ನಿಮ್ಮ ಬಳಿಯಲ್ಲಿ ಸಹ ಈ ತರಹದ PAN Card ಇದ್ದರೆ ನೀವು ಸಹ 10 ಸಾವಿರ ರೂಪಾಯಿ ದಂಡ ತುಂಬಬೇಕಾಗುತ್ತದೆ, ನಿಯಮ ತಿಳಿದುಕೊಳ್ಳಿ!!
ನಿಮ್ಮ ಕಡೆಗೆ ಪ್ಯಾನ್ ಕಾರ್ಡ್ ಇದ್ದರೆ ನಿಮ್ಮ ಸಲುವಾಗಿ ಇದು ಮಹತ್ವದ ಸುದ್ಧಿಯಾಗಿದೆ. ಪ್ಯಾನ್ ಕಾರ್ಡ್ ಹೋಲ್ಡರ್ ಸಲುವಾಗಿ 31 ಮಾರ್ಚ್ 2022 ರ ವರೆಗೆ ತಮ್ಮ ಪ್ಯಾನ್ ಕಾರ್ಡ್ ನೊಂದಿಗೆ ಆಧಾರ ನೋಂದಣಿ ಮಾಡಲು ಸರಕಾರ ಸಲಹೆ ನೀಡಿದೆ. ಈ ದಿನದ ಒಳಗಾಗಿ ನೀವು ನಿಮ್ಮ ಆಧಾರ್ ಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡದೆ ಇದ್ದಲ್ಲಿ ನಿಮ್ಮ ಪ್ಯಾನ್ ನಿಷ್ಕ್ರಿಯಗೊಳಿಸಲಾಗುತ್ತದೆ. ಅದಲ್ಲದೆ ಒಂದು ವೇಳೆ ನಿಗದಿ ಪಡಿಸಿದ ಅವಧಿಯ ನಂತರ ನಿಮ್ಮ ಆಧಾರ್ ದೊಂದಿಗೆ ಪ್ಯಾನ್ ಲಿಂಕ್ ಮಾಡಲು ಹೋದರೆ ನೀವು 1000 ರೂಪಾಯಿ ಚಾರ್ಜ್ ಸಹ ಕೊಡಬೇಕಾಗುತ್ತದೆ.
ಪ್ಯಾನ್ ಕಾರ್ಡ್ ಹೊಂದಿರುವವರ ಸಮಸ್ಯೆ ಇಷ್ಟಕೆ ಮುಕ್ತಾಯ ಗೊಳ್ಳುವದಿಲ್ಲ, ಏಕೆಂದರೆ ಒಂದು ವೇಳೆ ನೀವು ಇದನ್ನು ಅಂದರೆ ಎರಡನ್ನು ಲಿಂಕ್ ಮಾಡದೆ ಇದ್ದರೆ ಮ್ಯುಚುಅಲ್ ಫಂಡ್, ಸ್ಟಾಕ್, ಬ್ಯಾಂಕ್ ಖಾತೆ ಓಪನ್ ಮಾಡುವದು, ಅಲ್ಲದೆ ಇನ್ನಿತರ ಮಾಧ್ಯಮಗಳಲ್ಲಿ ಹೂಡಿಕೆ ಮಾಡಲು ಬರುವದಿಲ್ಲ.
ಒಂದು ವೇಳೆ ಲಿಂಕ್ ಮಾಡದೆ ಇದ್ದಾಗ ಪ್ಯಾನ್ ನಿಷ್ಕ್ರಿಯಗೊಂಡಿದೆ ಅಂತ ಬೇರೆ ಅಂದರೆ ಹೊಸ ಪ್ಯಾನ್ ಕಾರ್ಡ್ ತಗೆದರೆ ಅದು ಕಾನೂನು ಬಾಹ್ಯ ವಾಗಿರುತ್ತದೆ ಹೀಗಾಗಿ ತೆರಿಗೆ ಕಾಯ್ದೆ 1961 ರ ಕಲಮ್ 272N ಅಡಿಯಲ್ಲಿ ಮೂಲ್ಯ ಅಧಿಕಾರಿ ಇಂಥ ವ್ಯಕ್ತಿಗಳಿಗೆ ದಂಡದ ರೂಪದಲ್ಲಿ 10 ಸಾವಿರ ರೂಪಾಯಿಗಳು ತುಂಬಲು ನಿರ್ದೇಶನ ಕೊಡಬಹುದು.

ಆಧಾರ್ ದೊಂದಿಗೆ ಪ್ಯಾನ್ ಲಿಂಕ್ ಮಾಡುವ ವಿಧಾನ.
★ ಎಲ್ಲಕ್ಕಿಂತ ಮೊದಲು ತೆರಿಗೆ ಅಂದರೆ ಇನ್ಕಾಮ್ ಟ್ಯಾಕ್ಸ್ ವೆಬ್ಸೈಟ್ ಮೇಲೆ ಹೋಗಿ.
★ ಆಧಾರ ಮತ್ತು ಪ್ಯಾನ್ ಲಿಂಕ್ ಮೆನು ಮೇಲೆ ಕ್ಲಿಕ್ ಮಾಡಿ.
★ ಆಧಾರ್ ಕಾರ್ಡ ನಲ್ಲಿದ್ದ ಹಾಗೆ ಹೆಸರು, ಪ್ಯಾನ್ ಕ್ರಮಾಂಕ ಮತ್ತು ಆಧಾರ್ ಕಾರ್ಡ್ ನಂಬರ್ ಟೈಪ್ ಮಾಡಿ.
★ ತದನಂತರ ಕ್ಯಾಪ್ಚಾ ಕೊಡ ಟೈಪ್ ತುಂಬಿರಿ.
★ ನಂತರ ಲಿಂಕ್ ಆಧಾರ್ ಬಟನ್ ಮೇಲೆ ಕ್ಲಿಕ್ ಮಾಡಿ.
★ ನಿಮ್ಮ ಪ್ಯಾನ್ ಆಧಾರ್ ಕ್ಕೆ ಲಿಂಕ್ ಮಾಡಲಾಗುವದು.
ಆಧಾರ್ ಗೆ ಪ್ಯಾನ್ ಲಿಂಕ್ ಮಾಡಲು ಇನ್ನೊಂದು ವಿಧಾನ ವಿದೆ.
ನೀವು ನಿಮ್ಮ ಮೊಬೈಲ್ ನಲ್ಲಿ ಸಂದೇಶ ಅಂದರೆ ಮೆಸೇಜ್ ನಲ್ಲಿ ಹೋಗಿ UIDPAN ಟೈಪ್ ಮಾಡಿ ತದನಂತರ 12 ಸಂಖ್ಯೆಯ ಆಧಾರ್ ನಂಬರ್ ಟೈಪ್ ಮಾಡಿ, ಅದರ ಮುಂದೆ 10 ಸಂಖ್ಯೆಯ ಪ್ಯಾನ್ ನಂಬರ್ ಟೈಪ್ ಮಾಡಿ ಈ ಸಂದೇಶವನ್ನು 567678 ಅಥವಾ 56161 ಈ ನಂಬರಗೆ ಕಳುಹಿಸಿ.
ನಿಷ್ಕ್ರಿಯ ಪ್ಯಾನ್ ಹೇಗೆ ಸಕ್ರಿಯ ಮಾಡುವದು.
ಒಂದು ವೇಳೆ ನಿಮ್ಮ ಪ್ಯಾನ್ ಬಂದ ಅಂದರೆ ನಿಷ್ಕ್ರಿಯ ವಾಗಿದ್ದರೆ ಅದನ್ನು ಸಕ್ರಿಯ ಮಾಡಲು ಸಹ ಬರುತ್ತದೆ. ಇದಕ್ಕಾಗಿ ನೀವು ಮೆಸೇಜ್ ಬಾಕ್ಸ್ ನಲ್ಲಿ ಹೋಗಿ ನಿಮ್ಮ ನೋಂದಣಿಕೃತ ಮೊಬೈಲ್ ಸಂಖ್ಯೆಯಿಂದ 10 ಸಂಖ್ಯೆಯ ಪ್ಯಾನ್ ಕಾರ್ಡ್ ನಂಬರ್ ಟೈಪ್ ಮಾಡಿ ಸ್ಪೇಸ್ ಕೊಡಿ ತದನಂತರ ನಿಮ್ಮ 12 ಸಂಖ್ಯೆಯ ಆಧಾರ ನಂಬರ್ ಟೈಪ್ ಮಾಡಿ ಮತ್ತು ಈ ಮೆಸೇಜ್ ನ್ನು 567678 ಅಥವಾ 56161 ನಂಬರ್ ಗೆ ಎಸ್ ಎಂ ಎಸ್ ಮಾಡಿರಿ.