Video: ಮಾಲೀಕನ ಮಡಿಲಲ್ಲೇ ತನ್ನ ಕೊನೆಯ ಉಸಿರು ಬಿಟ್ಟ ನಾಯಿ, ವಿಡಿಯೋ ನೋಡಿದ ಕೂಡಲೇ ಕಣ್ಣೀರು ಬಾರದೆ ಇರದು !!!
ಮರ#ಣಎಂದರೆ ಜೀವಿಯ ಅಂತ್ಯವಾಗುವುದು. ಇನ್ನೊಂದು ಅರ್ಥದಲ್ಲಿ ಈ ಜಗತ್ತಿನಿಂದ ಇಲ್ಲವಾಗುವುದು. ಜನನದಂತೆ ಮರಣವೂ ನಿಸರ್ಗ ಪ್ರೇರಿತ. ಮ#ರಣವೆಂದರೆ ದೇಹದಿಂದ ಆತ್ಮ ಸ್ವತಂತ್ರವಾಗುವುದು ಎಂಬ ಭಾವನೆ ಜಗತ್ತಿನ ಎಲ್ಲ ದೇಶಗಳಲ್ಲಿಯೂ ಇದೆ. ಎಲ್ಲಾ ಧರ್ಮಗಳಲ್ಲಿಯೂ ಮರಣ ಸಂಬಂದ ಕಲ್ಪನೆಗಳಲ್ಲಿ ಸಾದೃಶ್ಯವಿದೆ. ಮನುಷ್ಯನಿಗೆ ಸಹಜವಾದ ಭೀ#ತಿ, ನಿರೀಕ್ಷೆ, ಆಶೋತ್ತರಗಳನ್ನು ಮರಣದ ಕಲ್ಪನೆ ಪ್ರತಿಬಿಂಬಿಸುತ್ತದೆ.
ಸಾವು, ಜೀವಿಯೊಂದರಲ್ಲಿ ಇರುವ ಎಲ್ಲಾ ಜೈವಿಕ ಕಾರ್ಯಗಳು ಮುಕ್ತಾಯ ಆಗುತ್ತವೆ. ಸಾಮಾನ್ಯವಾಗಿ ಸಾವಿನ ಬಗ್ಗೆ ಸೆಳೆಯುವ ವಿಷಯಗಳು ಜೀವ ವಯಸ್ಸಾದಾಗ (ವೃದ್ಧಾಪ್ಯ). ಭಕ್ಷ#ಣೆ, ಅಪೌಷ್ಟಿಕತೆ, ರೋಗ, ಆ#ತ್ಮಹ#ತ್ಯೆ, ನರಹ#ತ್ಯೆ, ಹಸಿವು, ನಿರ್ಜಲೀಕರಣ, ಮತ್ತು ಅಪ#ಘಾತಗಳು ಅಥವಾ ಆ#ಘಾತ ಟರ್ಮಿನಲ್ ಗಾಯ ಪರಿಣಾಮವಾಗಿ ಸಾವು ಬರಬಹುದು. ಸಾವು ಸಾಮಾನ್ಯವಾಗಿ ಮತ್ತು ನಿರ್ದಿಷ್ಟವಾಗಿ ಮಾನವರಿಗೆ, ಒಂದು ಕೆಟ್ಟ ಅಥವಾ ಅಹಿತಕರ ಸಂದರ್ಭವಾಗಿ ಪರಿಗಣಿಸಲಾಗುತ್ತದೆ.
ಮರಣ ಎಲ್ಲರಿಗೂ ಒಂದಲ್ಲ ಒಂದು ದಿವಸ ಬರುವದು ಖಚಿತ. ಆದರೆ ಕೆಲವೊಬ್ಬರು ಬೇಗ ಸಾವಿಗೆ ಶರಣಾದರೆ ಇನ್ನೂ ಕೆಲವರು ತುಂಬಾ ವಯಸ್ಸಿನ ನಂತರ ಶರಣಾಗುತ್ತಾರೆ. ನಮ್ಮ ಸಾವು ಅತೀ ಸರಳವಾಗಿ ಹಾಗೂ ನಮ್ಮವರ ಮಡಿಲಲ್ಲಿ ಸಂಭವಿಸಬೇಕು ಎಂಬುದು ಎಲ್ಲರ ಕೊನೆಯ ಆಸೆಯಾಗಿರುತ್ತದೆ. ಆದರೆ ಪ್ರಾಣಿಗಳು ಸಹ ಮನುಷ್ಯರನ್ನು ತುಂಬಾ ಪ್ರೀತಿ ಮಾಡುತ್ತವೆ ಎಂಬುದು ನಾವೆಷ್ಟೋ ಉದಾಹರಣೆಳನ್ನು ನೋಡಿದ್ದೇವೆ ಸಾವಿನಲ್ಲಿ ಸಹ ಮಾನವನ ಜೊತೆಗಿದ್ದ ಪ್ರೀತಿ ತೋರಿಸುತ್ತವೆ ಈ ಪ್ರಾಣಿಗಳು. ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವೀಡಿಯೋ ತುಂಬಾನೇ ವೈರಲ್ ಆಗುತ್ತಿದೆ.
ಪ್ರಸ್ತುತ ವೀಡಿಯೋದಲ್ಲಿ ಒಂದು ಸಾಕು ನಾಯಿ ಅನಾರೋಗ್ಯದಿಂದ ಬಳಲುತ್ತಿರುತ್ತದೆ. ಅದರ ಮಾಲೀಕರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರ ಮಾಡಲು ಶುರು ಮಾಡುತ್ತಾರೆ. ಕೆಲವು ದಿವಸಗಳ ವರೆಗೆ ಚಿಕಿತ್ಸೆ ನಡೆಸಿದರು ಸಹ ನಾಯಿಯ ಆರೋಗ್ಯದಲ್ಲಿ ಯಾವುದೇ ಬದಲಾವಣೆ ಕಂಡು ಬರುವದಿಲ್ಲ. ಹೀಗಾಗಿ ಡಾಕ್ಟರ್ ಮಾಲೀಕರಿಗೆ ಇನ್ನೇನು ಈ ಪ್ರಾಣಿ ಉಳಿಯುವದಿಲ್ಲ ಎಂದು ಹೇಳುತ್ತಾರೆ. ಹೇಳಿದ ತಕ್ಷಣವೇ ದಂಪತಿಗಳು ಅದರ ಬಳಿಯಲ್ಲಿ ಹೋಗಿ ಅಳುತ್ತಾ ಕೂಡುತ್ತಾರೆ. ಇದನ್ನು ಕಂಡು ನಾಯಿ ಕೂಡಾ ಕಣ್ಣೀರು ಹಾಕುತ್ತೇ ತದನಂತರ ನಾಯಿ ತನ್ನ ಸಾಕಿದ ಮಹಿಳೆಯ ಮಡಿಲಲ್ಲಿ ಮಲಗಿ ತನ್ನ ಕೊನೆಯ ಉಸಿರು ತಗೆದುಕೊಳ್ಳುತ್ತೇ ಇದನ್ನು ನೋಡಿದ ಮಹಿಳೆ ತುಂಬಾ ದುಃಖ ಪಡುತ್ತ ನಾಯಿಯನ್ನು ಅಪ್ಪಿಕೊಂಡು ಅಳುತ್ತಾಳೆ. ಈ ವೀಡಿಯೋ ನೋಡಿದರೆ ನಿಮಗೂ ಸಹ ಕಣ್ಣಲ್ಲಿ ನೀರು ಬರುವದು ಖಚಿತ.
ವಿಡಿಯೋ ನೋಡಿ…
ಪ್ರಸ್ತುತ ವೀಡಿಯೋ ನೋಡಿದ ಕೂಡಲೇ ಪ್ರಾಣಿಗಳಿಗೂ ಸಹ ಮನುಷ್ಯನ ಹಾಗೆ ಭಾವನೆಗಳು ಇರುತ್ತವೆ ಎಂಬುದು ತಿಳಿದು ಬರುತ್ತವೆ. ನಾವು ಸಾಕಿರುವ ಯಾವುದೇ ಪ್ರಾಣಿ ನಮ್ಮನ್ನು ತುಂಬಾ ಹಚ್ಚಿಕೊಂಡಿರುತ್ತದೆ ಅದು ನಮ್ಮನ್ನು ಅಗಲಿ ಹೋಗಲು ಇಷ್ಟ ಪಡುವದಿಲ್ಲ ಹಾಗಾಗಿ ನೀವು ಸಾಕಿದ ಯಾವುದೇ ಪ್ರಾಣಿಯಾಗಿರಲಿ ಅದನ್ನು ಚೆನ್ನಾಗಿ ನೋಡಿಕೊಳ್ಳಿ. ಏಕೆಂದರೆ ಒಂದು ಬಾರಿ ಹೋದ ಜೀವ ಮತ್ತೆ ಬರುವದಿಲ್ಲ.