Aadhar Card: ನಿಮ್ಮ ಆಧಾರ್, ಮೊಬೈಲ್ ಸಂಖ್ಯೆಗೆ ಲಿಂಕ್ ಆಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಹೀಗೆ ಪರಿಶೀಲಿಸಿ, ವಿಧಾನವು ತುಂಬಾ ಸರಳವಾಗಿದೆ!!

ಆಧಾರ್ ಕಾರ್ಡ್ ಅತ್ಯಂತ ಪ್ರಮುಖ ಮತ್ತು ಕಡ್ಡಾಯ ದಾಖಲೆಗಳಲ್ಲಿ ಒಂದಾಗಿದೆ.  ಅದಕ್ಕಾಗಿಯೇ ಈಗ UIDAI ಎಲ್ಲಾ ವಯಸ್ಸಿನ ನಾಗರಿಕರಿಗೆ ಆಧಾರ್ ಕಾರ್ಡ್ ಅನ್ನು ಪ್ರಮುಖವಾಗಿ ಮಾಡಿದೆ.

ಆಧಾರ್ ಕಾರ್ಡ್‌ನ ಮಹತ್ವ ಎಲ್ಲರಿಗೂ ತಿಳಿದಿದೆ ಮತ್ತು ಇದು ಪ್ರತಿಯೊಂದು ಸರ್ಕಾರಿ ಮತ್ತು ಸರ್ಕಾರೇತರ ಕೆಲಸಗಳಲ್ಲಿ ಅಗತ್ಯವಿದೆ. ಅದಕ್ಕಾಗಿಯೇ  ಆನ್ ಲೈನ್ ಸಂಬಂಧಿಸಿದ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI)ದ  ಸೇವೆಯ ಲಾಭ  ಪಡೆಯಲು ನಿಮ್ಮ ಆಧಾರ್ ಕಾರ್ಡ್ ಅನ್ನು ನಿಮ್ಮ ಮೊಬೈಲ್ ಸಂಖ್ಯೆಗೆ ಲಿಂಕ್ ಇರುವದು ತುಂಬಾ ಅವಶ್ಯಕ ವಾಗಿದೆ.

ಮೊದಲಿಗೆ Uidai.com ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. ತದನಂತರ ಮೆನು ನಲ್ಲಿಯ verify my email/ mobile number ಈ ಪರ್ಯಾಯವನ್ನು ಆಯ್ಕೆ ಮಾಡಿ. ನಂತರ ನಿಮ್ಮ ವೈಯಕ್ತಿಕ ಮೊಬೈಲ್ ನಂಬರ್, ಆಧಾರ್ ಕಾರ್ಡ್ ನಂಬರ್ ಮತ್ತು ಕ್ಯಾಪ್ಚಾ ಕೋಡ್ ತುಂಬಿ ಸಬಮಿಟ್ ಮಾಡಿ. ಒಂದು ವೇಳೆ ನಿಮ್ಮ ಮೊಬೈಲ್ ನಂಬರ್ ಆಧಾರ್ ಲಿಂಕ್ ಇದ್ದರೆ ಆಲರೇಡಿ ಮೊಬೈಲ್ ನಂಬರ್ ಲಿಂಕ್ಡ್ ಎಂದು ಮೆಸೇಜ್ ಬರುತ್ತೆ. ಲಿಂಕ್ ಇರದಿದ್ದರೆ ನೀವು ನಿಮ್ಮ ಹತ್ತಿರದ ಆಧಾರ್ ಸೆಂಟರ್ ಗೆ ಹೋಗಿ ಈ ಪ್ರಕ್ರಿಯೆ ಪೂರ್ಣ ಮಾಡಿಕೊಳ್ಳಬೇಕಾಗುತ್ತದೆ.