ಬೆಟ್ಟದ ತುತ್ತ ತುದಿಗೆ ಕಣಿವೆಗೆ ಮುಖ ಮಾಡಿ ಮಿತ್ರನಿಗೆ ಉಯ್ಯಾಲೆ ತೂಗುತ್ತಿದ್ದಾಗ ಆಕಸ್ಮಿಕವಾಗಿ ಜಾರಿದಾಗ! ಮೈ ಜುಮ್ ಎನ್ನಿಸುವ ವೈರಲ್ ವಿಡಿಯೋ…

ಮಕ್ಕಳು ಆಡುವ ಅನೇಕ ಆಟಗಳಲ್ಲಿ ಉಯ್ಯಾಲೆ ಒಂದು ತುಂಬಾ ಮಜವಾದ ಆಟ. ಉಯ್ಯಾಲೆಗೆ ಒಂದು ಕಡೆಯಿಂದ ದಬ್ಬಿದಾಗ ಇನ್ನೊಂದು ಕಡೆ ವೇಗದಿಂದ ಹವೆಯಲ್ಲಿ ಹೋಗುವಾಗ ಆಗುವ ಆನಂದ ಅಷ್ಟಿಷ್ಟಲ್ಲ. ಆ ಅನುಭವವನ್ನು ಉಯ್ಯಾಲೆ ಆಡಿಯೇ ತೆಗೆದುಕೊಳ್ಳಬೇಕು, ಕೇಳುವುದರಿಂದ ಮತ್ತು ನೋಡುವುದರಿಂದ ಆ ಅನುಭವ ಸಿಗುವುದಿಲ್ಲ. ಉಯ್ಯಾಲೆ ಆಡುವುದು ಬರೀ ಮಕ್ಕಳಿಗೆ ಅಷ್ಟೇ ಇಷ್ಟ ಅಂತ ಅಲ್ಲ ದೊಡ್ಡವರಿಗೂ ತುಂಬಾ ಇಷ್ಟವಾಗುತ್ತದೆ.

ಈಗ ಯುವಕರು ಉಯ್ಯಾಲೆ ಆಡುತ್ತಿರುವ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಉಯ್ಯಾಲೆಯ ಆನಂದವನ್ನು ಸುಮ್ಮನೆ ತೆಗೆದುಕೊಳ್ಳದೆ ಏನಾದರೂ ವಿಶೇಷ ಮಾಡಿಕೊಳ್ಳುವ ಯೋಚನೆಯಲ್ಲಿ ತಮ್ಮ ಜೀವದ ಜೊತೆಗೆ ಆಟವಾಡಿದ್ದಾರೆ.

ವಿಡಿಯೋ ನೋಡಿದಾಗ ನೀವು ಸಹಿತ ನಿಜಕ್ಕೂ ಶಾಕ್ ಆಗುವದರ ಜೊತೆಗೆ ಹೆದರಿಕೊಳ್ಳುವಿರಿ. ಯುವಕನು ತನ್ನ ಮಿತ್ರನಿಗೆ ಜೋರಾಗಿ ಉಯ್ಯಾಲೆ ತೂಗಲು ಹೋಗಿ ಅಕ್ಷರಶಃ ಮರಣದ ಬಾಗಿಲಿಗೆ ಮುಟ್ಟಿ ಬಂದಿದ್ದಾನೆ. ಇಲ್ಲಿ ಯುವಕನ ಅದೃಷ್ಟವು ಚೆನ್ನಾಗಿದ್ದುದರಿಂದ ಬದುಕುಳಿದಿದ್ದಾನೆ. ಯಾಕೆಂದರೆ ಉಯ್ಯಾಲೆಯು ಬೆಟ್ಟದ ತುತ್ತತುದಿಗೆ ಕಣಿವೆಯ ಕಡೆಗೆ ಮುಖಮಾಡಿ ಇದೆ.

ನೋಡಿ ಈ ವಿಡಿಯೋ…

ವಿಡಿಯೋದಲ್ಲಿ ಒಬ್ಬ ಮಿತ್ರನು ಇನ್ನೊಬ್ಬ ಮಿತ್ರನಿಗೆ ಉಯ್ಯಾಲೆಯಲ್ಲಿ ಕೂಡಿಸಿ ಜೋರಾಗಿ ತೂಗುತ್ತಿದ್ದಾನೆ. ಉಯ್ಯಾಲೆಯಲ್ಲಿ ಕುಳಿತ ಮಿತ್ರನಿಗೆ ಉಯ್ಯಾಲೆಯ ನಿಜವಾದ ಮಜಾ ನೀಡಲು ಇನ್ನೊಬ್ಬ ಮಿತ್ರ ಮುಂದಾಗಿದ್ದಾನೆ. ಆಗ ತೂಗುವ ಮಿತ್ರನು ಬಹುಶಃ ತನ್ನ ಶಕ್ತಿಯನ್ನೆಲ್ಲ ಒಗ್ಗೂಡಿಸಿ ಈ ಕೆಲಸ ಮಾಡುತ್ತಿದ್ದಾನೆ. ಈ ರೀತಿ ಮಾಡುವಾಗ ಆಕಸ್ಮಿಕವಾಗಿ ಆತನ ಕಾಲು ಜಾರಿ ಉಯ್ಯಾಲೆಯ ಹಗ್ಗದಲ್ಲಿ ತೊಡಕಿ ಕಣಿವೆಯ ಅಂಚಿನವರೆಗೆ ಜಾರುತ್ತ ಹೋಗುತ್ತಾನೆ. ಆತನ ಅದೃಷ್ಟ ನೋಡಿ ಕಾಲು ಉಯ್ಯಾಲೆಯ ಹಗ್ಗದಲ್ಲಿ ಸಿಲುಕಿಕೊಂಡಿದ್ದರಿಂದ ಕಣಿವೆಯಲ್ಲಿ ಬೀಳದೇ ಉಯ್ಯಾಲೆಯ ಜೊತೆಗೆ ಹಾಗೆಯೇ ವಾಪಸ್ ಬಂದಿದ್ದಾನೆ.

ತೂಗುವ ಮಿತ್ರನು ಅಕ್ಷರಶಃ ಮರಣದ ಬಾಗಿಲಿಗೆ ಹೋಗಿ ಮುಟ್ಟಿ ಬಂದಿದ್ದಾನೆ ಎಂದೆನಿಸುತ್ತಿದೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ socialstarofficial ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ 3 ಕೋಟಿಗಿಂತಲೂ ಹೆಚ್ಚು ವ್ಯೂಸ್ ದೊರಕಿವೆ. ಹಾಗೂ 8 ಲಕ್ಷ 40 ಸಾವಿರಕ್ಕೂ ಹೆಚ್ಚು ಜನರು ಲೈಕ್ಸ್ ಮಾಡಿದ್ದಾರೆ.