ಕರೋನಾ ಮೂರನೆಯ ಅಲೆಯಲ್ಲಿ ಬೆಲ್ಲದ ಟೀ ಆರೋಗ್ಯಕ್ಕೆ ಒಳ್ಳೆಯದು! ಬೆಲ್ಲದ ಟೀ ಮಾಡುವದು ಹೇಗೆ ಅಂತ ತಿಳಿದುಕೊಳ್ಳಿ…!!!

ನಿಮಗೆ ಒಂದು ವೇಳೆ ಏನಾದರೂ ಹೊಸ ಆಹಾರತಿನ್ನಲು ಅಥವಾ ಹೊಸ ಆಹಾರವನ್ನು ಮಾಡುವ ಆಸೆ ಇದ್ದರೆ ನಿಮಗೆ ಸ್ವಾಗತ. ಹಾಗಾದರೆ ಇಂದು ನಾವು ಅತೀ ಸ್ವಾದಿಷ್ಟ ಬೆಲ್ಲಿನ ಚಹಾ ಹೇಗೆ ಮಾಡುವದು ಎಂಬುದರ ಕುರಿತು ನಿಮಗೆ ತಿಳಿಸುವವರಿದ್ದೇವೆ. ಚಹಾ ಎಂದರೆ ಸಾಧಾರಣವಾಗಿ ಎಲ್ಲರೂ ಇಷ್ಟ ಪಡುವ ಪೆಯವಾಗಿದೆ ನಮ್ಮ ದೇಶದಲ್ಲಿಯ ಶೇ.90 ರಷ್ಟು ಜನರು ಚಹಾವನ್ನು ಇಷ್ಟಪಡುತ್ತಾರೆ. ನಿಮಗಾಗಿ ಇಂದು ನಾವು ಬೆಲ್ಲದ ಚಹಾ ತಯಾರಿಸುವ ವಿಧಾನವನ್ನು ಹೇಳಲಿದ್ದೇವೆ. ನಾವು ಯಾವಾಗಲೂ ಸಕ್ಕರೆ ಚಹಾವನ್ನು ಕುಡಿಯುತ್ತೇವೆ ಆದರೆ ಇಂದು ಈ ಚಹಾವನ್ನು ಖಂಡಿತವಾಗಿ ಪ್ರಯತ್ನಿಸಿ. ಹಾಗಾದರೆ ಬೆಲ್ಲದ ಟೀ ಹೇಗೆ ಮಾಡುತ್ತಾರೆ ಎಂಬುದು ತಿಳಿದುಕೊಳ್ಳೋಣ ಬನ್ನಿ.

ಬೆಲ್ಲದ ಟೀ ಕುಡಿಯುವದರಿಂದ ನಮಗೆ ಪಿತ್ತದ ಸಮಸ್ಯೆ ಉಂಟಾಗುವದಿಲ್ಲ. ಶರೀರಕ್ಕೆ ಚಳಿಗಾಲದ ಸಮಯದಲ್ಲಿ ಬೆಚ್ಚಗೆ ಇಡುತ್ತದೆ. ಬೆಲ್ಲದಲ್ಲಿ ಅನೇಕ ಪ್ರೊಟೀನುಗಳ ಮತ್ತು ವಿಟಮಿನ್ ಗಳು ಇರುತ್ತವೆ. ಇದರಲ್ಲಿ ಮ್ಯಾಗ್ನೆಶಿಯಂ, ಐರಾನ್, ಪೊಟ್ಯಾಶಿಯಂ ಮತ್ತು ಪಾಷ್ಪರಸ್ ಸಾಕಷ್ಟು ಪ್ರಮಾಣದಲ್ಲಿ ಇರುತ್ತವೆ. ಹೀಗಾಗಿ ನಮ್ಮ ಶರೀರಕ್ಕೆ ಉತ್ತಮವಾದ ಇಮ್ಯೂನಿಟಿ ದೊರೆಯುತ್ತದೆ. ಅಲ್ಲದೆ ಬೆಲ್ಲದ ಟೀ ನಮ್ಮ ಶರೀರದ ತೂಕ ಕಂಟ್ರೋಲ್ ನಲ್ಲಿ ಇಡುತ್ತದೆ. ಕೆಮ್ಮು ಮತ್ತು ಶೀತಗಳಿಂದ ರಕ್ಷಣೆ ಮಾಡುತ್ತದೆ. ಆದ್ದರಿಂದ ಕರೊನಾ ಮೂರನೆಯ ಅಲೆಯಲ್ಲಿ ಬೆಲ್ಲಿನ ಟೀ ಕುಡಿಯುವದು ತುಂಬಾ ಮಹತ್ವದ್ದಾಗಿದೆ.

ಬೆಲ್ಲದ ಟೀ ಮಾಡುವ ವಿಧಾನಗಳು.

ಎಲ್ಲಕ್ಕಿಂತ ಮುಂಚೆ ಒಂದು ಬಾಣಲಿಗೆಯನ್ನು ತಗೆದುಕೊಂಡು ಅದನ್ನು ಗ್ಯಾಸ್ ಆನ್ ಮಾಡಿ ಅದರ ಮೇಲೆ ಇಡಿರಿ. ತದನಂತರ ಅದರಲ್ಲಿ ಒಂದು ಕಪ್ ನೀರು ಹಾಕಿ ಅದರಲ್ಲಿ ಒಂದು ಚಮಚ ಚಹಾ ಪಾವಡರ್(ಯಾವುದೇ ) ಹಾಕಿರಿ. ನಂತರ ಇದನ್ನು ಚೆನ್ನಾಗಿ ಕುದಿಸಿಕೊಳ್ಳಿ. ಚಹಾ ಚೆನ್ನಾಗಿ ಕುದಿಸಿದ ನಂತರ ಅದರಲ್ಲಿ ಹಸಿ ಶುಂಠಿಯನ್ನು ಸಣ್ಣ ಕಿಸಣಿಕೆಯ ಸಹಾಯದಿಂದ ಹೇರಚಿ ಹಾಕಿರಿ. ಎರಡು ಏಲಕ್ಕಿಯನ್ನು ತಗೆದುಕೊಂಡು ಸಿಪ್ಪೆಯೊಂದಿಗೆ ಚಹಾದಲ್ಲಿ ಮಿಶ್ರಣ ಮಾಡಿರಿ. ತದನಂತರ ಗ್ಯಾಸ್ ಲೋ ಪ್ಲೇಮ್ ನಲ್ಲಿಡಿರಿ.

ಅದು ಚೆನ್ನಾಗಿ ಕುದಿಯುತ್ತಿರುವಾಗ, 1 ಕಪ್ ಬಿಸಿ ಹಾಲು ಸೇರಿಸಿ. ಈಗ ಅದರಲ್ಲಿ ಬೆಲ್ಲ ಸೇರಿಸಬೇಡಿ. ಹಾಲು ಹಾಕಿದ ನಂತರ ಚೆನ್ನಾಗಿ ಉಕ್ಕು ಬರುವ ಹಾಗೆ ಕುದಿಯಿಸಿರಿ. ಮದ್ಯ ಮದ್ಯದ್ಲಲಿ ಚಮಚದಿಂದ ಚೆನ್ನಾಗಿ ಅಲುಗಾಡುಸುತ್ತೀರಿ ಇದರಿಂದ ಎಲ್ಲವೂ ಒಂದುಗೂಡುತ್ತವೆ. ಈಗ ಗ್ಯಾಸ್ ಕಡಿಮೇ ಮಾಡಿ ಸಣ್ಣಾಗಿ ಮಾಡಿದ ಬೆಲ್ಲನ್ನು 2 ಚಮಚದಷ್ಟು ಅದರಲ್ಲಿ ಹಾಕಿರಿ. ಈಗ ಮತ್ತೆ ಸ್ಪೂನ್ ದಿಂದಾ ಚೆನ್ನಾಗಿ ಮಿಶ್ರಣ ಮಾಡಿ. ನೆನಪಿಡಿ ಬೆಲ್ಲದ ದೊಡ್ಡ ತುಂಡನ್ನು ಹಾಕಬೇಡಿ ಏಕೆಂದರೆ ದೊಡ್ಡ ತುಂಡು ಹಾಕುವದರಿಂದ ಚಹಾ ಕೆಡುತ್ತದೆ. ಅದಕ್ಕಾಗಿ ಬೆಲ್ಲವನ್ನು ಸಣ್ಣ ಸಣ್ಣ ತುಂಡಾಗಿ ಮಾಡಿಯೇ ಉಪಯೋಗ ಮಾಡಿರಿ.

ಬೆಲ್ಲವನ್ನು ಕರಗುವ ವರೆಗೆ ಚಮಚದಿಂದ ಮಿಶ್ರಣ ಮಾಡುತ್ತೀರಿ. ಇದು ಕುದಿಯಲು 2 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ತದನಂತರ ಚೆನ್ನಾಗಿ ಉಕ್ಕು ಬಂದಿದೆ ಅಂತ ಕಂಡರೆ ಅದರ ವಾಸನೆ ಚೆನ್ನಾಗಿ ಬರುತ್ತದೆ. ಏಕೆಂದರೆ ಅದರಲ್ಲಿ ನಾವು ಏಲಕ್ಕಿ ಮತ್ತು ಶುಂಠಿಯನ್ನು ಮಿಶ್ರಣ ಮಾಡಿದ್ದೇವೆ ಅಲ್ಲವೇ ಆದ್ದರಿಂದ ಚಹಾದ ವಾಸನೆ ಅದ್ಭುತವಾಗಿ ಬರುತ್ತದೇ. ಈಗ ನಮ್ಮ ಬೆಲ್ಲದ ಚಹಾ ತಯಾರಾಯಿತು. ದಿನಾಲೂ ನಾವು ಬೆಲ್ಲದ ಚಹಾ ಕುಡಿಯುವದರಿಂದ ಕರೊನಾ ತನ್ನಿಂದ ತಾನೇ ಓಡಿ ಹೋಗುತ್ತದೆ. ಗೆಳೆಯರೇ ಈ ಲೇಖನ ನಿಮಗೆ ಇಷ್ಟವಾದರೆ ಲೈಕ್ ಮಾಡಿ ಮತ್ತು ನಿಮ್ಮ ಇನ್ನಿತರ ಗೆಳೆಯರಿಗೆ ಶೇರ್ ಮಾಡಿ.