ಕರ್ಮ ರಿಟರ್ನ್ಸ್; ಮಾಡಿದ ಕೃತ್ಯಕ್ಕೆ ಕೆಲವೇ ಕ್ಷಣಗಳಲ್ಲಿ ಬಡ್ಡಿಸಮೇತ ರಿಟರ್ನ್! ನೋಡಿ ಈ ‘ಮಾಡಿದ್ದುಣ್ಣೋ ಮಾರಾಯ’ ವಿಡಿಯೋ…
ಪ್ರಾಣಿಗಳ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ನೇಟಿಜನ್ಸ್ ಗಳಿಗೆ ತುಂಬಾ ತುಂಬಾ ಇಷ್ಟವಾಗುತ್ತದೆ. ಮುಗ್ಧ ಪ್ರಾಣಿಗಳಿಗೆ ಯಾರಾದರೂ ತೊಂದರೆ ಕೊಟ್ಟರೆ ಪ್ರಾಣಿ ಪ್ರೇಮಿಗಳ ಮತ್ತು ತಾಯಿ ಹೃದಯವುಳ್ಳ ನೇಟಿಜನ್ಸ್ ಗಳು ತುಂಬಾ ಮುರುಕ ಪಡುತ್ತಾರೆ. ಇಂಥದೇ ಒಂದು ವಿಡಿಯೋ ನಿಮಗಾಗಿ ಇಲ್ಲಿ ತಂದಿದ್ದೇವೆ.
ಪ್ರಸ್ತುತ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಿಂದ ಶೇರ್ ಮಾಡಲಾಗಿದೆ. ವಿಡಿಯೋದಲ್ಲಿ ಒಬ್ಬನು ಹಸುವಿನ ಹಾಲು ಕರೆಯುತ್ತಿದ್ದಾನೆ. ಹಾಲು ಕರೆಯುವ ಸಂದರ್ಭದಲ್ಲಿ ಹಸುವಿಗೆ ಸ್ವಲ್ಪ ಅನಾನುಕೂಲ ವಾಗಿದ್ದರಿಂದ ಅದು ಹಾಲು ಕರೆಯುವ ವ್ಯಕ್ತಿಗೆ ಕಾಲಿನಿಂದ ಬದಿಗೆ ಸರಿಸಲು ಯತ್ನ ಮಾಡಿದೆ. ಇದರಿಂದ ಹಾಲು ಕರೆಯುವ ವ್ಯಕ್ತಿ ತೀರ ಅಸಮಾಧಾನಗೊಂಡಿದ್ದಾನೆ. ಆ ಸಮಯದಲ್ಲಿ ಆತ ಪರಿಸ್ಥಿತಿಯ ಅರಿವು ಮಾಡಿಕೊಂಡು ಹಸುವಿನ ಜೊತೆಗೆ ಪ್ರೀತಿಯಿಂದ ವರ್ತಿಸಬೇಕಾಗಿತ್ತು. ಆದರೆ ಆತ ಹಾಗೆ ಮಾಡದೆ ಹಸುವಿಗೆ ಜೋರಾಗಿ ಒದೆ ನೀಡಲು ಮುಂದಾಗಿದ್ದಾನೆ. ಮುಗ್ಧ ಪ್ರಾಣಿಗೆ ಕಾರಣವಿಲ್ಲದೆ ಸುಮ್ಮನೆ ಒದೆ ನೀಡಲು ಮುಂದಾದಾಗ ಕ್ಷಣಾರ್ಧದಲ್ಲಿ ವ್ಯಕ್ತಿಯ ಜೊತೆಗೆ ನಡೆದ ಘಟನೆಯನ್ನು ಈ ವಿಡಿಯೋದಲ್ಲಿ ನೋಡಿದಾಗ ಸಹಜವಾಗಿಯೇ ನಗು ಬಂದೇ ಬರುತ್ತದೆ.
ನೋಡಿ ಈ ವಿಡಿಯೋ…
ಹಸು ಅಲ್ಲಾಡಿದಾಗ ವ್ಯಕ್ತಿಯು ಅಸಮಾಧಾನದಿಂದ ಜೋರಾಗಿ ಅದಕ್ಕೆ ಒದೆ ಹಾಕಲು ಹೋಗಿ ತನ್ನ ಬ್ಯಾಲೆನ್ಸ್ ಕಳೆದುಕೊಂಡು ತಾನೇ ನೆಲದ ಮೇಲೆ ಕುಕ್ಕರಿಸಿ ಬಿದ್ದಿದ್ದಾನೆ. ಆತ ಬೀಳುವುದಲ್ಲದೇ ಕೈಯಲ್ಲಿ ಇರುವ ಅರ್ಧ ಬಕೆಟ್ ಹಾಲೂ ಸಹ ನೆಲದ ಪಾಲಾಗಿದೆ. ವಿಡಿಯೋಗೆ ವೈಸ್ ಓವರ್ ಅಳವಡಿಸಿದ್ದರಿಂದ ವಿಡಿಯೋ ಮತ್ತಷ್ಟು ತಮಾಷೆಯಾಗಿದೆ ಎನ್ನಬಹುದು.