ಕೋಳಿ ಮೊದಲ ಮೊಟ್ಟೆ ಮೊದಲ? ಈ ಪ್ರಶ್ನೆಗೆ ಕೊನೆಗೂ ಶಾಸ್ತ್ರಜ್ಞರು ಉತ್ತರವನ್ನು ಶೋಧಿಸಿಯೇ ಬಿಟ್ಟರು! ಹೇಗೆ ಅಂತೀರಾ ಇಲ್ಲಿ ನೋಡಿ…
ಕೋಳಿ ಮೊದಲ ಮೊಟ್ಟೆ ಮೊದಲ? ಈ ಪ್ರಶ್ನೆ ಮೊದಲಿನಿಂದಲೂ ಕೇಳಿ ಕೇಳಿ ತಲೆ ಕೆಟ್ಟು ಹೋಗಿದೆ, ಆದರೆ ಉತ್ತರ ಮಾತ್ರ ಇಲ್ಲಿಯವರೆಗೆ ಸಿಕ್ಕಿರಲಿಲ್ಲ. ಅನೇಕ ವರ್ಷಗಳಿಂದ ಈ ಪ್ರಶ್ನೆಗೆ ಶಾಸ್ತ್ರಜ್ಞರು ಸಹಿತ ಸಮರ್ಪಕವಾದ ಉತ್ತರವನ್ನು ಹುಡುಕಲು ಯತ್ನಿಸುತ್ತಿದ್ದರು. ಈಗ ಕೊನೆಗೂ ಶಾಸ್ತ್ರಜ್ಞರು ಈ ಪ್ರಶ್ನೆಗೆ ಸರಿಯಾದ ಉತ್ತರವನ್ನು ಹುಡುಕುವುದರಲ್ಲಿ ಅಥವಾ ಶೋಧಿಸುವುದರಲ್ಲಿ ಯಶಸ್ವಿಯಾಗಿದ್ದಾರೆ.
ಬ್ರಿಟನ್ ನಲ್ಲಿಯ ಶೆಫೀಲ್ಡ್ ಮತ್ತು ವಾರ್ವಿಕ್ ಯೂನಿವರ್ಸಿಟಿಯ ಶಾಸ್ತ್ರಜ್ಞರು ಕೋಳಿ ಮತ್ತು ಮೊಟ್ಟೆ ಇವೆರಡರಲ್ಲಿ ಯಾವುದು ಮೊದಲು ಜನಿಸಿತು ಈ ವಿಷಯದ ಬಗ್ಗೆ ಅಭ್ಯಾಸ ಮಾಡುತ್ತಿದ್ದರು. ಅವರು ಮಾಡಿದ ಈ ಅಭ್ಯಾಸದ ಪ್ರಕಾರ ಅಥವಾ ಸಂಶೋಧನೆಯ ಪ್ರಕಾರ ಡಾಕ್ಟರ್ ಕಾಲಿನ್ ಫ್ರೀಮನ್ ಅವರು ಹೇಳುತ್ತಾರೆ, ಅನೇಕ ವರ್ಷಗಳವರೆಗೆ ಮಾಡಿದ ಸಂಶೋಧನೆಯ ನಂತರ ಕೋಳಿ ಮೊದಲ ಅಥವಾ ಮೊಟ್ಟೆ ಮೊದಲ ಎಂಬ ಪ್ರಶ್ನೆಗೆ ಉತ್ತರ ಹುಡುಕುವಲ್ಲಿ ನಾವು ಯಶಸ್ವಿಯಾಗಿದ್ದೇವೆ ಎನ್ನುತ್ತಾರೆ.
ಮೊಟ್ಟೆಯ ನಿರ್ಮಿತಿಗಾಗಿ ಓವೊಕ್ಲಾಯಾಡಿನ್ ಹೆಸರಿನ ಪ್ರೋಟೀನ ಅವಶ್ಯಕತೆ ಇರುತ್ತದೆ. ಫಲೀಕರಣದ ನಂತರ ಈ ಪ್ರೋಟೀನ್ ಕೋಳಿಯ ಗರ್ಭಾಶಯದಲ್ಲಿ ತಯಾರಾಗುತ್ತದೆ. ಈ ಒಂದು ಕಾರಣದಿಂದ ಕೋಳಿ ಮೊದಲು ಉತ್ಪತ್ತಿಯಾಯಿತು, ತದನಂತರ ಮೊಟ್ಟೆಯ ಉತ್ಪತ್ತಿಯಾಗಲು ಶುರುವಾಗಿದೆ ಎಂದು ಸ್ಪಷ್ಟವಾಗಿ ತಿಳಿದುಬರುತ್ತದೆ ಎಂದು ಕೊಲಿನ್ ಹೇಳುತ್ತಾರೆ.
ಶಾಸ್ತ್ರಜ್ಞರು ಈ ಸಂಶೋಧನೆಯ ಸಲುವಾಗಿ ಹೈಟೆಕ್ ಕಂಪ್ಯೂಟರ್ ಹೆಕ್ಟರ್ (HECTOR) ಈ ತಂತ್ರಜ್ಞಾನದ ಉಪಯೋಗವನ್ನು ಮಾಡಿದ್ದಾರೆ. ಈ ಸಂಶೋಧನೆಯ ಸಮಯದಲ್ಲಿ ಮೊಟ್ಟೆಯ ಮೇಲಿನ ಚಿಪ್ಪಿನ ಅಣ್ವಿಕ ರಚನೆಯ ಬಗ್ಗೆ ತಿಳಿಯಿತು. ಸಂಶೋಧನೆಯ ಸಮಯದಲ್ಲಿ ತಿಳಿದುಬಂದ ವಿಷಯವೇನೆಂದರೆ, ಮೊಟ್ಟೆಯ ಮೇಲಿನ ಕವಚ ಅಥವಾ ಚಿಪ್ಪಿನ ಸಲುವಾಗಿ ಬೇಕಾಗುವ ಪ್ರೊಟೀನ್ ಬರೀ ಕೋಳಿಯ ಗರ್ಭದಲ್ಲಷ್ಟೆ ತಯಾರಾಗಲು ಸಾಧ್ಯವಿದೆ. ಓವೊಕ್ಲಾಯಾಡಿನ್ ಪ್ರೋಟೀನ್ ನಿಂದ ಕ್ಯಾಲ್ಶಿಯಂ ಕಾರ್ಬೋನೇಟ್ ಮೊಟ್ಟೆಯ ಚಿಪ್ಪಿನಲ್ಲಿ ತಯಾರಾಗುತ್ತದೆ. ನಂತರ ಈ ಚಿಪ್ಪು ನಿಧಾನವಾಗಿ ಗಟ್ಟಿಯಾಗುತ್ತಾ ಹೋಗುತ್ತದೆ. ಈ ಪ್ರೋಸೆಸ್ ಆದಮೇಲೆ ಸಂಪೂರ್ಣವಾಗಿ ಮೊಟ್ಟೆ ತಯಾರಾಗುತ್ತದೆ ಎಂದು ಶಾಸ್ತ್ರಜ್ಞರು ಹೇಳುತ್ತಾರೆ.
ಇನ್ನು ಹೇಳುವ ಮಾಹಿತಿಯ ಪ್ರಕಾರ ಅನೇಕ ಜಾತಿಯ ಕೋಳಿಗಳು 24 ರಿಂದ 36 ಗಂಟೆಯಲ್ಲಿ ಮೊಟ್ಟೆಗಳನ್ನಿಡುತ್ತವೆ. ಮೊದಲ ಮೊಟ್ಟೆ ನೀಡಿದ ನಂತರ ಕೋಳಿ ಎರಡನೇ ಮೊಟ್ಟೆಯನ್ನು ನೀಡುವವರೆಗೆ ಮೊದಲಿನ ಮೊಟ್ಟೆಯ ಮೇಲೆ ಕುಳಿತುಕೊಳ್ಳುತ್ತದೆ. ಕೋಳಿ ಮೊದಲ ಅಥವಾ ಮೊಟ್ಟೆ ಮೊದಲ ಎಂಬ ಪ್ರಶ್ನೆಗೆ ಸರಿಯಾದ ಹಾಗೂ ಸಮರ್ಪಕವಾದ ಉತ್ತರ ಅಂತೂ ಈಗ ಸಿಕ್ಕಾಯಿತು. ಆದರೀಗ ಕೋಳಿ ಮೊದಲು ಎಲ್ಲಿಂದ ಬಂದಿತು ಎಂಬ ಪ್ರಶ್ನೆಗೆ ಉತ್ತರ ಹುಡುಕುವುದು ಇನ್ನೂ ಬಾಕಿ ಇದೆ ಎಂದು ಡಾ. ಕಾಲಿನ್ ಹೇಳುತ್ತಾರೆ.