ಅದಕ್ಕೆ ಅನ್ನೋದು ಇನ್ನೊಬ್ಬರ ಕಾಪಿ ಮಾಡಬೇಡಿ ಅಂತ; ಇಲ್ಲಾಂದ್ರೆ ಆಗೋದು ಈ ವಿಡಿಯೋ ತರನೇ! ಮತ್ತು ಎಲ್ರೂ ನಗ್ತಾರೆ…

ಸೋಶಿಯಲ್ ಮೀಡಿಯಾದಲ್ಲಿ ದಿನನಿತ್ಯ ಅನೇಕ ತಮಾಷೆಯ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಅಂಥದ್ದೇ ಒಂದು ತಮಾಷೆಯ ವಿಡಿಯೋ ಒಂದು ನಿಮಗಾಗಿ ತಂದಿದ್ದೇವೆ.

ಪ್ರಸ್ತುತ ವಿಡಿಯೋದಲ್ಲಿ ಇಬ್ಬರು ಹುಡುಗಿಯರು ಮನೆಯ ಮಾಳಿಗೆಯ ಮೇಲೆ ನಿಂತು ಬಹುಶಃ ಡ್ಯಾನ್ಸ್ ಸ್ಟೆಪ್ ಪ್ರಾಕ್ಟೀಸ್ ಮಾಡುವ ಹಾಗೆ ಕಾಣುತ್ತಿದೆ. ಇದರಲ್ಲಿ ಒಬ್ಬಳು ಇನ್ನೊಬ್ಬಳಿಗೆ ಒಂದು ಸ್ಟೆಪ್ ಹಾಕಲು ಹೇಳುತ್ತಾಳೆ. ಎಡವಟ್ಟು ಆಗಿದ್ದು ಇಲ್ಲಿಯೇ.

ಏಕೆಂದರೆ ಮಳೆಯ ಕಾರಣದಿಂದ ಮಾಳಿಗೆಯ ಮೇಲೆ ನೀರು ನಿಂತಿದೆ. ಇದರ ಅಂದಾಜು ಪಾಪ ಆ ದಪ್ಪನೆಯ ಹುಡುಗಿಗೆ ಬಂದಿಲ್ಲ. ದೇಹವು ಜಾಸ್ತಿ ಭಾರ ಬೇರೆ ಇರುವುದರಿಂದ ತೆಳ್ಳನೆಯ ಹುಡುಗಿ ಹೇಳಿದ ಹಾಗೆ ಡ್ಯಾನ್ಸ್ ಸ್ಟೆಪ್ ಹಾಕಲು ಹೆಜ್ಜೆ ಇಡುತ್ತಲೇ ಆಕೆಯ ಕಾಲು ಜಾರಿ ಬ್ಯಾಲೆನ್ಸ್ ತಪ್ಪಿ ಡಮಾರ್ ಎಂದು ಬಿದ್ದು ಬಿಟ್ಟಿದ್ದಾಳೆ. ಪ್ರಸ್ತುತ ವಿಡಿಯೋ ವೈಸ್ ಓವರ್ ನಿಂದ ಮತ್ತಷ್ಟು ತಮಾಷೆ ಎನಿಸಿದೆ.

ಅದಕ್ಕೆ ಹೇಳುವದು ಒಬ್ಬರಿಗೆ ಒಂದು ಸಾಧ್ಯ ಎಂದರೆ ಅದು ಬೇರೆಯವರಿಗೂ ಅಥವಾ ನಮಗೂ ಸಾಧ್ಯವಾಗುತ್ತದೆ ಎಂದು ತಿಳಿಯಬೇಡಿ ಮತ್ತು ಥಟ್ಟನೆ ಇನ್ನೊಬ್ಬರ ನಕಲು ಮಾಡಲು ಹೋಗಬೇಡಿ, ಅಲ್ವಾ? ಕೆಲವು ಸಲ ನಮಗೆ ನಾವೇ ನಗೆಪಾಟಲಿಗೆ ಈಡಾಗಬೇಕಾಗುತ್ತದೆ.

ವೀಡಿಯೋ ನೋಡಿ

ಈ ವೀಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ preeti_ligi_sru ಹೆಸರಿನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ 16 ಲಕ್ಷಕ್ಕೂ ಮೇಲ್ಪಟ್ಟು ಜನರು ನೋಡಿದ್ದಾರೆ ಮತ್ತು ವಿಧವಿಧವಾದ ಕಮೆಂಟ್ಗಳನ್ನು ಮಾಡಿದ್ದಾರೆ.