ಅತಿಥಿಗಳು ಮದುಮಗಳಿಗೆ ಹವೆಯಲ್ಲಿ ಹಾರಿಸುತ್ತಿದ್ದಾಗ… ಮುಂದೇನಾಯಿತು? ಮೈನವಿರೇಳಿಸುವ ವೆಡ್ಡಿಂಗ್ ವಿಡಿಯೋ…
ಮದುವೆಯಲ್ಲಿ ನಡೆಯುವ ಅನೇಕ ಚಿಕ್ಕಪುಟ್ಟ ಘಟನೆಗಳ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಈಗ ಇದೇ ರೀತಿಯ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಶೇರ್ ಆಗುತ್ತಿದೆ.
ಮದುವೆಗಾಗಿ ಬಂದ ಅತಿಥಿಗಳು ವಧುವಿನ ಜೊತೆಗೆ ನಡೆದುಕೊಂಡ ರೀತಿ ಈ ವಿಡಿಯೋದಲ್ಲಿ ನೋಡಿದಾಗ ಒಂದು ಕ್ಷಣ ನಿಜಕ್ಕೂ ಮೈ ನಡಗುತ್ತದೆ. ಅತಿಥಿಗಳು ವಧುವನ್ನು ಎತ್ತಿ ಹವೆಯಲ್ಲಿ ಹಾರಿಸುತ್ತಾರೆ. ಈ ಸಂದರ್ಭದಲ್ಲಿ ಆಕೆಯನ್ನು ಹಿಡಿಯುವಾಗ ಕೆಳಗಿನವರ ಬ್ಯಾಲೆನ್ಸ್ ತಪ್ಪುತ್ತದೆ. ಆಗ ಮದುಮಗಳಿಗೂ ಸಹ ತನ್ನನ್ನು ತಾನು ಬ್ಯಾಲೆನ್ಸ್ ಮಾಡಿಕೊಳ್ಳಲು ಕಷ್ಟಸಾಧ್ಯವಾಗುತ್ತದೆ. ಆದರೆ ಅದೃಷ್ಟವಶಾತ್ ಆಕೆಯ ಬಾಳಸಂಗಾತಿ ವರ ಮಾತ್ರ ಸರಿಯಾದ ಸಮಯಕ್ಕೆ ಆಕೆಯನ್ನು ಕೆಳಗೆ ಬೀಳದಂತೆ ಎಚ್ಚರಿಕೆಯಿಂದ ಹಿಡಿಯುವಲ್ಲಿ ಯಶಸ್ವಿಯಾಗುತ್ತಾನೆ. ಆದರೆ ಇನ್ನೇನು ನಾನು ನೆಲದ ಮೇಲೆ ಬಿದ್ದೇ ಬೀಳುತ್ತೇನೆ ಎಂಬ ಗಾಬರಿಯ ಭಾವನೆ ವಧುವಿನ ಮುಖದ ಮೇಲೆ ಸ್ಪಷ್ಟವಾಗಿ ಕಾಣುತ್ತಿರುತ್ತದೆ.
ವಿಡಿಯೋ ನೋಡಿ
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ ನೇಟಿಜನ್ಸ್ ಗಳು ಸಹ ಆಶ್ಚರ್ಯ ವ್ಯಕ್ತ ಮಾಡಿದ್ದಾರೆ. ಜೊತೆಗೆ ವಿವಿಧ ಪ್ರತಿಕ್ರಿಯೆಗಳನ್ನು ಸಹ ನೀಡುತ್ತಿದ್ದಾರೆ. ಒಬ್ಬ ಯೂಸರ್ ಮದುವೆಯಲ್ಲಿ ಈ ರೀತಿಯ ತಮಾಷೆ ಕೆಲವೊಮ್ಮೆ ದುಬಾರಿಯಾಗಿ ಪರಿಣಮಿಸುತ್ತದೆ ಹೀಗೆ ವರ್ತಿಸುವುದನ್ನು ನಿಲ್ಲಿಸಬೇಕು ಎಂದಿದ್ದಾನೆ.
ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ proposalspage ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಇಲ್ಲಿಯವರೆಗೆ ಈ ವಿಡಿಯೋವನ್ನು ಸಾವಿರಾರು ಜನ ನೋಡಿದ್ದಾರೆ ಮತ್ತು ಲೈಕ್ ಸಹ ಮಾಡಿದ್ದಾರೆ.