ಭಾರತದ ಈ ಐದು ಸ್ಪಿನರ್ ಗಳು ಭಾರತದ ಬದಲಾಗಿ ಬೇರೆ ದೇಶಕ್ಕಾಗಿ ಆಡಿದ್ದರೆ ಇಂದು ದಿಗ್ಗಜರ ಸಾಲಿನಲ್ಲಿ ಇರುತ್ತಿದ್ದರು!

ಟೀಮ್ ಇಂಡಿಯಾದಲ್ಲಿ ಸ್ಪೀನರ್ ಬೌಲರ್ ಗಳ ಕಡಿಮೆ ಇಲ್ಲ. ಕೆಲವು ಸ್ಪಿನ್ ಬೌಲರ್ ಗಳಿಗೆ ದೇಶದ ಪರವಾಗಿ ಆಡಲು ಅವಕಾಶ ದೊರೆಯಲೇ ಇಲ್ಲ. ಒಂದೇ ವೇಳೆ ಬೇರೆ ದೇಶದ ಪರವಾಗಿ ಆಡಿದ್ದೇ ಆದರೆ ಇಲ್ಲಿಯವರೆಗೆ ಅವರ ಹೆಸರ ಮೇಲೆ ಒಳ್ಳೊಳ್ಳೆಯ ರೆಕಾರ್ಡ್ ಗಳು ಇರುತ್ತಿದ್ದವು. 2000 ದಶಕದಲ್ಲಿ ಅನಿಲ್ ಕುಂಬ್ಳೆ ಮತ್ತು ಹರಭಜನ್ ಸಿಂಗ್ ಜೋಡಿಯು ಒಳ್ಳೆಯ ಯಶಸ್ಸಿನಲ್ಲಿದ್ದರು. ನಂತರ 2010 ರ ವೇಳೆಯಲ್ಲಿ ಅಶ್ವಿನ್ ಮತ್ತು ಜಡೇಜಾ ತಮ್ಮ ಮಾಂತ್ರಿಕತೆಯನ್ನು ತೋರಿದ್ದಾರೆ.

ಸದ್ಯಕ್ಕೆ ಕುಲದೀಪ್ ಯಾದವ್ ಮತ್ತು ಚಹಲ್ ಇವರು ಸಹಿತ ದೇಶಕ್ಕಾಗಿ ಒಳ್ಳೆಯ ರೆಕಾರ್ಡ್ ಮಾಡಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ತಮ್ಮ ಒಳ್ಳೆಯ ಪ್ರದರ್ಶನದ ಕಾರಣದಿಂದ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಲು ಯಶಸ್ವಿಯಾದರು.

ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಕೈಚಳಕ ತೋರಿದ ಭಾರತದ ಕೆಲವು ಸ್ಪೀನರ್ ಗಳು ಒಂದು ವೇಳೆ ಭಾರತ ಬಿಟ್ಟು ಬೇರೆ ದೇಶದ ವತಿಯಿಂದ ಆಡಿದ್ದರೆ ಅವರ ಸಾಧನೆ, ರೆಕಾರ್ಡ್ ತುಂಬಾ ಚೆನ್ನಾಗಿರುತ್ತಿತ್ತು.

ಅವರಲ್ಲಿ ಪ್ರಮುಖ ಐದು ಆಟಗಾರರು ಈ ಕೆಳಗಿನಂತಿದ್ದಾರೆ.

ಮುರಳಿ ಕಾರ್ತಿಕ್: ಮುರಳಿ ಕಾರ್ತಿಕ್ ಇವರು ಅನಿಲ್ ಕುಂಬ್ಳೆ ಮತ್ತು ಹರಭಜನ್ ರಂತಹ ದಿಗ್ಗಜರ ಉಪಸ್ಥಿತಿಯಲ್ಲಿ ಅವಕಾಶಗಳು ಜಾಸ್ತಿ ಸಿಗದೆ ವಂಚಿತರಾಗಿ ಉಳಿದರು. ದಕ್ಷಿಣ ಆಫ್ರಿಕಾ ದೇಶದ ಎದುರು ಆಡಲು ದೊರೆತ ಆವಕಾಶವನ್ನು ಸದುಪಯೋಗ ಮಾಡಿಕೊಳ್ಳಲು ಇವರಿಗೆ ಸಾಧ್ಯವಾಗಲಿಲ್ಲ. ಅಲ್ಲಿ ಬರೀ ಒಂದು ವಿಕೆಟ್ ಪಡೆಯಲು ಯಶಸ್ವಿಯಾದರು. ಮೂರನೆಯ ಬೌಲರ್ ಬಗ್ಗೆ ವಿಚಾರ ಮಾಡಿದಾಗ ಮುರಳಿಯವರ ಹೆಸರೇ ಮೇಲಿರುತ್ತಿತ್ತು. ಆದರೆ ಬರೀ 8 ಟೆಸ್ಟ್ ಮ್ಯಾಚ್ ಗಳನ್ನು ಆಡಿದರು, ಆದರೆ ಕೌಂಟಿ ಮ್ಯಾಚ್ ಗಳಲ್ಲಿ ಮಾತ್ರ ತಮ್ಮ ಆಟದ ಪ್ರದರ್ಶನ ಚೆನ್ನಾಗಿ ತೋರಿದ್ದಾರೆ.

ಟೆಸ್ಟ್ ಕರಿಯರ್ :-8 ಟೆಸ್ಟ್ ಮ್ಯಾಚ್ ಗಳಲ್ಲಿ 34.16 ಸರಾಸರಿಯಿಂದ 24 ವಿಕೆಟ್ ಗಳನ್ನು ಕಬಳಿಸಿದ್ದಾರೆ.

ಪ್ರಥಮ ದರ್ಜೆ ಕರಿಯರ್: (1996/97- 2014)
203 ಮ್ಯಾಚ್ ಗಳಲ್ಲಿ 26.70 ಸರಾಸರಿಯಲ್ಲಿ 644 ವಿಕೆಟ್ ಗಳನ್ನು ಕಿತ್ತಿದ್ದಾರೆ.

ಸುನಿಲ್ ಜೋಶಿ: ಭಾರತದ ದಿಗ್ಗಜರಾದ ಅನಿಲ್ ಕುಂಬ್ಳೆ ಮತ್ತು ಹರಭಜನ್ ಅವರ ಸಮಯದಲ್ಲಿಯೇ ಟೀಮ್ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಲು ಸಂಘರ್ಷ ಮಾಡಿದರು. 90 ರ ದಶಕದಲ್ಲಿ ಈ ಆಟಗಾರ ಟೆಸ್ಟ್ ಕ್ರಿಕೆಟ್ ನಲ್ಲಿ ತಮ್ಮ ಛಾಪು ಮೂಡಿಸುವಲ್ಲಿ ಯಶಸ್ವಿಯಾದರು. ಬ್ಯಾಟ್ಸ್ ಮನ್ ತಾನಾಗಿಯೇ ತಪ್ಪುಗಳನ್ನು ಎಸಗಿ ವಿಕೆಟ್ ಒಪ್ಪಿಸುವಂತೆ ಮಾಡುತ್ತಿದ್ದರು. ಇವರು ಬೌಲರ್ ಹಾಗೆಯೇ ಒಳ್ಳೆಯ ಬ್ಯಾಟ್ಸ್ ಮನ್ ಸಹಿತ ಇದ್ದರು. ಯಾವಾಗ ಹರಭಜನ್ ಟೀಮ್ ನಲ್ಲಿ ಎಂಟ್ರಿ ಮಾಡಿದರೊ ಆವಾಗಿನಿಂದ ಇವರ ಕರಿಯರ್ ಗೆ ಗ್ರಹಣ ಹಿಡಿದಂತಾಯಿತು.

ಟೆಸ್ಟ್ ಕರಿಯರ್: 15 ಮ್ಯಾಚ್ ಗಳಲ್ಲಿ 35.85 ಸರಾಸರಿಯಿಂದ 41 ವಿಕೆಟ್ ಗಳು ಪಡೆದಿದ್ದಾರೆ.

ಪ್ರಥಮ ದರ್ಜೆ:(1992-2011) 160 ಮ್ಯಾಚ್ ಗಳಲ್ಲಿ 25.12 ರ ಸರಾಸರಿಯಿಂದ 615 ವಿಕೆಟ್ ಗಳು.

ಪದ್ಮಾಕರ್ ಶಿವಲಕರ್: ಪ್ರಸನ್ನ, ಚಂದ್ರಶೇಖರ್ ಮತ್ತು ವೆಂಕಟ್ ರಾಘವನ್ ಅವರ ಸಮಯದಲ್ಲಿ ಟೀಮ್ ಇಂಡಿಯಾ ಸ್ಪಿನ್ ವಿಭಾಗದಲ್ಲಿ ಬಲಶಾಲಿಯಾದ ಸಮಯದಲ್ಲಿಯೇ ಪ್ರಥಮ ದರ್ಜೆಯ ಕ್ರಿಕೆಟ್ ನಲ್ಲಿ ಒಳ್ಳೆಯ ಪ್ರದರ್ಶನ ನೀಡಿ ತಮ್ಮಡೆಗೆ ಗಮನ ಹರಿಸಿಕೊಳ್ಳಲು ಯಶಸ್ವಿಯಾದ ಆಟಗಾರ ಈ ಪದ್ಮಾಕರ್ ಶಿವಲಕರ್. ಆದರೆ ಈ ಮೂವರು ತ್ರಿಕೂಟರ ಕಾರಣ ಇವರು ಅವಕಾಶ ವಂಚಿತರಾಗಿ ಉಳಿದರು.

ಪ್ರಥಮ ದರ್ಜೆ ಅಂಕಿ ಅಂಶಗಳು: 124 ಮ್ಯಾಚ್ ಗಳಲ್ಲಿ 589 ವಿಕೆಟ್ ಗಳನ್ನು ಪಡೆದಿದ್ದಾರೆ. ಇವರು ಮ್ಯಾಚ್ ಒಂದರಲ್ಲಿ 42 ಸಲ 5 ವಿಕೆಟ್ ಹಾಗೂ 13 ಬಾರಿ 10 ವಿಕೆಟ್ ಗಳನ್ನು ಕಬಳಿಸಿದ್ದಾರೆ.

ರಾಜಿಂದರ್ ಗೋಯಲ್: ಶಿವಲಕರ್ ಅವರ ಹಾಗೆಯೇ ಸಮಾನತೆ ಉಳ್ಳವರಾದ ಇವರು ಒಳ್ಳೆಯ ಸ್ಪೀನರ್ ಆದರೂ ಅವಕಾಶ ವಂಚಿತರಾಗಿ ಉಳಿದದ್ದರಿಂದ ತಮ್ಮ ಜೀವನದಲ್ಲಿ ಬರೀ ಒಂದು ಅಂತರರಾಷ್ಟ್ರೀಯ ಮ್ಯಾಚ್ (1964-65) ಶ್ರೀಲಂಕಾ ವಿರುದ್ಧ ಆಡಿದರು. ಇವರ ಪ್ರಥಮ ದರ್ಜೆಯ ಕ್ರಿಕೆಟ್ ತುಂಬಾ ಅತ್ತ್ಯುತ್ತಮವಾಗಿತ್ತು. ಇವರ ಆಟ ನೋಡಿ ಹಾಗೂ ರಣಜಿಯಲ್ಲಿ 600 ವಿಕೆಟ್ ಗಳನ್ನು ಪೂರೈಸಿದ ನಂತರ ಗ್ವಾಲೇರ್ ಜೈಲಿನಲ್ಲಿದ್ದ ಆಗಿನ ಕುಖ್ಯಾತ ರೌಡಿ ಭುರಾ ಸಿಂಹ್ ಯಾದವ್ ಇವರ ಆಟಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿ ಅಭಿನಂದನೆಯ ಪತ್ರವನ್ನು ಬರೆದಿದ್ದನು.

ಇವರು 157 ಮ್ಯಾಚ್ ಗಳಲ್ಲಿ 18.58 ರ ಸರಾಸರಿಯಲ್ಲಿ 750 ವಿಕೆಟ್ ಗಳನ್ನು ಪಡೆದಿದ್ದರು.

ವಾಮನ ವಿಶ್ವನಾಥ್: ಶಿವಲಕರ್ ಮತ್ತು ಗೋಯಲ್ ಇವರ ಹಾಗೆಯೇ ಒಳ್ಳೆಯ ಆಟಗಾರರಾಗಿದ್ದು ಪ್ರಥಮ ದರ್ಜೆಯ ಕ್ರಿಕೆಟ್ ನಲ್ಲಿ ಗಮನ ಸೆಳೆಯುವ ಉತ್ತಮ ರೇಕಾರ್ಡ್ ಹೊಂದಿದ್ದರೂ ಆಯ್ಕೆ ಸಮಿತಿಯ ದುರ್ಲಕ್ಷತನದಿಂದ ಅವಕಾಶ ಸಿಗದೆ ಹೊರಗುಳಿದರು. ಪ್ರಥಮ ದರ್ಜೆಯಲ್ಲಿ 600 ರ ಸಮೀಪ ವಿಕೆಟ್ ಗಳನ್ನು ಕಬಳಿಸಿದ ಆಟಗಾರನಿಗೆ ದೇಶದ ಪರ ಆಡುವ ಅವಕಾಶ ದೊರೆಯಲಿಲ್ಲ. ಅವರು ತಮ್ಮ ಟೆಸ್ಟ್ ಜೀವನದಲ್ಲಿ ಬರೀ 2 ಮ್ಯಾಚ್ ಗಳಲ್ಲಿ 7 ವಿಕೆಟ್ ಪಡೆದಿದ್ದರು.

ಪ್ರಥಮ ದರ್ಜೆಯ 129 (1955-77) ಮ್ಯಾಚ್ ಗಳಲ್ಲಿ 589 ವಿಕೆಟ್ ಪಡೆದಿದ್ದಾರೆ.