ಸೇನೆಯಲ್ಲಿ ಸೇವೆ ಸಲ್ಲಿಸುವ ಮಗಳು ತಾಯಿಗೆ ಹಠಾತ್ ಸರ್ಪ್ರೈಸ್ ನೀಡಿದಾಗ! ಈ ವಿಡಿಯೋ ಮಿಸ್ ಮಾಡದೆ ನೋಡಿ…

ತಾಯಿಯು ಮಕ್ಕಳ ಮೇಲೆ ಇಟ್ಟಿರುವ ಪ್ರೀತಿ, ವಾತ್ಸಲ್ಯದ ಬೆಲೆ ಕಟ್ಟಲು ಸಾಧ್ಯವಿಲ್ಲ. ಅಂಥದ್ದರಲ್ಲಿ ಮಕ್ಕಳು ಸೇನೆಯಲ್ಲಿ ಕೆಲಸ ಮಾಡುವವರಿದ್ದರೆ ತಾಯಿಯ ಮನದೊಳಗಿನ ತುಮುಲ, ಕಳವಳ, ಕಾಳಜಿ ತಿಳಿಯುವದು ಯಾರಿಂದಲೂ ಸಾಧ್ಯವಿಲ್ಲ.

ಭಾವನೆಗಳು ಪ್ರತಿಯೊಂದು ಜೀವಿ ಬೆಳೆದಂತೆ ಅವು ಸಹ ಬೆಳೆದುಕೊಂಡು ಬರುತ್ತವೆ. ಅವುಗಳನ್ನು ಶಬ್ದಗಳಲ್ಲಿ ಹೇಳುವುದು ಕೆಲವೊಂದು ಸಲ ಅಸಾಧ್ಯವಾಗಿ ಬಿಡುತ್ತದೆ. ಈ ವಿಡಿಯೋದಲ್ಲಿ ಅದನ್ನು ಕಣ್ಣುಗಳಿಂದಲೇ ನೋಡಿ ಅನುಭವಿಸಬೇಕು. ಅಂತಹ ಅದ್ಭುತವಾದ ವಿಡಿಯೋ ಇದಾಗಿದೆ. ಪ್ರಸ್ತುತ ವಿಡಿಯೋ ಎಲ್ಲಿಯದು ಎಂಬುದು ಗೊತ್ತಿಲ್ಲ. ಆದರೆ ವಿಡಿಯೋದಲ್ಲಿ ವ್ಯಕ್ತವಾಗುವ ಭಾವನೆಗಳನ್ನು ನೋಡುವಾಗ ಮಾತ್ರ ಪ್ರತಿಯೊಂದು ವ್ಯಕ್ತಿಯ ಹೃದಯ, ಮನಸ್ಸು ತುಂಬಿ ಬರುವದು ಖಚಿತ.

ಇಲ್ಲಿ ಮಗಳು ಸೇನೆಯಿಂದ ರಜೆ ತೆಗೆದುಕೊಂಡು ತಾಯಿಗೆ ಹೇಳದೆ ಮನೆಗೆ ಬಂದಿದ್ದಾಳೆ. ಆಕೆ ರಜೆಗೆ ಬಂದದ್ದು ತಾಯಿಯೊಬ್ಬಳನ್ನು ಬಿಟ್ಟು ಉಳಿದವರಿಗೆ ಗೊತ್ತಿರುತ್ತದೆ. ಮಗಳು ನೇರವಾಗಿ ಮನೆಯಲ್ಲಿ ಟಿವಿ ವೀಕ್ಷಿಸುತ್ತಿರುವ ಅಮ್ಮಳ ಹಿಂದಿನಿಂದ ಹೋಗಿ ಆಕೆಯ ಹತ್ತಿರ ಸಹಜವಾಗಿ ಆನಿಕೊಂಡು ನಿಲ್ಲುತ್ತಾಳೆ. ತಾಯಿಯು ಮನೆಯ ಸದಸ್ಯರೇ ಯಾರಾದರೂ ಇರಬಹುದು ಎಂದು ಅಷ್ಟೊಂದು ಗಮನವೇ ನೀಡುವದಿಲ್ಲ. ಆದರೆ ಶೂಟ್ ಮಾಡುವ ವ್ಯಕ್ತಿ ಎದುರು ಬಂದಾಗ ಮಾತ್ರ ಅಮ್ಮಳು ಮಗಳ ಕಡೆಗೆ ಗಮನ ಹರಿಸುತ್ತಾಳೆ. ಆಗ ಮಗಳನ್ನು ಮಗ್ಗುಲಲ್ಲಿ ನೋಡಿ ಕೆಲವು ಕ್ಷಣ ತಾಯಿಯ ಬಾಯಿಯಿಂದ ಮಾತುಗಳೇ ಬರುವದಿಲ್ಲ.

ಆ ಅದ್ಭುತವಾದ ಮತ್ತು ಪ್ರೀತಿ, ವಾತ್ಸಲ್ಯದ ಕ್ಷಣಗಳನ್ನು ಸ್ವತಃ ನೀವೇ ನೋಡಿ ಈ ವಿಡಿಯೋದಲ್ಲಿ…