Video: ನಮಾಜ್ ಪಠಿಸುತ್ತಿರುವ ವ್ಯಕ್ತಿ ತಕರಾರು ನೀಡುತ್ತಲೇ ಗಾಯತ್ರಿ ಮಂತ್ರ ಹೇಳಲು ಶುರು ಮಾಡಿದ ಮಾಧವನ್: ‘ಆ’ ವಿಡಿಯೋ ವೈರಲ್ ಆಗುತ್ತಿದೆ!!
ನಟ ಆರ್ ಮಾಧವನ್ ಅಭಿನಯದ ‘ಡಿಕಪಲ್ಸ್’ ಸಿರೀಜ್ ಇತ್ತೀಚೆಗೆ ನೆಟ್ಫ್ಲಿಕ್ಸ್ನಲ್ಲಿ ಪ್ರಸಾರವಾಗಿದ್ದು ತುಂಬಾ ಸುದ್ದಿಯಲ್ಲಿದೆ. ಈ ಸಿರೀಜ್ ಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ ಈ ಸಿರೀಜ್ ನ ದೃಶ್ಯವೊಂದರ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಈ ವಿಡಿಯೋದಲ್ಲಿ ಆರ್ ಮಾಧವನ್ ದೆಹಲಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ.
ಆರ್ ಮಾಧವನ್ ಮತ್ತು ಸುರ್ವೀನ್ ಚಾವ್ಲಾ ಅಭಿನಯದ ‘ಡಿಕಪಲ್ಸ್’ ಸರಣಿಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆರ್ ಮಾಧವನ್ ಈ ಸರಣಿಯಲ್ಲಿ ಆರ್ಯ ಅಯ್ಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆರ್ಯ ಒಬ್ಬ ಲೇಖಕ ನಿದ್ದು ಅವರಿಗೆ ಬೆನ್ನು ನೋವು ಇರುತ್ತದೆ. ಹಾಗಾಗಿ ವ್ಯಾಯಾಮ ಮಾಡಲು ಏಕಾಂತ ಜಾಗ ಹುಡುಕುತ್ತಿರುತ್ತಾನೆ. ದೆಹಲಿ ವಿಮಾನ ನಿಲ್ದಾಣದಲ್ಲಿ ಸ್ಥಳವನ್ನು ಹುಡುಕುತ್ತಿರುವಾಗ ಅವರು ಪ್ರಾರ್ಥನಾ ಕೋಣೆಗೆ ಆಗಮಿಸುತ್ತಾರೆ. ಆ ಸಮಯದಲ್ಲಿ ಒಬ್ಬ ವ್ಯಕ್ತಿ ಅಲ್ಲಿ ನಮಾಜ್ ಪಠಣ ಮಾಡುತ್ತಿರುವುದು ಕಾಣಿಸುತ್ತದೆ.
ವೀಡಿಯೋದಲ್ಲಿ ನೀವು ನೋಡಬಹುದು ನಮಾಜ್ ಬೀಳುತ್ತಿರುವ ವ್ಯಕ್ತಿಯ ಬದಿಗೆ ಹೋಗಿ ಆರ್ಯ ವ್ಯಾಯಾಮ ಮಾಡಲು ಶುರು ಮಾಡುತ್ತಾರೆ. ಇದನ್ನು ಕಂಡು ಆ ವ್ಯಕ್ತಿಗೆ ತುಂಬಾ ಕೋಪ ಬರುತ್ತದೆ. ‘ಇಲ್ಲಿ ವ್ಯಾಯಾಮ ಮಾಡುವದಿಲ್ಲ’ ಎಂದು ಹೇಳುತ್ತಾನೆ. ಆರ್ಯನ್ ತನ್ನ ಬೆನ್ನು ನೋವಿನ ಕುರಿತು ತಿಳಿಸುತ್ತಾನೆ ಆದರೂ ಸಹ ಆ ವ್ಯಕ್ತಿ ಕೇಳುವದಿಲ್ಲ.
ಕೊನೆಗೆ ನಮಾಜ್ ಬೀಳುವ ವ್ಯಕ್ತಿ ವಿಮಾನ ನಿಲ್ದಾಣದ ಸಿಬ್ಬಂದಿಗೆ ತಕರಾರು ಮಾಡುತ್ತಾನೆ. ‘ಈ ಕೋಣೆ ಕೇವಲ ಪ್ರಾರ್ಥನೆ ಮಾಡುವ ಸಲುವಾಗಿ ಇದೆ’ ಎಂದು ಸಿಬ್ಬಂದಿ ಆರ್ಯನ್ ಗೆ ಹೇಳುತ್ತಾನೆ ಅದನ್ನು ಕೇಳುತ್ತಲೇ ಆರ್ಯನ ಗಾಯತ್ರಿ ಮಂತ್ರ ಹೇಳಲು ಶುರು ಮಾಡುತ್ತಾನೆ. ಮಂತ್ರದ ಜೊತೆಗೆ ವ್ಯಾಯಾಮ ಸಹ ಮಾಡಲು ಶುರು ಮಾಡುತ್ತಾನೆ. ಇದನ್ನು ಕಂಡು ವ್ಯಕ್ತಿಗೆ ತುಂಬಾ ಕೋಪ ಬರುತ್ತದೆ ಆದರೆ ಏನು ಮಾಡಲು ಪರ್ಯಾಯವೇ ಇರಲಿಲ್ಲ ಏಕೆಂದರೆ ಅವರು ಸಹ ಪ್ರಾರ್ಥನೆ ಮಾಡುತ್ತಿರುತ್ತಾರೆ ಅಲ್ಲವೇ. ಹೀಗಾಗಿ ಈ ದೃಶ್ಯದ ವಿಡಿಯೋ ತುಂಬಾನೇ ವೈರಲ್ ಆಗುತ್ತಿದೆ.
ವಿಡಿಯೋ ನೋಡಿ
@ActorMadhavan 👌👌🤪 pic.twitter.com/az4EhO90gu
— Saru (@Saru27970518) December 19, 2021