ಅಪ#ರಾಧಿ ಸಿಮ್ ಮೂಲಕ ನಿಮ್ಮ ಬ್ಯಾಂಕ್ ಖಾತೆಯನ್ನು ಖಾಲಿ ಮಾಡಬಹುದು, ತಪ್ಪಿಸಲು ಈ ವಿಷಯಗಳನ್ನು ನೆನಪಿನಲ್ಲಿಡಿ…!!
ಇಂದಿನ ಕರೋನಾ ಸಾಂಕ್ರಾಮಿಕ ಸಮಯದಲ್ಲಿ, ಜನರು ತಮ್ಮ ಹೆಚ್ಚಿನ ಸಮಯವನ್ನು ಸ್ಮಾರ್ಟ್ಫೋನ್ಗಳು ಮತ್ತು ಲ್ಯಾಪ್ಟಾಪ್ಗಳಲ್ಲಿ ಕಳೆಯುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸೈಬರ್ ಕ್ರಿ#ಮಿನಲ್ ಗಳೂ ಇದರ ಲಾಭ ಪಡೆಯುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ.
ಈ ವಿಧಾನಗಳಲ್ಲಿ ಒಂದು ಸಿಮ್ ಸ್ವಾಪ್(Sim Swap).
ಸಿಮ್ ಸ್ವಾಪ್ ಎಂದರೇನು?
ಮೊಬೈಲ್ ಫೋನ್ ಇದೊಂದು ಅನುಕೂಲಕರ ಬ್ಯಾಂಕಿಂಗ್ ಚಾನಲ್ ಆಗಿದೆ. ವ್ಯಕ್ತಿಯು ತನ್ನ ಫೋನ್ನಲ್ಲಿ ಖಾತೆಯ ಸಂಬಂಧಿಸಿದಂತೆ ಅಲರ್ಟ್ , ಒನ್ ಟೈಮ್ ಪಾಸ್ವರ್ಡ್ (OTP), ವಿಶಿಷ್ಟ ನೋಂದಣಿ ಸಂಖ್ಯೆ (URN), 3D ಸುರಕ್ಷಿತ ಕೋಡ್ ಇತ್ಯಾದಿಗಳಿಗೆ ಸಂಬಂಧಿಸಿದ ಮಾಹಿತಿ ಪಡೆಯುತ್ತಾನೆ. ಇವು ಮೊಬೈಲ್ ಮೂಲಕ ಹಣಕಾಸಿನ ವಹಿವಾಟು ಅಥವಾ ವಿವಿಧ ಹಣಕಾಸಿನ ವಿಚಾರಣೆಗಳನ್ನು ಮಾಡಲು ಅತ್ಯವಶ್ಯಕ ವಾಗಿವೆ. ಸಿಮ್ ಸ್ವಾಪ್ ಅಥವಾ ವಿನಿಮಯದಲ್ಲಿ, ಅ#ಪರಾಧಿಯು ಮೊಬೈಲ್ ಸೇವಾ ಪೂರೈಕೆದಾರರ ಬಳಿಯಲ್ಲಿಂದ ಹೊಸ ಸಿಮ್ ಕಾರ್ಡ್ ಖರೀದಿ ಮಾಡುವ ಮೂಲಕ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಪಡೆಯುತ್ತಾನೆ. ಹೊಸ ಸಿಮ್ ಕಾರ್ಡ್ನ ಸಹಾಯದಿಂದ, ಅಪ#ರಾಧಿಯು ನಿಮ್ಮ ಬ್ಯಾಂಕ್ ಖಾತೆಯ ಮೂಲಕ ಹಣಕಾಸಿನ ವಹಿವಾಟು ನಡೆಸಲು ಅಗತ್ಯವಾದ URN/OTP ಮತ್ತು ಎಚ್ಚರಿಕೆಗಳನ್ನು ಪಡೆಯುತ್ತಾನೆ.

ಈ ಸುರಕ್ಷತಾ ಸಲಹೆಗಳನ್ನು ಅನುಸರಿಸಿ.
1 . ಜಾಗರೂಕರಾಗಿರಿ ಮತ್ತು ನಿಮ್ಮ ಮೊಬೈಲ್ ಫೋನ್ನ ನೆಟ್ವರ್ಕ್ ಸಂಪರ್ಕ ಸ್ಥಿತಿಯ ಬಗ್ಗೆ ತಿಳಿದಿರಲಿ. ನೀವು ದೀರ್ಘಕಾಲದವರೆಗೆ ಯಾವುದೇ ಕರೆ ಅಥವಾ SMS ಅಧಿಸೂಚನೆಗಳನ್ನು ಬರುತ್ತಿಲ್ಲ ಎಂಬುದು ಖಚಿತವಾದರೆ ಏನೋ ತಪ್ಪು ನಡೆಯುತ್ತಿದೆ ಅಂತ ತಿಳಿದುಕೊಳ್ಳಿ ತಕ್ಷಣ ನೀವು ಯಾವುದೇ ವಂಚನೆಗೆ ಬಲಿಯಾಗಬಾರದು ಎಂದು ಅಂದುಕೊಂಡರೆ ನಿಮ್ಮ ಸರ್ವಿಸ್ ಆಪರೇಟರ್ ನ್ನು ಭೇಟಿಯಾಗಿ ತದನಂತರ ಈ ವಿಷಯದ ಕುರಿತು ವಿಚಾರಿಸಿ.
2 ಕೆಲವು ಮೊಬೈಲ್ ನೆಟ್ವರ್ಕ್ ಆಪರೇಟರ್ಗಳು ಗ್ರಾಹಕರಿಗೆ ಸಿಮ್ ಸ್ವಾಪ್ ಬಗ್ಗೆ ಎಚ್ಚರಿಸಲು SMS ಕಳುಹಿಸುತ್ತಾರೆ. ಇದರರ್ಥ ನೀವು ಕ್ರಮ ತೆಗೆದುಕೊಳ್ಳಬಹುದು ಮತ್ತು ಈ ವಂಚನೆ ಸಂಭವಿಸದಂತೆ ತಡೆಯಬಹುದು. ಇದಕ್ಕಾಗಿ ನೀವು ತಕ್ಷಣ ನಿಮ್ಮ ಮೊಬೈಲ್ ಆಪರೇಟರ್ ಅನ್ನು ಸಂಪರ್ಕಿಸಬೇಕು.
3 ನಿಮ್ಮ ಫೋನ್ನಲ್ಲಿ ನಿರಂತರ ಅಪರಿಚಿತ ಕರೆಗಳು ಬರುತ್ತಿದ್ದರೆ ಅಂಥ ಸಂದರ್ಭದಲ್ಲಿ ನಿಮ್ಮ ಫೋನ್ ಅನ್ನು ಸ್ವಿಚ್ ಆಫ್ ಮಾಡಬೇಡಿ ಹೊರತಾಗಿ ಆ ಬರುವ ಕರೆಗಳಿಗೆ ಉತ್ತರಿಸಬೇಡಿ. ಏಕೆಂದರೆ ಇದೊಂದು ಟ್ರಿಕ್ಸ್ ಆಗಿರುತ್ತದೆ ಇದರಿಂದ ಸುರಕ್ಷಿತವಾಗಿರಲು ಉಪಾಯ ವೆಂದರೆ ನಿಮ್ಮ ಮೊಬೈಲ್ ಸೈಲೆಂಟ್ ನಲ್ಲಿಡಿ ಅಥವಾ ಪ್ಲಾಇಟ್ ಮೋಡ್ ನಲ್ಲಿಡಿ.
4 ಮೊಬೈಲ್ ಅಲರ್ಟ್ ನೋಂದಾಯಿಸಿ, ಇದರಿಂದ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಯಾವುದೇ ಚಟುವಟಿಕೆಯಿದ್ದರೆ ನೀವು ಅಲರ್ಟ್ ಪಡೆಯುತ್ತೀರಿ.
5 ಯಾವಾಗಲೂ ನಿಮ್ಮ ಬ್ಯಾಂಕ್ ಸ್ಟೇಟ್ಮೆಂಟ್ಗಳು ಮತ್ತು ಆನ್ಲೈನ್ ಬ್ಯಾಂಕಿಂಗ್ ವಹಿವಾಟಿನ ಇತಿಹಾಸವನ್ನು ನಿಯಮಿತವಾಗಿ ಪರಿಶೀಲಿಸಿ. ಇದರಿಂದ ಯಾವುದೇ ದೋ#ಷಗಳನ್ನು ಗುರುತಿಸಲು ನಿಮಗೆ ಸಹಾಯವಾಗುತ್ತದೆ.