Video: ರಸ್ತೆಯಲ್ಲಿ ಬುಲೆಟ್ ಮೇಲೆ ಹವಾ ಮಾಡಿದ ವಿಡಿಯೋ ನೋಡಿ, ಯುವಕರ ಹವಾನೆ ಗುಲ್ ಮಾಡಿದ ಪೊಲೀಸರು!!!
ಇಂದಿನ ಯುವಪೀಳಿಗೆಗೆ ಪ್ರಸಿದ್ಧಿಯಾಗುವದು ತುಂಬಾನೇ ಇಷ್ಟ. ತಾವು ಸಮಾಜಿಕ ಜಾಲತಾಣಗಳಲ್ಲಿ ಪ್ರಸಿದ್ಧಿ ಯಾಗಬೇಕು ಅನ್ನೋ ಉದ್ದೇಶದಿಂದ ಇಂದಿನ ಅನೇಕ ಯುವಕರು ವಿವಿಧ ರೀತಿಯ ವಿಡಿಯೋ ಮಾಡಿ ಅದನ್ನು ಸಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುತ್ತಾರೆ. ಅಲ್ಲದೆ ಅನೇಕ ಜನರು ಉತ್ತಮವಾದ ಕಂಟೆಂಟ್ ಸಹ ಕೊಡುತ್ತಾರೆ ಆದರೆ ಹೇಗಾದರೂ ಮಾಡಿ ಅಂದರೆ ವಿಚಿತ್ರವಾದ ರೀತಿಯಲ್ಲಿ ವಿಡಿಯೋ ಮಾಡಿ ಜನರ ಗಮನ ಸೆಳೆಯುವ ಜನರ ಸಂಖ್ಯೆ ಕಡಿಮೆಯೇನಿಲ್ಲ. ಕೆಲವು ಜನರು ವಿವಿಧ ಮಧ್ಯಮಗಳ ಮೂಲಕ ಜನರಲ್ಲಿ ಭ#ಯ ಹುಟ್ಟಿಸುವ ಕಾರ್ಯ ಸಹ ಮಾಡುತ್ತಾರೆ. ಆದರೆ ಈ ರೀತಿ ಮಾಡುವ ಪ್ರಯತ್ನದಲ್ಲಿ ಇಬ್ಬರು ಯುವಕರು ತಮ್ಮ ಕಾಲು ಮೇಲೆ ತಾವೇ ಕಲ್ಲು ಹಾಕಿಕೊಂಡಿದ್ದರೆ ಅಂದರೆ ಅವರ ಆ ಕಾರ್ಯ ಅವರಿಗೆ ಶ#ತ್ರುವಾಗಿದೆ. ಹೇಗೆ ಅಂತ ತಿಳಿದುಕೊಳ್ಳೋಣ ಬನ್ನಿ.
ಸದ್ಯಕ್ಕೆ ಒಂದು ವೀಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಈ ವೀಡಿಯೋದಲ್ಲಿ ಇಬ್ಬರು ಯುವಕರು ಒಂದು ರಸ್ತೆಯ ಮೇಲಿಂದ ಬುಲೆಟ್ ಮೇಲೆ ಹೊರಟಿದ್ದಾರೆ. ಆದರೆ ಅವರು ಬುಲೆಟ್ ಮೇಲೆ ಹೋಗುವಾಗ ಹಿಂದೆ ಕುಳಿತಿದ್ದ ಆತನ ಮಿತ್ರ ಬುಲೆಟ್ ನಡೆಸುವ ವ್ಯಕ್ತಿಯ ಹೆಗಲ ಮೇಲೆ ಕುಳಿತುಕೊಂಡು ರಾಜಾರೋಷವಾಗಿ ಕೈಯಲ್ಲಿ ಸಿಗರೇಟ್ ಹಿಡಿದು ಸ್ಮೋಕ್ ಮಾಡುತ್ತಾನೆ. ವಿಶೇಷವೇನೆಂದರೆ ಒಂದು ಕೈಯಲ್ಲಿ ಸಿಗರೇಟ್ ಹಿಡಿದು ಇನ್ನೊಂದು ಕೈಯಲ್ಲಿ ಪಿ#ಸ್ತೂಲ್ ಕಾಣುತ್ತದೆ. ದಿಗಿಲು ಮೂಡಿಸುವ ಈ ವಿಡಿಯೋಗೆ ‘ಖಳನಾಯಕ’ ಅಂತ ಕ್ಯಾಪ್ಶನ್ ನೀಡಲಾಗಿದೆಎ ಈ ಗಾಡಿಯ ನಂಬರ ಮೇಲಿಂದ ಈ ಬುಲೆಟ್ ಗುಜರಾತ್ ನಲ್ಲಿಯದು ಎಂದು ಕಂಡು ಬರುತ್ತದೆ.
ವಿಡಿಯೋ ನೋಡಿ
Before After pic.twitter.com/2A64uz9o9Z
— Mohammed Zubair (@zoo_bear) January 2, 2022
ಏತನ್ಮಧ್ಯೆ ಈ ವೀಡಿಯೋ ವೈರಲ್ ಆದ ನಂತರ ಗುಜರಾತ್ ಪೊಲೀಸರು ಈ ವೀಡಿಯೋದಲ್ಲಿಯ ಇಬ್ಬರು ಯುವಕರ ಮೇಲೆ ಕಾರ್ಯವಾಹಿ ಮಾಡಿದ್ದಾರೆ. ಅಲ್ಲದೆ ಪೊಲೀಸರು ಈ ಇಬ್ಬರನ್ನು ಬಂಧಿಸಿ ಅವರನ್ನು ಚೆನ್ನಾಗಿ ಬುದ್ಧಿ ಕಲಿಸಿದ್ದಾರೆ. ಈ ಇಬ್ಬರು ಯುವಕರು ಪೊಲೀಸರನ್ನು ಕ್ಷಮೆ ಯಾಚಿಸಿದ್ದಾರೆ ಎಂಬುದು ಆ ಫೋಟೋದಲ್ಲಿ ಕಂಡು ಬಂದಿದೆ. ಅವರ ಕೈಗಳನ್ನು ಜೋಡಿಸಿರುವ ಫೋಟೋ ಶೇರ್ ಮಾಡಲಾಗಿದೆ.