ಬೈಕ್ ತೆಗೆದುಕೊಂಡು ನೇರ ನದಿಯಲ್ಲಿಯೇ ಪ್ರವೇಶ… ಯುವಕನಿಗಾದ ಫಜೀತಿ ನೋಡಿ ಹಣೆ ಹಣೆ ಬಡಿದುಕೊಳ್ಳುವಿರಿ; ನೋಡಿ ವೈರಲ್ ವಿಡಿಯೋ!
ಸೋಶಿಯಲ್ ಮೀಡಿಯಾದಲ್ಲಿ ಅನೇಕ ಜಾಣವಂತರ ಜಾಣತನದ ವಿಡಿಯೋಗಳು ತುಂಬಾ ವೈರಲ್ ಆಗುತ್ತಿರುತ್ತವೆ. ಅವರ ಜಾಣತನಕ್ಕೆ ನಿಜಕ್ಕೂ ಬೆರಗಾಗುತ್ತೇವೆ. ಅದೇ ರೀತಿ ಇಲ್ಲಿ ಮೂರ್ಖರೂ ಸಹ ಕಡಿಮೆ ಇಲ್ಲ. ಇವರು ತಮ್ಮ ಮೂರ್ಖತನವನ್ನು ತೋರಿಸುವ ಅವಕಾಶ ಇಲ್ಲಿಯೂ ಬಿಡುವದಿಲ್ಲ ಎನಿಸುತ್ತದೆ. ಏಕೆಂದರೆ ಈಗ ಇಲ್ಲಿ ನೋಡುವ ಮೂರ್ಖತನದ ಪರಮಾವಧಿಯನ್ನು ತೋರಿಸುವ ಈ ವಿಡಿಯೋ ನಿಜಕ್ಕೂ ನಗಬೇಕೋ ಅಳಬೇಕೋ ಎಂಬುದೇ ತಿಳಿಯುವುದಿಲ್ಲ.
ಅನೇಕ ಜನರು ತಮ್ಮ ಯಾವುದೇ ಕೆಲಸ ಬೇಗ ಮುಗಿಸಿಕೊಳ್ಳುವ ಸಲುವಾಗಿ ಶಾರ್ಟ್ ಕಟ್ ಮಾರ್ಗ ಅವಲಂಬಿಸುತ್ತಾರೆ. ಈ ಶಾರ್ಟ್ ಕಟ್ ದಿಂದ ಕೆಲವು ಸಲ ಲಾಭವಾದರೆ ಇನ್ನು ಕೆಲವು ಸಲ ತುಂಬಾ ದುಬಾರಿಯಾಗಿ ಪರಿಣಮಿಸುತ್ತದೆ. ಇದರ ಉದಾಹರಣೆಯನ್ನು ಸರಿಯಾಗಿ ನೀಡುವ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಚೆನ್ನಾಗಿಯೇ ವೈರಲ್ ಆಗುತ್ತಿದೆ. ಕಾರಣ ಶಾರ್ಟ್ ಕಟ್ ಪ್ರತಿ ಸಲ ಸಕ್ಸೆಸ್ ಆಗುವದಿಲ್ಲ.
ವಿಡಿಯೋದಲ್ಲಿ ವ್ಯಕ್ತಿಯೊಬ್ಬನು ನದಿ ದಾಟುವ ಸಲುವಾಗಿ ಯೂಸ್ ಮಾಡಿದ ಐಡಿಯಾ ನೋಡಿ ನಮ್ಮ ತಲೆ ನಾವೇ ಚಚ್ಚಿಕೊಳ್ಳಬೇಕು ಎನಿಸುತ್ತದೆ. ಈ ವ್ಯಕ್ತಿಯು ನೇರ ನದಿಯಲ್ಲಿಯೇ ತನ್ನ ಬೈಕ್ ತೆಗೆದುಕೊಂಡು ಹೋಗಿ ನದಿ ದಾಟುವ ಪ್ರಯತ್ನ ಮಾಡುತ್ತಾನೆ. ಈ ಪ್ರಯತ್ನದಲ್ಲಿ ಬೈಕ್ ಕೆಸರಿನಲ್ಲಿ ಇಳಿಯುತ್ತಾ ಇಳಿಯುತ್ತಾ ಹೋಗುತ್ತದೆ. ವಿಡಿಯೋ ನೋಡುವಾಗ ಬೈಕ್ ಜಲಸಮಾಧಿ ತೆಗೆದುಕೊಳ್ಳುತ್ತಿದೆಯೇನೋ ಎಂಬಂತೆ ಭಾಸವಾಗುತ್ತದೆ.
ವಿಡಿಯೋ ನೋಡಿ
ಯುವಕನ ಹುಚ್ಚುತನ ಅಥವಾ ಮೂರ್ಖತನವನ್ನು ಪ್ರದರ್ಶಿಸುವ ಈ ವೀಡಿಯೋವನ್ನು
‘om_491_rider’ ಹೆಸರಿನ ಇನ್ಸ್ಟಾಗ್ರಾಂ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಈ ವೀಡಿಯೋವನ್ನು ಇಲ್ಲಿಯವರೆಗೆ ಸುಮಾರು ಲಕ್ಷಾವಧಿ ಜನರು ನೋಡಿದ್ದಾರೆ ಮತ್ತು 3 ಲಕ್ಷಕ್ಕೂ ಮೇಲ್ಪಟ್ಟು ಜನರು ಲೈಕ್ಸ್ ಸಹ ಮಾಡಿದ್ದಾರೆ. ಪ್ರಸ್ತುತ ವಿಡಿಯೋ ನೆಟ್ಟಿಗರಿಗೆ ಇಷ್ಟವಾಗುವದರ ಜೊತೆಗೆ ಆತನ ಮೂರ್ಖತನಕ್ಕೆ ನಾಲ್ಕು ಒಳ್ಳೆಯ ಮಾತುಗಳನ್ನು ಹೇಳಿದ್ದಾರೆ. ಜನ ಶಾರ್ಟ್ ಕಟ್ ರಭಸದಲ್ಲಿ ಇನ್ನು ಏನೇನು ಮಾಡುತ್ತಾರೋ ಏನೋ ದೇವರೇ ಅವರಿಗೆ ಒಳ್ಳೆಯ ಬುದ್ದಿ ಕೊಡು ಎಂದಿದ್ದಾರೆ.