ವರ ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಮಾಡಿದ ಈ ರಾದ್ಧಾಂತದಿಂದ ವಧುವಿನ ಮುಖದ ಮೇಕಪ್ ಕ್ಷಣಾರ್ಧದಲ್ಲಿ ಇಳಿಯಿತು! ನೋಡಿ ಈ ದೃಶ್ಯ..

ಯುವಕ ಇರಲಿ ಯುವತಿ ಇರಲಿ ಮದುವೆಯ ಸುಂದರವಾದ ಕ್ಷಣಗಳು ಇಬ್ಬರ ಜೀವನದಲ್ಲಿಯೂ ತುಂಬಾ ತುಂಬಾ ಮಹತ್ವದಾಗಿರುತ್ತವೆ. ಮದುವೆಯ ನಂತರ ಪ್ರತಿಯೊಂದು ಜೋಡಿಯ ಹೊಸ ಜೀವನ ಪ್ರಾರಂಭವಾಗುತ್ತದೆ. ಅದರಲ್ಲಿಯೂ ಯುವತಿಗಂತೂ ಆ ಕ್ಷಣ ತುಂಬಾ ಭಾವನಾತ್ಮಕವಾಗಿ ಇರುತ್ತದೆ. ಕಾರಣ ಹುಟ್ಟಿದ, ಬೆಳದ, ಆಡಿದ ಮನೆಯನ್ನು ತ್ಯಜಿಸಿ ಬೇರೊಂದು ಮನೆಯಲ್ಲಿ ಭವಿಷ್ಯದ ಸುಂದರ ಕನಸುಗಳನ್ನು ಹೊತ್ತು ಹೋಗುವವಳಿರುತ್ತಾಳೆ. ಇಂದಿನ ಪೀಳಿಗೆ ತಮ್ಮ ಮದುವೆಯ ಬಗ್ಗೆ ಕೆಲವೊಂದು ಸುಂದರ ಹಾಗೂ ಸುನಿಯೋಜಿತವಾದ ಯೋಜನೆಗಳನ್ನು ಮೊದಲೇ ಹಾಕಿಕೊಂಡಿರುತ್ತಾರೆ. ಉದಾಹರಣೆಗೆ ಹೇಳುವುದಾದರೆ ಮದುವೆಯಲ್ಲಿ ಯಾವ ರೀತಿಯ ಬಟ್ಟೆಗಳನ್ನು ತೊಟ್ಟು ಕೊಳ್ಳುವುದು, ಯಾವ ಹಾಡಿನ ಸಮಯದಲ್ಲಿ ಸ್ಟೇಜ್ ಮೇಲೆ ಎಂಟ್ರಿ ಮಾಡುವುದು, ಯಾವ ಮದುವೆ ಹಾಲ್ ನಲ್ಲಿ ತಮ್ಮ ಮದುವೆ ಮಾಡಿಕೊಳ್ಳುವುದು, ಮದುವೆಯಲ್ಲಿ ಯಾವರೀತಿಯ ಮೃಷ್ಟಾನ್ನ ಭೋಜನೆಯ ವ್ಯವಸ್ಥೆ ಇರಬೇಕು ಹೀಗೆಲ್ಲಾ.

ಇಷ್ಟೆಲ್ಲಾ ಆದಮೇಲೆ ಮದುವೆಯ ಕೊನೆಯ ಕ್ಷಣದಲ್ಲಿ ಈ ಇಬ್ಬರೂ ಮದುಮಕ್ಕಳಲ್ಲಿ ಯಾರಾದರೂ ಒಬ್ಬರು ಮಣ್ಣು ತಿನ್ನುವ ಕೆಲಸ ಮಾಡಿದರೆ ಅಥವಾ ಮದುವೆಗೆ ನಿರಾಕರಿಸಿದರೆ ಎರಡನೆಯ ವ್ಯಕ್ತಿಯ ಮನಸ್ಥಿತಿ ಹೇಗಾಗುತ್ತದೆ ಎಂಬುದರ ಬಗ್ಗೆ ನಾವು ವಿಚಾರಮಾಡಲು ಸಹ ಸಾಧ್ಯವಿಲ್ಲ. ಎರಡನೇ ವ್ಯಕ್ತಿಗೆ ಆ ಪರಿಸ್ಥಿತಿಯಲ್ಲಿ ಏನು ಮಾಡಬೇಕೆಂಬುದೇ ತಿಳಿಯುವುದಿಲ್ಲ.

ಇದೇ ವಿಷಯಕ್ಕೆ ಸಂಬಂಧಿಸಿದ ವಿಡಿಯೋವೊಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ನೋಡಲಾಗಿ, ತುಂಬಿದ ಕಲ್ಯಾಣ ಮಂಟಪದಲ್ಲಿ ಮದುವೆ ವಿಧಿವಿಧಾನಗಳು ನಡೆಯುತ್ತಿವೆ. ಸಂಬಂಧಿಕರೆಲ್ಲರೂ ಕುಳಿತು ನಡೆಯುತ್ತಿರುವ ವಿಧಿವಿಧಾನಗಳನ್ನು ವೀಕ್ಷಿಸುವಾಗ ಎಲ್ಲರ ದೃಷ್ಟಿ ವಧು-ವರರ ಮೇಲೆಯೇ ನೆಟ್ಟಿತ್ತು. ಕ್ಯಾಮೆರಾಮನ್ ಹಾಗೂ ಫೋಟೋಗ್ರಾಫರ್ ಸಹ ಈ ಕ್ಷಣಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಿದ್ದರು. ಆಗ ಪುರೋಹಿತರು ವರನಿಗೆ ವಧುವಿನ ಕೊರಳಲ್ಲಿ ಮಾಂಗಲ್ಯ ಕಟ್ಟಲು ಹೇಳುವದಷ್ಟೇ ತಡ, ವರ ತನ್ನ ಪತ್ನಿಯಾಗುವವಳಿಗೆ ಬಿಟ್ಟು ಅಲ್ಲಿಯೇ ವಧುವಿನ ಹಿಂದೆ ನಿಂತ ಬೇರೊಂದು ಹುಡುಗಿಯ ಕೊರಳಲ್ಲಿ ಹಠಾತ್ತನೆ ಮಾಂಗಲ್ಯ ಕಟ್ಟಿದ್ದಾನೆ.

ದಿಡೀರ್ ಈ ವಿಚಿತ್ರ ದೃಶ್ಯವನ್ನು ನೋಡಿದ ಮದುವೆ ಮಂಟಪದಲ್ಲಿಯ ಅತಿಥಿಗಳೆಲ್ಲರಿಗೂ ಒಮ್ಮೆಲೆ ಗರ ಬಡಿದಂತಾಗಿದೆ. ಇಲ್ಲಿ ಎಲ್ಲಕ್ಕೂ ದೊಡ್ಡ ಶಾಕ್ ಪಾಪ ನವವಧುವಿಗೆ ಆಗಿದೆ. ತಾನು ಬಯಸಿದ ಹಾಗೂ ತನ್ನ ಬಾಳ ಸಂಗಾತಿಯಾಗುವವನು ಕಲ್ಯಾಣಮಂಟಪದಲ್ಲಿ ಎಲ್ಲರ ಎದುರಿಗೆ ತನ್ನ ಜೊತೆಗೆ ಹೀಗೆ ನಡೆದುಕೊಂಡನಲ್ಲ ಎಂಬ ಭಾವನೆ ಆಕೆಗೆ ನೋವು ನೀಡುತ್ತಿರಬಹುದು.

ವೀಡಿಯೋ ನೋಡಿ

ಪ್ರಸ್ತುತ ವಿಡಿಯೋ ಯಾರದು ಮತ್ತು ಎಲ್ಲಿಯದು ಎಂಬುದು ಮಾತ್ರ ತಿಳಿದುಬಂದಿಲ್ಲ. ಈ ವಿಡಿಯೋ ನೋಡಿದ ನೆಟ್ಟಿಗರು ಮಾತ್ರ ವರನಿಗೆ ಹಿಡಿಶಾಪ ಹಾಕುತ್ತಿದ್ದಾರೆ.