Video: ಸಿಂಹವನ್ನು ನಾಯಿಯಂತೆ ಹೊತ್ತು ಸಾಗಿದ ಮಹಿಳೆ! ಬೆ#ಚ್ಚಿಬಿಳಿಸುವ ವೈರಲ್ ವಿಡಿಯೋ ನೋಡಿ!
ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ವಿಭಿನ್ನ ಮನಸ್ಥಿತಿ ಇರುತ್ತದೆ. ಅವರ ಮನಸ್ಥಿತಿಯೇ ಅವರನ್ನು ಪ್ರತ್ಯೇಕಿಸುತ್ತದೆ. ಸಾಮಾನ್ಯವಾಗಿ ಜನರು ಪ್ರಾಣಿಗಳನ್ನು ತುಂಬಾ ಇಷ್ಟಪಡುತ್ತಾರೆ ಮತ್ತು ಅವುಗಳನ್ನು ಮನೆಯಲ್ಲಿ ಸಾಕಲು ಇಷ್ಟಪಡುತ್ತಾರೆ. ಕೆಲವು ಜನರು ಕಾಡು ಪ್ರಾಣಿಗಳನ್ನು ತುಂಬಾ ಇಷ್ಟಪಡುತ್ತಾರೆ ಮತ್ತು ಅವುಗಳನ್ನು ಸಹ ಸಾಕುತ್ತಾರೆ. ಸದ್ಯಕ್ಕೆ ಸಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಈ ವೀಡಿಯೋದಲ್ಲಿ ಮಧ್ಯರಾತ್ರಿಯಲ್ಲಿ ಬಾಲಕಿಯೊಬ್ಬಳು ಸಿಂಹವನ್ನು ಮಡಿಲಲ್ಲಿಟ್ಟುಕೊಂಡು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ವರದಿಗಳ ಪ್ರಕಾರ, ಪ್ರಸ್ತುತ ವಿಡಿಯೋ ಕುವೈತ್ ನಲ್ಲಿಯದು ಇದೆಯಂದು ತಿಳಿದುಬಂದಿದೆ. ವಾಸ್ತವವಾಗಿ, ಸಾಕು ಸಿಂಹದ ಮರಿಯು ಕುಟುಂಬದ ಮನೆಯಿಂದ ಓಡಿಹೋಗಿತ್ತು. ಇದಾದ ಬಳಿಕ ಸಿಂಹದ ಮಾಲೀಕರು ಪೊಲೀಸರಿಗೂ ಮಾಹಿತಿ ನೀಡಿದ್ದರು. ಎಲ್ಲರೂ ರಾತ್ರಿಯಲ್ಲಿ ಓಡಿ ಹೋದ ಸಿಂಹದ ಮರಿಯನ್ನು ಹುಡುಕಲು ಹೊರಟರು. ಅಷ್ಟರಲ್ಲಿ ಜನರು ಸಿಂಹವೊಂದು ಬಯಲಿನಲ್ಲಿ ಹೋಗುವದನ್ನು ನೋಡಿದರು. ಆಗ ಅಲ್ಲಿದ್ದ ಜನರಲ್ಲಿ ಗದ್ದಲ ಉಂಟಾಯಿತು. ಈ ಗದ್ದಲದ ಧ್ವನಿ ಕೇಳಿ ಈ ಯುವತಿ ಅಲ್ಲಿಗೆ ಓಡಿ ಹೋದಳು. ತದನಂತರ ಅಲ್ಲಿದ್ದ ಸಿಂಹವನ್ನು ಎತ್ತಿಕೊಂಡು ಅದನ್ನು ಮನೆಗೆ ತೆಗೆದುಕೊಂಡು ಹೋಗಲು ಗಾಡಿಯಲ್ಲಿ ಹಾಕಿದಳು.
ಈ ವಿಡಿಯೋ ನೋಡಿದ ನಂತರ ಸಾಮಾಜಿಕ ಜಾಲತಾಣ ಬಳಕೆದಾರರು ಬೆಚ್ಚಿಬಿದ್ದಿದ್ದಾರೆ. ತಮ್ಮ ಲೈಕ್‌ಗಳು ಮತ್ತು ಕಾಮೆಂಟ್‌ಗಳ ಮೂಲಕ ತಮ್ಮ ಪ್ರತಿಕ್ರಿಯೆಯನ್ನು ಹಂಚಿಕೊಳ್ಳುತ್ತಿದ್ದಾರೆ. ವೀಡಿಯೊವನ್ನು ಇಲ್ಲಿಯವರೆಗೆ 3 ಮಿಲಿಯನ್ ಬಾರಿ ವೀಕ್ಷಿಸಲಾಗಿದೆ. ಬಾಲಕಿಯ ಮಡಿಲಲ್ಲಿ ಸಿಂಹ ಬಹಳಷ್ಟು ಚಡಪಡಿಸುತ್ತಾ ಇರುವದನ್ನು ವಿಡಿಯೋದಲ್ಲಿ ಕಾಣಬಹುದು. ಇದನ್ನು ಕಂಡು ತಿಳಿದು ಬರುವದನೆಂದರೆ ಸಿಂಹದ ಮರಿ ಆ ಯುವತಿಯ ಮಡಿಲಿನಿಂದ ಒಮ್ಮೆ ಯಾದರರೂ ಇಳಿದು ಓಡಿ ಹೋಗಬೇಕು ಅನ್ನೋ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿರುವದು ಕಂಡು ಬರುತ್ತದೆ. ಈಗ ಈ ವೀಡಿಯ ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ನೋಡಲು ಲಭ್ಯವಿದೆ.
ವೀಡಿಯೋ ನೋಡಿ
My neighbor and her dog seemed to not be getting along last night pic.twitter.com/fUGcpuTkMY
— Arlong (@ramseyboltin) January 3, 2022
ಅರಬ್ ಟೈಮ್ಸ್ ಪ್ರಕಾರ, ಸಿಂಹದ ಪಲಾಯನದ ಬಗ್ಗೆ ಕುವೈತ್ ಆಂತರಿಕ ಸಚಿವಾಲಯಕ್ಕೂ ತಿಳಿಸಲಾಗಿತ್ತು ಆದರೆ, ಪೊಲೀಸರು ಬರುವ ಮುನ್ನವೇ ಅದರ ಒಡತಿ ಸಿಂಹವನ್ನು ಹಿಡಿದಿದ್ದಾಳೆ. ಸ್ಥಳೀಯ ವರದಿಗಳ ಪ್ರಕಾರ, ಹುಡುಗಿ ಮತ್ತು ಆಕೆಯ ತಂದೆ ಸಿಂಹದ ಓನರ್ ಆಗಿದ್ದಾರೆ. ಕುವೈತ್‌ನಲ್ಲಿ ಇಂತಹ ಅನೇಕ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಬಂದ ತಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತವೆ.