ಈ ಎರಡೇ ಎರಡು ಉಪಾಯಗಳಿಂದ ಕರೆಂಟ್ ಬಿಲ್ ಬರುತ್ತೆ ಅರ್ಧಕ್ಕಿಂತ ಕಡಿಮೆ; ಮನೆಯ ಈ ಗೆಜೆಟ್ಸ್ ಗಳಲ್ಲಿ ಮಾಡಿ ಬದಲಾವಣೆ…!

ಎಲೆಕ್ಟ್ರಿಸಿಟಿ ಬಿಲ್ ತಿಂಗಳ ಖರ್ಚಿನಲ್ಲಿ ಎಲ್ಲಕ್ಕೂ ದೊಡ್ಡದಾದ ಖರ್ಚು ಎಂದೇ ಹೇಳಬಹುದು. ಹೀಗಾಗಿ ಅನೇಕ ಜನರು ಎಲೆಕ್ಟ್ರಿಸಿಟಿ ಬಿಲ್ ಹೇಗಾದರೂ ಮಾಡಿ ಕಡಿಮೆ ಬರಬೇಕೆಂದು ಇಚ್ಛಿಸಿ ಏನಾದರೂ ಪ್ರಯತ್ನ ಮಾಡುತ್ತಿರುತ್ತಾರೆ. ಆದರೆ ಓಡಾಟದ ಈ ಯುಗದಲ್ಲಿ ಅನೇಕ ಜನರು ಇದರ ಕಡೆಗೆ ಗಮನ ನೀಡುವದೇ ಇಲ್ಲ. ಇಲ್ಲಿ ಹೇಳುವ ಕೆಲವು ಚಿಕ್ಕ ಪುಟ್ಟ ಬದಲಾವಣೆಗಳನ್ನು ಮಾಡಿದರೆ ಮುಂಬರುವ ಕರೆಂಟ್ ಬಿಲ್ ನಲ್ಲಿ ನಿಶ್ಚಿತವಾಗಿಯೂ ಇಳಿಮುಖ ಕಾಣಬಹುದಾಗಿದೆ.

ಚಿಕ್ಕ ಬದಲಾವಣೆ, ದೊಡ್ಡ ಲಾಭ – ಕರೆಂಟ್ ಬಿಲ್ ಕಡಿಮೆ ಬರುವ ಸಲುವಾಗಿ ಮನೆಯಲ್ಲಿಯ ಕೆಲವು ಡಿವೈಸ್ ನಲ್ಲಿ ಚಿಕ್ಕ ಪುಟ್ಟ ಬದಲಾವಣೆಗಳನ್ನು ಮಾಡಬಹುದು.

  • ತುಂಬಾ ಹಳೆಯದಾದ ಬಲ್ಬ್ ಗಳನ್ನು ಉಪಯೋಗಿಸುತ್ತಿದ್ದರೆ ಮೊದಲು ಅಂಥ ಬಲ್ಬ್ ಗಳನ್ನು ತೆಗೆದುಹಾಕಿ ಅದರ ಬದಲಾಗಿ LED ಬಲ್ಬ್ ಗಳನ್ನು ಬಳಸಿ. ಇದರಿಂದ ಕರೆಂಟ್ ಬಿಲ್ ಕಡಿಮೆ ಬರಲು ಸಹಾಯವಾಗುತ್ತದೆ. ಕಾರಣ ಹಳೆಯ ಬಲ್ಬ್ ಗಳಿಂದ ಕರೆಂಟ್ ಬಿಲ್ ಹೆಚ್ಚು ಬರುತ್ತದೆ.
  • ಚಳಿಯ ಈ ದಿನಗಳಲ್ಲಿ ಹೀಟರ್ ಉಪಯೋಗ ಹೆಚ್ಚಾಗಿ ಆಗುತ್ತದೆ. ಹೆಚ್ಚು ಕ್ಷಮತೆಯ ಹೀಟರ್ ಉಪಯೋಗಿಸುತ್ತಿದ್ದರೆ ಅದರ ನೇರ ಪರಿಣಾಮ ಕರೆಂಟ್ ಬಿಲ್ ಮೇಲೆ ಆಗುತ್ತದೆ. ಹೆಚ್ಚು ಕ್ಷಮತೆಯ ಹೀಟರ್ ಹೆಚ್ಚಿನ ಕರೆಂಟ್ ಬಿಲ್ ಬರಲು ಕಾರಣವಾಗುತ್ತದೆ. ಹೀಗಾಗಿ ಹೀಟರ್ ಬದಲಾಗಿ ಬ್ಲೋರ್ ಲಾಭದಾಯಕವಾಗಿದೆ. ಇದು ಕಡಿಮೆ ಕರೆಂಟ್ ತೆಗೆದುಕೊಳ್ಳುವುದರ ಜೊತೆಗೆ ಸುರಕ್ಷಿತವೂ ಹೌದು.

ಅನೇಕ ಮನೆಗಳಲ್ಲಿ ಜಳಕಕ್ಕೆ ನೀರು ಕಾಯಿಸಲು ಹಳೆಯ ಗೀಜರ್ ಅಥವಾ ರಾಡ್ ಉಪಯೋಗಿಸುತ್ತಾರೆ. ಇವೆರಡರಿಂದಲೂ ಕರೆಂಟ್ ಬಿಲ್ ಹೆಚ್ಚಿಗೆ ಬರುತ್ತದೆ. ಆದ್ದರಿಂದ ಹಳೆಯ ಗೀಜರ್ ನ್ನೇ ಒಂದು ವೇಳೆ ಉಪಯೋಗಿಸುತ್ತಿದ್ದರೆ ಮೊದಲು ಅದರ ಉಪಯೋಗ ನಿಲ್ಲಿಸಿ. ಅದರ ಬದಲಾಗಿ 5 ಸ್ಟಾರ್ ರೇಟಿಂಗ್ ಇರುವ ಗೀಜರ್ ಉಪಯೋಗಿಸುವುದು ಲಾಭದಾಯಕವಾಗಿದೆ. ಇದರಿಂದ ನಿಜಕ್ಕೂ ಕರೆಂಟ್ ಬಿಲ್ ಕಡಿಮೆ ಬರಲು ಸಹಾಯವಾಗುತ್ತದೆ.