ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಗೆದ್ದರು ಮತ್ತೊಮ್ಮೆ ಎಲ್ಲರ ಮನಸ್ಸನ್ನು! ಪಾಕಿಸ್ತಾನದ ಆಟಗಾರನಿಗೆ ನೀಡಿದರು ವಿಶೇಷ ಗಿಫ್ಟ್!
ಎಲ್ಲರಿಗೂ ಗೊತ್ತಿರುವ ಹಾಗೆ ಪಾಕಿಸ್ತಾನದ ಕ್ರಿಕೆಟ್ ಆಟಗಾರ ಹ್ಯಾರಿಸ್ ರಾವುಫ್ ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯವರ ದೊಡ್ಡ ಫ್ಯಾನ್ ಆಗಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದ t20 ವರ್ಲ್ಡ್ ಕಪ್ ಪಂದ್ಯದ ನಂತರ ಹ್ಯಾರಿಸ್ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯವರಿಗೆ ಭೇಟಿಯಾಗಿದ್ದರು. ಆಗ ಇವರಿಬ್ಬರ ಫೋಟೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ವರ್ಲ್ಡ್ ಕಪ್ ಮ್ಯಾಚ್ ನಂತರ ಈಗ ಧೋನಿ ಹ್ಯಾರಿಸ್ ಅವರಿಗೆ ಒಂದು ವಿಶೇಷ ಗಿಫ್ಟ್ ಕಳುಹಿಸಿದ್ದಾರೆ.
ಮಹೇಂದ್ರ ಸಿಂಗ್ ಧೋನಿಯವರು ಹ್ಯಾರಿಸ್ ಗೆ ಚೆನ್ನೈ ಸೂಪರ್ ಕಿಂಗ್ಸ್ ನ ಸ್ವಂತದ ಜರ್ಸಿಯೊಂದನ್ನು ಕಳುಹಿಸಿದ್ದಾರೆ. ಗಿಫ್ಟ್ ಪಡೆದ ನಂತರ ಹ್ಯಾರಿಸ್ ಅವರು ಈ ವಿಶೇಷ ಗಿಫ್ಟ್ ನ ಫೋಟೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಮಹೇಂದ್ರ ಸಿಂಗ್ ಧೋನಿ ಅವರಿಗೆ ಧನ್ಯವಾದಗಳ ಜೊತೆಗೆ ಪ್ರತಿಕ್ರಿಯೆಯನ್ನು ಸಹ ನೀಡಿದ್ದಾರೆ.
ದ ಲಿಜೆಂಡ್ ಮತ್ತು ಕ್ಯಾಪ್ಟನ್ ಕೂಲ್ ಎಂಎಸ್ ಧೋನಿ ಒಂದು ಸುಂದರ ಭೇಟಿಯೊಂದಿಗೆ ಅವರ ಜರ್ಸಿ ನೀಡಿ ನನ್ನನ್ನು ಗೌರವಿಸಿದ್ದಾರೆ. ದ ‘7’ ಇಂದಿಗೂ ಸಹ ತಮ್ಮ ದಯಾಳು ಸ್ವಭಾವದಿಂದಾಗಿ ಎಲ್ಲರ ಮನವನ್ನು ಗೆಲ್ಲುತ್ತಿದ್ದಾರೆ ಎಂದು ಹೇಳಿದ್ದಾರೆ. ಜೊತೆಗೆ ಈ ಗಿಫ್ಟ್ ನ್ನು ತಮಗೆ ಮುಟ್ಟಿಸಲು ವಿಶೇಷ ಪರಿಶ್ರಮವನ್ನು ತೆಗೆದುಕೊಂಡ ಸಿಎಸ್ಕೆ ಮ್ಯಾನೇಜರ್ ರಸೆಲ್ ಅವರಿಗೂ ಸಹ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
The legend & capt cool @msdhoni has honored me with this beautiful gift his shirt. The "7" still winning hearts through his kind & goodwill gestures. @russcsk specially Thank you so much for kind support. pic.twitter.com/XYpSNKj2Ia
— Haris Rauf (@HarisRauf14) January 7, 2022
ಸಿಎಸ್ಕೆ ಮ್ಯಾನೇಜರ್ ಸಹ ಹ್ಯಾರಿಸ್ ಅವರ ಟ್ವೀಟ್ ಗೆ, ನಮ್ಮ ಕ್ಯಾಪ್ಟನ್ ಎಂಎಸ್ ಧೋನಿ ಅವರು ನೀಡಿದ ಭಾಷೆಯನ್ನು ಯಾವಾಗಲೂ ಪೂರ್ಣಗೊಳಿಸುತ್ತಾರೆ. ನಿಮಗೆ ನಾವು ನೀಡಿದ ಈ ಗಿಫ್ಟ್ ಇಷ್ಟವಾದದ್ದನ್ನು ಕೇಳಿ ನಮಗೆ ತುಂಬಾ ಸಂತೋಷವಾಯಿತು ಎಂದು ಉತ್ತರಿಸಿದ್ದಾರೆ. ಎಲ್ಲ ಸಂಭಾಷಣೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಧೋನಿಯವರ ಅಭಿಮಾನಿಗಳು ಮುಕ್ತ ಮನಸ್ಸಿನ ಈ ಮಾಜಿ ನಾಯಕನನ್ನು ಮತ್ತಷ್ಟು ಹೊಗಳುತ್ತಿದ್ದಾರೆ.