ಹಸುಗಳಿಂದ ಹೆಚ್ಚು ಹಾಲನ್ನು ಪಡೆಯುವ ಸಲುವಾಗಿ ರೈತ ಮಾಡಿದ ಸೂಪರ್ ಐಡಿಯಾ ನೋಡಿ ಈ ವೈರಲ್ ಆಗಿರುವ ವಿಡಿಯೋದಲ್ಲಿ…

ಬರೀ ಇಂಜಿನಿಯರ್ ಗಳು ಅಷ್ಟೇ ವಿವಿಧ ಐಡಿಯಾಗಳನ್ನು ಹುಡುಕುವದರಲ್ಲಿ ನಿಸ್ಸೀಮರಾಗಿರುತ್ತಾರೆ ಎಂದು ತಿಳಿಯಬೇಡಿ. ದಿನಂಪ್ರತಿ ಬೆಳಗ್ಗೆ ಎದ್ದು ತೋಟದಲ್ಲಿ ಕಷ್ಟಪಟ್ಟು ದುಡಿಯುವ ರೈತರು ಸಹ ವಿವಿಧ ಐಡಿಯಾಗಳನ್ನು ಶೋಧಿಸುವುದರಲ್ಲಿ ಅಥವಾ ಕಂಡು ಹಿಡಿಯುವುದರಲ್ಲಿ ತುಂಬಾ ಜಾಣರಾಗಿರುತ್ತಾರೆ. ಈಗ ಈ ವಿಡಿಯೋದಲ್ಲಿ ನೋಡುವ ರೈತನೊಬ್ಬ ತನ್ನ ಹಸುಗಳು ಸಾಕಷ್ಟು ಹಾಲನ್ನು ನೀಡಬೇಕೆಂದು ಮಾಡಿದ ಐಡಿಯಾ ಸೂಪರ್ ಆಗಿದೆ. ರೈತನ ಈ ಐಡಿಯಾ ನೋಡಿದ ನೇಟಿಜನ್ಸ್ ಗಳು ಬೆರಗಾಗಿದ್ದಾರೆ.

ಅಷ್ಟಕ್ಕೂ ರೈತ ಮಾಡಿದ ಐಡಿಯಾ ಆದರೂ ಏನು ನೋಡಿ..

ತನ್ನ ಹಸುಗಳು ಸಾಕಷ್ಟು ಹಾಲು ನೀಡಲೆಂದು ಅವುಗಳ ಕಣ್ಣುಗಳಿಗೆ ವರ್ಚುವಲ್ ಗಾಗಲ್ ತೊಡಿಸಿದ್ದಾನೆ. ಈ ವರ್ಚುವಲ್ ರಿಯಲಿಟಿ ಗಾಗಲ್ ಮುಖಾಂತರ ಹಸುಗಳು ಅದೇಗೆ ಹೆಚ್ಚು ಹಾಲನ್ನು ನೀಡುತ್ತವೆ ಎಂಬ ಪ್ರಶ್ನೆ ಮೂಡಬಹುದು. ಆದರೆ ನಿಜಕ್ಕೂ ಈ ಪ್ರಯೋಗ ಮಾಡಲಾಗಿದೆ ಮತ್ತು ಅದರಲ್ಲಿ ಪ್ರಸ್ತುತ ರೈತ ಯಶಸ್ಸನ್ನು ಕಂಡಿದ್ದಾನೆ. ಇದರಿಂದ ಹಸುಗಳು ತುಂಬಾ ಧನಾತ್ಮಕವಾಗಿವೆ ಹಾಗೂ ಅವು ಹೆಚ್ಚು ಹಾಲನ್ನು ನೀಡುತ್ತಿವೆ.

ಪ್ರಸ್ತುತ ಸುದ್ದಿಯು ಟರ್ಕಿಯಿಂದ ವರದಿಯಾಗಿದೆ. ಈಜ್ಜತ್ ಕೋಕಾಕ್ ಹೆಸರಿನ ರೈತನು ಈ ಪ್ರಯೋಗವನ್ನು ಮಾಡಿ ಯಶಸ್ಸನ್ನು ಕಂಡಿದ್ದಾನೆ. ಈ ರೀತಿಯ ವರ್ಚುವಲ್ ರಿಯಾಲಿಟಿ ಗಾಗಲ್ ತೊಡಿಸಿರುವುದರಿಂದ ಮುಕ್ತವಾಗಿ ವಿಶಾಲವಾದ ಮೈದಾನದಲ್ಲಿ ಮೇಯುತ್ತಿದ್ದೇವೆ ಎನ್ನುವ ಫೀಲ್ ಹಸುಗಳಿಗೆ ಆಗುತ್ತಿದೆ.

ಎಷ್ಟು ಕ್ಷಮತೆ ಹೆಚ್ಚಿತು..?

ಈ ಪ್ರಯೋಗದಿಂದ ಹಸು ಈಗ ಒಟ್ಟು 22 ಲೀಟರ್ ಹಾಲನ್ನು ಹೆಚ್ಚಿಗೆ ನೀಡುತ್ತಿವೆ ಎಂದು ರೈತ ಈಜ್ಜತ್ ಕೊಕಾಕ್ ಹೇಳುತ್ತಾನೆ. ಹಚ್ಚನೆಯ ಹಸಿರು ವಾತಾವರಣದಲ್ಲಿ ಹಾಗೂ ಪಕ್ಷಿಗಳ ನೈಸರ್ಗಿಕ ಇಂಚರದ ಮುಖಾಂತರ ತುಂಬು ಪ್ರಸನ್ನವಾದ ಹಸುಗಳು ಈಗ ಹಾಲು ನೀಡುವ ಕ್ಷಮತೆಯನ್ನು ಅದ್ಭುತವಾಗಿ ಹೆಚ್ಚಿಸಿವೆ. ಈ ಗಾಗಲ್ ಗಳನ್ನು ಹಸುಗಳಿಗಾಗಿ ತಜ್ಞರ ಮಾರ್ಗದರ್ಶನದ ಅಡಿಯಲ್ಲಿ ವಿಶೇಷವಾದ ಡಿಸೈನ್ ನಿಂದ ತಯಾರಿಸಲಾಗಿದೆ. ತದನಂತರ ಮಾಡಿದ ಈ ಪ್ರಯೋಗದಿಂದ ತುಂಬಾ ಯಶಸ್ಸನ್ನು ಗಳಿಸಿದ್ದೇನೆ ಎಂದು ಈ ರೈತನು ಹೇಳುತ್ತಾನೆ. ಈ ಹಸುಗಳಿಗೆ ಕೆಂಪು ಮತ್ತು ಕಪ್ಪು ಬಣ್ಣ ಕಾಣಿಸುವುದಿಲ್ಲ. ಅದರ ಜೊತೆಗೆ ಈ ಸಾಫ್ಟ್ವೇರ್ನಲ್ಲಿ ಅನೇಕ ಬದಲಾವಣೆಗಳನ್ನು ಮಾಡಲಾಗಿದೆ ಎಂದು ರೈತ ಈಜ್ಜತ್ ಹೇಳುತ್ತಾನೆ.

ನೋಡಿ ಈ ವಿಡಿಯೋ…