ಶಿಸ್ತು ಎಂದರೆ ಶಿಸ್ತು..! ಆಸ್ಟ್ರೇಲಿಯಾದ ಪ್ರಧಾನಮಂತ್ರಿಗಳು ನಂಬರ್ 1 ಆಟಗಾರ ಜೋಕೋವಿಚ್ ಗೆ ಕಲಿಸಿದರು ಪಾಠ; ವೀಸಾ ಮಾಡಿದರು ರದ್ದು, ಮತ್ತು…

ಕೋರೋನಾ ಹೆಮ್ಮಾರಿಯ ಈ ಸಮಯದಲ್ಲಿ ಸದ್ಯ ಆಸ್ಟ್ರೇಲಿಯಾ ಓಪನ್ ಟೆನಿಸ್ ಸ್ಪರ್ಧೆ ನಡೆಯಲಿದೆ. ಈ ಸ್ಪರ್ಧೆ ಜನವರಿ 17 ರಿಂದ ಪ್ರಾರಂಭವಾಗಲಿದೆ. ಆದರೆ ಈ ಸ್ಪರ್ಧೆ ನಡೆಯುವ ಮೊದಲೇ ದೊಡ್ಡ ಗಲಾಟೆಯೊಂದು ಹೆಸರು ಮಾಡುತ್ತಿದೆ. ಅದಕ್ಕೆ ಕಾರಣ ನೋವಾಕ್ ಜೋಕೋವಿಚ್. ಸದ್ಯ ಈ ಆಟಗಾರನ ವೀಸಾ ರದ್ದು ಮಾಡಲಾಗಿದೆ. 20 ಗ್ರಾಂಡ್ ಸ್ಲಾಮ್ ಗಳನ್ನು ತಮ್ಮ ಹೆಸರಿಗೆ ಮಾಡಿಕೊಂಡಿರುವ ಆಟಗಾರ ಬುಧವಾರ ಮೆಲ್ಬರ್ನ್ ಗೆ ತಲುಪಿದರೇನೋ ನಿಜ. ಆದರೆ ಏರ್ಪೋರ್ಟ್ ನಲ್ಲಿ ಸುಮಾರು ಒಂದು ಗಂಟೆಯವರೆಗೆ ಅವರನ್ನು ಹೊರಗೆ ಬಿಡಲಿಲ್ಲ. ತದನಂತರ ಪ್ರವೇಶಕ್ಕೆ ಸಂಬಂಧಪಟ್ಟ ಅಗತ್ಯ ದಾಖಲೆಗಳ ಕೊರತೆಯಿಂದಾಗಿ ಅವರ ವೀಸಾ ರದ್ದು ಮಾಡಲಾಯಿತು.

ಜೊಕೊವಿಚ್ ವೈದ್ಯಕೀಯ ಸೌಲಭ್ಯಗಳನ್ನು ಪಡೆಯುವಲ್ಲಿ ಎಷ್ಟೊಂದು ಬಿಜಿ ಇದ್ದರೆಂದರೆ ಆ ಸಮಯದಲ್ಲಿ ಅವರು ತಮ್ಮ ವೀಸಾ ಕಡೆಗೆ ಸಂಪೂರ್ಣವಾಗಿ ಗಮನವೇ ನೀಡಿಲ್ಲ. ಹೀಗಾಗಿ ಮೆಲ್ಬರ್ನ್ ಏರ್ಪೋರ್ಟ್ ನಲ್ಲಿ ಅನೇಕ ಸಮಸ್ಯೆಗಳಿಗೆ ಎದುರಾಗಬೇಕಾಯಿತು. ಇನ್ನೊಂದು ಮಹತ್ವದ ವಿಷಯವೇನೆಂದರೆ ಜೊಕೊವಿಚ್ ಕಡೆಗೆ ವ್ಯಾಕ್ಸೀನ್ ಸರ್ಟಿಫಿಕೇಟ್ ಸಹ ಇರಲಿಲ್ಲ. ಅದಿಲ್ಲದೇನೆ ಅವರು ಈ ಸ್ಪರ್ಧೆಯಲ್ಲಿ ಆಡಲು ಇಚ್ಚಿಸುತ್ತಿದ್ದರು.

ಒಂದು ದಿವಸ ಮೊದಲೇ ಜೋಕೋವಿಚ್ ಗೆ ಆಸ್ಟ್ರೇಲಿಯನ್ ಓಪನ್ ನಲ್ಲಿ ಸಹಭಾಗಿಯಾಗಲು ಆಸ್ಟ್ರೇಲಿಯಾ ಸರಕಾರ ಅನುಮತಿ ನೀಡಿತ್ತು. ಹಾಗೂ ವ್ಯಾಕ್ಸಿನ್ ನಿಯಮದಲ್ಲಿಯೂ ರಿಯಾಯತಿ ನೀಡಿತ್ತು. ಇದರ ನಂತರ ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಸ್ಕಾಟ್ ಮಾರಿಸನ್ ಪತ್ರಿಕಾಗೋಷ್ಠಿಯಲ್ಲಿ, ನಿಯಮಗಳು ಎಲ್ಲರಿಗೂ ಸಮಾನವಾಗಿವೆ, ಯಾವುದೇ ವ್ಯಕ್ತಿ ಕಾನೂನಿಗಿಂತ ಮೇಲಿಲ್ಲ ಎಂದಿದ್ದಾರೆ.

ಜೋಕೋವಿಚ್ ಅವರ ವೀಸಾ ಹಿಂಪಡೆಯಲಾಗಿದೆ, ನಿಯಮಗಳು ಎಲ್ಲರಿಗೂ ಒಂದೇ ಆಗಿರುತ್ತವೆ. ಯಾವಾಗ ನಮ್ಮ ಗಡಿಯ ಪ್ರಶ್ನೆ ಉದ್ಭವಿಸುತ್ತದೆ ಆಗ ನಿಯಮಗಳಿಗೆ ಮೇಲ್ಪಟ್ಟು ಯಾರು ಇಲ್ಲ. ಜಗತ್ತಿನಲ್ಲಿ ಕೊರೊನಾದಿಂದ ಸಾವುಗಳು ಸಂಭವಿಸುವ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಎಲ್ಲ ದೇಶಗಳಿಗಿಂತ ಅತ್ಯಂತ ಕಡಿಮೆ ಮರಣ ಪ್ರಮಾಣ ಹೊಂದಿದೆ, ಹಾಗೂ ನಾವು ತುಂಬಾ ಜಾಗೃತರಾಗಿದ್ದೇವೆ, ಎಂದು ಟ್ವೀಟ್ ಮುಖಾಂತರ ಸಂದೇಶ ನೀಡಿದ್ದಾರೆ.

ಏತನ್ಮದ್ಯೆ ಸರ್ಬಿಯಾದ ರಾಷ್ಟ್ರಪತಿ ಅಲೆಕ್ಸಾಂಡರ್ ವುಸಿಕ್ ಅವರು ಇನ್ಸ್ಟಾಗ್ರಾಂ ನಲ್ಲಿ ಒಂದು ಪೋಸ್ಟ್ ಶೇರ್ ಮಾಡಿ, ನಾನು ಜೊಕೊವಿಚ್ ಜೊತೆ ಮಾತನಾಡಿದ್ದೇನೆ, ಮತ್ತು ಇಡೀ ಸರ್ಬಿಯಾ ಜೊಕೊವಿಚ್ ಜೊತೆಗಿದೆ. ನಮ್ಮ ಅಧಿಕಾರಿಗಳು ಜೊಕೊವಿಚ್ ಅವರ ಸಮಸ್ಯೆ ಬಗೆ ಹರಿಸಲು ಎಲ್ಲ ಪ್ರಯತ್ನ ಮಾಡುತ್ತಿದ್ದಾರೆ. ಸರ್ಬಿಯಾದ ಅಂತರಾಷ್ಟ್ರೀಯ ಕಾಯ್ದೆಯ ಪ್ರಕಾರ ಜೋಕೋವಿಚ್ ಅವರು ನ್ಯಾಯ ಹಾಗೂ ಸತ್ಯಕ್ಕಾಗಿ ಹೋರಾಡಲಿದ್ದಾರೆ ಎಂದು ಹೇಳಿದ್ದಾರೆ.

34 ವರ್ಷದ ಜೋಕೋವಿಚ್ ಅವರ ಕಣ್ಣು ಸದ್ಯ 21ನೇಯ ಗ್ರ್ಯಾಂಡ್ ಸ್ಲಾಮ್ ಮೇಲೆ ಇದೆ. ಜೋಕೋವಿಚ್, ರಾಜರ ಫೆಡರರ್ ಮತ್ತು ರಾಫೆಲ್ ನಡಾಲ್ ಈ ಮೂವರು ಇಲ್ಲಿಯವರೆಗೆ ವೈಯಕ್ತಿಕ ಇಪ್ಪತ್ತು 20 ಗ್ರಾಂಡ್ ಸ್ಲಾಮ್ ಗಳನ್ನು ಹೊಂದಿದ್ದಾರೆ.