ವಿವಾಹಿತ ಜೋಡಿಯ ಬೆಡ್ ರೂಮಿನಲ್ಲಿ ಇಣುಕಿ ನೋಡುತ್ತಿದ್ದ ವ್ಯಕ್ತಿಯ ಬಂಧನ!

ಮಹಾರಾಷ್ಟ್ರದ ಪುಣೆಯಲ್ಲಿ ನಾಚಿಕೆಗೊಳ್ಳುವ ಘಟನೆ ನಡೆದಿದೆ . ವ್ಯಕ್ತಿಯೊಬ್ಬ ವಿವಾಹಿತ ಜೋಡಿಯ ಬೆಡ್ ರೂಮಿನಲ್ಲಿ ಇಣುಕಿ ನೋಡುತ್ತಿರುವದನ್ನು ಗಮನಿಸಿದ ಮಹಿಳೆ ಆತನ ವಿರುದ್ಧ ದೂರು ದಾಖಲಿಸಿದ್ದಾಳೆ.

ಕೊರೊನದ ಈ ಸಂಕಟ ಸಮಯದಲ್ಲಿ ಪುಣೆಯ ಸಮೀಪದ ಪಿಂಪ್ರಿ ಚಿಂಚವಡ್ ನಲ್ಲಿ ಬೆಚ್ಚಿ ಬೀಳಿಸುವ ಈ ಘಟನೆ ವರದಿಯಾಗಿದೆ. ಪೊಲೀಸರು ವ್ಯಕ್ತಿಯೊಬ್ಬನನ್ನು, ವಿವಾಹಿತ ಜೋಡಿಯ ಬೆಡ್ ರೂಮಿನಲ್ಲಿ ಇಣುಕಿ ನೋಡಿದ ಅಪರಾಧದ ಅಡಿಯಲ್ಲಿ ಬುಧವಾರ ನಸುಕಿನಲ್ಲಿ ಬಂಧಿಸಿದ್ದಾರೆ.

ಪೊಲೀಸರು ನೀಡಿದ ಮಾಹಿತಿಯ ಪ್ರಕಾರ ದೂರು ಸಲ್ಲಿಸಿದ ಮಹಿಳೆ ಚಿಕ್ಕ ಮಕ್ಕಳ ಆರೈಕೆ ಮತ್ತು ಪಾಲನೆ ಪೋಷಣೆ ಮಾಡುವ ಕೆಲಸ ಮಾಡುತ್ತಾಳೆ. ವ್ಯಕ್ತಿಯ ವಿರುದ್ಧ ದೂರು ಸಲ್ಲಿಸಿದ ನಂತರ ಪೊಲೀಸರು ಪ್ರಪ್ರಥಮ ಆ ವ್ಯಕ್ತಿಯ ಮೊಬೈಲ್ ನ್ನು ವಶಕ್ಕೆ ಪಡೆದಿದ್ದಾರೆ. ಆತನ ಆಯ್ ಡಿ ಯ ತಪಾಸಣೆ ಮಾಡಿದ ನಂತರ ಆತನ ವಯಸ್ಸು 17 ಎಂದು ಗೊತ್ತಾಯಿತು. ಆನಂತರ ಪ್ರಸ್ತುತ ಘಟನೆಯ ಯಾವುದಾದರೂ ವಿಡಿಯೋ ರೆಕಾರ್ಡಿಂಗ್ ಏನಾದರೂ ಮಾಡಿದ್ದಾನೆಯೇ ಎಂಬ ಬಗ್ಗೆ ತನಿಖೆ ಮಾಡುತ್ತಿದ್ದೇವೆ, ಎನ್ನುವ ವಿಚಾರ ದೇಹು ರೋಡ್ ಪೊಲೀಸ್ ಠಾಣೆಯ ನಿರೀಕ್ಷಕರಾದ ಸಿ.ಎಂ.ಬೊರ್ಕರ್ ಅವರು ಹೇಳಿದರು.

ಏತನ್ಮಧ್ಯೆ, ಕಿಶೋರ ವಯಸ್ಸಿನ ಹುಡುಗನನ್ನು ತಕ್ಷಣ ಅರೆಸ್ಟ್ ಮಾಡಲಾಗಿಲ್ಲ. ಬುಧವಾರ ಮಧ್ಯರಾತ್ರಿ ಈ ಘಟನೆ ನಡೆದಿದ್ದು, ಮಹಿಳೆ ಪೊಲೀಸರಿಗೆ ಹೇಳಿದ ಪ್ರಕಾರ ಆಕೆಗೆ ರಾತ್ರಿಯಲ್ಲಿ ಕಿಟಕಿಯ ಹತ್ತಿರ ಯಾರೋ ಕಾಣಿಸಿದ ಸಂಶಯ ಮೂಡಿ ನಿಧಾನವಾಗಿ ಅಲ್ಲಿಗೆ ಹೋಗಿ ಸಮೀಪದಿಂದ ನೋಡಿದ್ದಾಳೆ. ಈ ಹುಡುಗ ಅವರ ನೆರೆಮನೆಯವನಾಗಿದ್ದು ಆತನ ಮನೆ ಅಲ್ಲಿಯೇ ಸಮೀಪದಲ್ಲಿದೆ.

ಈ ಹುಡುಗನ ವಿರುದ್ಧ ದೇಹು ರೋಡ್ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 354(b) (ಮಹಿಳೆಯನ್ನು ಚುಡಾಯಿಸುವದು ಹಾಗೂ ಅತ್ಯಾಚಾರ ಮಾಡುವ ಯತ್ನ) ಅಂತರ್ಗತ ದೂರು ದಾಖಲಿಸಲಾಗಿದೆ.