ಮೈಮೇಲೆ ತುರಿಕೆಯ ಪೌಡರ್ ಎಸೆದು ಬ್ಯಾಂಕಿನ ಬಾಗಿಲಲ್ಲೇ ಲೂಟಿ ಮಾಡಿದರು 2 ಲಕ್ಷ ರೂಪಾಯಿಗಳನ್ನು…ನೋಡಿ ಈ ಘಟನೆಯ CCTV ಫುಟೇಜ್!

ಹಣ ದೋಚುವಾಗ ಅಥವಾ ಲೂಟಿ ಮಾಡುವಾಗ ಲೂಟಿಕೋರರು ಯಾವ ಯಾವ ಐಡಿಯಾಗಳ ಮೊರೆ ಹೋಗುತ್ತಾರೆ ಹೇಳಲು ಸಾಧ್ಯವಿಲ್ಲ. ಮಹಾರಾಷ್ಟ್ರದ ಬೀಡ್ ಜಿಲ್ಲೆಯ 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಪರಳಿ ನಗರದಲ್ಲಿ ಇಂಥದ್ದೇ ಒಂದು ಘಟನೆ ನಡೆದಿದೆ. ಬ್ಯಾಂಕಿನಿಂದ ಹೊರಬರುತ್ತಿರುವಾಗ ರಿಟಾಯರ್ಡ್ ಸೀನಿಯರ್ ಸಿಟಿಜನ್ ಮೈಮೇಲೆ ತುರಿಕೆಯ ಪೌಡರ್ ಎಸೆದು 2 ಲಕ್ಷ ರೂಪಾಯಿಗಳನ್ನು ಲೂಟಿ ಮಾಡಿದ್ದಾರೆ. ಈ ಘಟನೆ ಅಲ್ಲಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಪ್ರಭಾಕರ್ ಶಿಂದೆ ಹೆಸರಿನ ವ್ಯಕ್ತಿಯೊಬ್ಬರು ತಮ್ಮ ಮಗನಿಗೆ ಹಣ ನೀಡುವ ಸಲುವಾಗಿ ಬ್ಯಾಂಕಿನಿಂದ 2 ಲಕ್ಷ 10 ಸಾವಿರ ರೂಪಾಯಿಗಳನ್ನು ತೆಗೆದು ಮನೆಗೆ ಬರುವಾಗ ಕಳ್ಳರು ಅವರ ಮೇಲೆ ನಿಗಾ ಇಟ್ಟು ಈ ದೋಚುವ ಕೆಲಸ ಮಾಡಿದ್ದಾರೆ. ಪ್ರಭಾಕರ್ ಅವರ ಮೇಲೆ ಮೊದಲು ತುರಿಕೆಯ ಪೌಡರ್ ಎಸೆದು ನಂತರ ಹಣದ ಚೀಲವನ್ನು ಹಾರಿಸಿದ್ದಾರೆ.

ವಿಡಿಯೋ ನೋಡಿ

ಹಾಡುಹಗಲೇ ನಡೆದ ಈ ಘಟನೆಯಿಂದಾಗಿ ಲೋಕಲ್ ಜನರು ಭಯಭೀತರಾಗಿದ್ದಾರೆ. ಮುಂದಿನ ತನಿಖೆ ಪೊಲೀಸರು ನಡೆಸಿದ್ದಾರೆ.