರೆ. ‘ನಿಮಯಕ್ಕೆ ಹೊಂದಿಕೆಯಾಗದ ಕಾರಣ ಸ್ಥಳೀಯ ಆಡಳಿತ ಈ ವಾಹನವನ್ನು ಇಂದು ಅಲ್ಲ ನಾಳೆ ನಿ#ಷೇಧಿಸುತ್ತದೆ. ಅದಕ್ಕಾಗಿಯೇ ನಾನು ವೈಯಕ್ತಿಕವಾಗಿ ಅವರಿಗೆ ಈ ಕಾರಿಗೆ ಬದಲಾಗಿ ಬೊಲೆರೊವನ್ನು ನೀಡುತ್ತೇನೆ. ಅವರು ನಿರ್ಮಿಸಿದ ಕಾರನ್ನು ನಮಗೆ ಸ್ಫೂರ್ತಿ ನೀಡಲು ಮಹೀಂದ್ರಾ ರಿಸರ್ಚ್ ವ್ಯಾಲಿಯಲ್ಲಿ ಸಂಗ್ರಹಿಸಲಾಗುತ್ತದೆ. ಈ ವಾಹನದ ಮೂಲಕ ನಾವು ಸಂಪನ್ಮೂಲದ ಪಾಠವನ್ನು ಕಲಿಯುತ್ತೇವೆ ಎಂದು ಆನಂದ್ ಮಹೀಂದ್ರಾ ಹೇಳಿದರು. “ನಮ್ಮ ಬಳಿ ಲಭ್ಯ ವಿರುವ ವಸ್ತುಗಳ ಉಪಯೋಗ ಮಾಡಿ ಹೊಸ ಹೊಸ ವಿಷಯಗಳನ್ನು ರಚಿಸುವುದರ ಪಾಠ ಈ ಮಿನಿ ಜೀಪ ಮೂಲಕ ಕಲಿಯುತ್ತೇವೆ” ಎಂದು ಆನಂದ್ ಮಹೀಂದ್ರ ಹೇಳಿದ್ದಾರೆ.

ಕಂಪನಿ ತಂಡ ಇಂದು ಭೇಟಿ ನೀಡಲಿದೆ.

ಏತನ್ಮಧ್ಯೆ, ದತ್ತಾತ್ರಯ ಅವರು ಆನಂದ್ ಮಹೀಂದ್ರಾ ಅವರು ನೀಡಿದ್ ಆಫರ್ ಗಾಗಿ ಧನ್ಯವಾದ ತಿಳಿಸಿದರು. ವಾಹನವನ್ನು ಪರಿಶೀಲಿಸಲು ಮಹೀಂದ್ರಾ ತಂಡವು ಗುರುವಾರ, ಡಿಸೆಂಬರ್ 23, 2021 ರಂದು ಲೋಹರ್ ಅವರ ಮನೆಗೆ ಭೇಟಿ ನೀಡಲಿದೆ ಎಂದು ತಿಳಿದುಬಂದಿದೆ.