ಚಿರತೆಯ ಮುಂದೆಯೇ ಅದರ ಬೇಟೆಯನ್ನು ವ್ಯಕ್ತಿಯೊಬ್ಬ ಕಸಿದುಕೊಂಡಾಗ… ಸಿಟ್ಟಿಗೆದ್ದ ಚಿರತೆ ಮಾಡಿದ್ದೇನು? ನೋಡಿ ಈ ವೈರಲ್ ವಿಡಿಯೋದಲ್ಲಿ.
ಕಾಡುಪ್ರಾಣಿಗಳಿಗೆ ಸಂಬಂಧಿಸಿದ ವಿಡಿಯೋಗಳು ಯಾವತ್ತು ನೇಟಿಜನ್ಸ್ ಗಳಿಗೆ ತುಂಬಾ ಇಷ್ಟವಾಗುತ್ತವೆ. ವಿಡಿಯೋಗಳಲ್ಲಿ ಪ್ರಾಣಿಗಳು ಬೇಟೆಗಾಗಿ ರೂಪಿಸಿಕೊಳ್ಳುವ ತಂತ್ರ, ಅಥವಾ ಬೇಟೆಯಿಂದ ತಪ್ಪಿಸಿಕೊಳ್ಳುವ ಚಾಣಾಕ್ಷತೆ, ಕೆಲವೊಂದು ಸಲ ಅವುಗಳಲ್ಲಿಯೂ ಇನ್ನೊಂದು ಜೀವಿಗಾಗಿ ಮಿಡಿಯುವ ಹೃದಯ ಹೀಗೆ ಅನೇಕ ರೀತಿಯ ಭಾವನೆಗಳಿಗೆ ನೇಟಿಜನ್ಸ್ ಗಳು ಮಾರುಹೋಗುತ್ತಾರೆ. ಇಂದಿನ ಈ ವಿಡಿಯೋದಲ್ಲಿ ಮನುಷ್ಯನೊಬ್ಬ ಚಿರತೆಯ ಬೇಟೆಯನ್ನು ಅದರ ಮುಂದೆಯೇ ಎಳೆದುಕೊಂಡು ಹೋಗುತ್ತಿದ್ದಾನೆ. ಆಗ ಚಿರತೆಯು ವ್ಯಕ್ತ ಮಾಡಿದ ಭಾವನೆಯ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ನೇಟಿಜನ್ಸ್ ಗಳಿಗೆ ತುಂಬಾ ಇಷ್ಟವಾಗುತ್ತಿದೆ.
ಈ ಸಂದರ್ಭದಲ್ಲಿ ಚಿರತೆಯ ಮುಖದ ಮೇಲಿನ ಭ#ಯಾನಕವಾದ ಹಾವಭಾವಗಳು ಸ್ಪಷ್ಟವಾಗಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಈ ವಿಡಿಯೋ ನೋಡಿದ ನೇಟಿಜನ್ಸ್ ಗಳು ನಿಜಕ್ಕೂ ಆಶ್ಚರ್ಯಚಕಿತರಾಗಿದ್ದಾರೆ. ಯಾಕೆಂದರೆ ಚಿರತೆಯ ಮುಂದಿರುವ ಆಹಾರವನ್ನು ಎಷ್ಟೊಂದು ಧೈರ್ಯದಿಂದ ಆತ ಎಳೆದುಕೊಂಡು ಹೋಗುವ ಸಾಹಸ ಮಾಡಿದ್ದಾನೆಂದು ನೇಟಿಜನ್ಸ್ ಗಳು ವಿಚಾರ ಮಾಡುತ್ತಿದ್ದಾರೆ.
ಪ್ರಸ್ತುತ ವಿಡಿಯೋ ಕೆಲವೇ ಕ್ಷಣಗಳದ್ದು ಇದ್ದರೂ ಸಹ ನೇಟಿಜನ್ಸ್ ಗಳು ಮಾತ್ರ ಈ ವಿಡಿಯೋವನ್ನು ತುಂಬಾ ಇಷ್ಟಪಟ್ಟಿದ್ದಾರೆ. ಕಾಡಿನಲ್ಲಿ ಚಿರತೆಯು ಬೇಟೆಯ ಹತ್ತಿರ ನಿಂತಿದೆ. ಇನ್ನೇನು ತನ್ನ ಆಹಾರವನ್ನು ತಿನ್ನಬೇಕು ಎನ್ನುವಷ್ಟರಲ್ಲಿಯೇ ವ್ಯಕ್ತಿಯು ಅದರ ಬೇಟೆಯನ್ನು ಕಸಿದುಕೊಂಡು ಹೋಗುತ್ತಿದ್ದಾನೆ ಇದು ಚಿರತೆಗೆ ಸ್ವಲ್ಪವೂ ಇಷ್ಟವಾಗಿಲ್ಲ. ಹಾಗಾಗಿ ಅದು ಆ ವ್ಯಕ್ತಿಯ ಮೇಲೆ ತನ್ನ ಕೋಪನ್ನು ಯಾವ ರೀತಿ ತೋರಿಸುತ್ತಿದೆ ನೋಡಿ.
ವಿಡಿಯೋ ನೋಡಿ
ಪ್ರಸ್ತುತ ವಿಡಿಯೋವನ್ನು Sean Viljoen ಇನ್ಸ್ಟಾಗ್ರಾಮ್ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಇದನ್ನು ನೋಡಿದ ನೆಟ್ಟಿಗರು ತರತರದ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.