Viral Video: ಹೆಬ್ಬಾವಿನ ಜೊತೆಗೆ ಮಾಡಿದ ತಮಾಷೆ ಬಿತ್ತು ದುಬಾರಿ! ವಿಡಿಯೋ ನೋಡಿದ ಮೇಲೆ ನೀವು ಸಹ…

ಮನುಷ್ಯನು ಬುದ್ಧಿ ಇದೆ ಎಂದ ಮಾತ್ರಕ್ಕೆ ನಾನೇ ಶ್ರೇಷ್ಠ, ನಾನೇ ಶಕ್ತಿಶಾಲಿ ಎಂದು ಬೀಗಿದರೆ ನಡೆಯಲ್ಲ. ಭೂಮಿಯ ಮೇಲೆ ಎಲ್ಲ ಪ್ರಾಣಿಗಳಿಗೂ ಜೀವಿಸಲು ಸಮಾನವಾದ ಹಕ್ಕಿದೆ. ಆದರೆ ಮನುಷ್ಯ ಇದನ್ನು ಮರೆತು ಎಲ್ಲ ಪ್ರಾಣಿಗಳ ಮೇಲೆ ದರ್ಬಾರು ನಡೆಸಲು ಪ್ರಯತ್ನಿಸುತ್ತಾನೆ. ಭಾವನೆಗಳು ಪ್ರತಿಯೊಂದು ಪ್ರಾಣಿಗಳಲ್ಲೂ ಕಂಡು ಬರುತ್ತವೆ. ಮನುಷ್ಯರು ನಡೆದುಕೊಳ್ಳುವ ರೀತಿಯ ಮೇಲಿಂದ ಪ್ರಾಣಿಗಳು ನಿಶ್ಚಯ ಮಾಡುತ್ತವೆ ಈ ವ್ಯಕ್ತಿಯ ಜೊತೆಗೆ ನಾನು ಹೇಗೆ ನಡೆದುಕೊಳ್ಳಬೇಕು ಎಂದು. ಪ್ರಸ್ತುತ ವಿಡಿಯೋದಲ್ಲಿ ಹೆಬ್ಬಾವು ಒಂದು ವ್ಯಕ್ತಿಗೆ ಸರಿಯಾಗಿ ಪಾಠ ಕಲಿಸಿದೆ.

ಈ ವಿಡಿಯೋದಲ್ಲಿ ದೊಡ್ಡದಾಗಿರತಕ್ಕಂಥ ಒಂದು ಹೆಬ್ಬಾವು ಇದೆ. ಅದನ್ನು ನೋಡಿದರೇನೇ ಭೀತಿಯಿಂದ ಮೈನವಿರೇಳುತ್ತದೆ. ಆ ಹಾವನ್ನು ದಷ್ಟಪುಷ್ಟವಾದ ಬಲಶಾಲಿ ಯುವಕನೊಬ್ಬ ತನ್ನ ಹೆಗಲ ಮೇಲೆ ತೆಗೆದುಕೊಂಡು ನಡೆಯುವ ಪ್ರಯತ್ನ ಮಾಡುತ್ತಾನೆ. ಆದರೆ ಹೆಬ್ಬಾವಿಗೆ ಯುವಕನ ಈ ಕೃತಿ ಸರಿ ಬಂದಂತೆ ಕಾಣುವದಿಲ್ಲ. ಆಗ ಅದು ನಿಧಾನವಾಗಿ ಆತನನ್ನು ತನ್ನ ಸುರುಳಿಯಲ್ಲಿ ಗಟ್ಟಿಯಾಗಿ ಹಿಡಿಯಲು ಪ್ರಯತ್ನಿಸಿದೆ. ಆಗ ನಿಜಕ್ಕೂ ಆತ ತನ್ನ ಜೀವ ಉಳಿಸಿಕೊಳ್ಳಲು ಒದ್ದಾಡಿದ್ದಾನೆ. ವ್ಯಕ್ತಿಯ ಅದೃಷ್ಟ ಚೆನ್ನಾಗಿತ್ತು ಜೊತೆಗಿರುವ ಇಬ್ಬರು ವ್ಯಕ್ತಿಗಳು ಹೆಬ್ಬಾವಿನ ಹಿಡಿತದಿಂದ ವ್ಯಕ್ತಿಯನ್ನು ಬಿಡಸಿಕೊಳ್ಳಲು ಸಹಾಯ ಮಾಡಿದರು. ಹೆಬ್ಬಾವಿನ ಹಿಡಿತದಿಂದ ಬಿಡಿಸಿಕೊಂಡಾಗ ಯುವಕನು ನೆಮ್ಮದಿಯ ನಿಟ್ಟುಸಿರು ಬಿಟ್ಟನು.

ವಿಡಿಯೋ ನೋಡಿ

ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ತುಂಬಾ ವೇಗದಿಂದ ಪಸರಿಸುತ್ತಿದೆ. ನೆಟ್ಟಿಗರು ಸೋಷಿಯಲ್ ಮೀಡಿಯಾದ ಅನೇಕ ಪ್ಲಾಟ್ಫಾರ್ಮ್ ಗಳಲ್ಲಿ ಪ್ರಸ್ತುತ ವಿಡಿಯೋವನ್ನು ಶೇರ್ ಮಾಡುತ್ತಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಈ ವಿಡಿಯೋವನ್ನು ಸಾವಿರಾರು ಜನರು ನೋಡಿದ್ದಾರೆ. ಇದನ್ನು ನೋಡಿದ ನೇಟಿಜನ್ಸ್ ಗಳು ಕೆಲವರು ಯುವಕನಿಗೆ ಬೈದರೆ ಇನ್ನು ಕೆಲವರು ಆತನ ಧೈರ್ಯಕ್ಕೆ ಮೆಚ್ಚುತ್ತಿದ್ದಾರೆ. ಈಗ ನೀವೇನು ಮಾಡುತ್ತೀರಿ ಹೇಳಿ! ಆತನನ್ನು ಮೆಚ್ಚುತ್ತೀರಾ? ಅಥವಾ ತರಾಟೆಗೆ ತೆಗೆದುಕೊಳ್ಳುತ್ತೀರಾ? ಕಾಮೆಂಟ್ ನಲ್ಲಿ ಉತ್ತರಿಸಿ.