Articles

ನೀವು ಮಹಿಂದ್ರ ಹೊರತಾಗಿ ಬೇರೆ ಕಂಪನಿಯ ವಾಹನವನ್ನು ಉಪಯೋಗಿಸುತ್ತೀರಾ? ಯೂಸರ್ ಕೇಳಿದ ಪ್ರಶ್ನೆಗೆ ಆನಂದ ಮಹಿಂದ್ರ ನೀಡಿದ ಸಖತ್ ಉತ್ತರ ವೈರಲ್!

ಮಹಿಂದ್ರ ಗ್ರೂಪ್ ಆಫ್ ಕಂಪನಿಯ ಸಂಚಾಲಕರಾದ ಆನಂದ ಮಹಿಂದ್ರಾ ಸೋಶಿಯಲ್ ಮೀಡಿಯಾದಲ್ಲಿ ಯಾವತ್ತೂ ತುಂಬಾ ಆಕ್ಟಿವ್ ಆಗಿರುತ್ತಾರೆ. ಅವರ ಅನೇಕ ಟ್ವೀಟ್ ಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ವೈರಲ್ ಆಗುತ್ತಿರುತ್ತವೆ. ಇವರು ಅನೇಕ ಸಲ ಯೂಸರ್ ಗಳು ಕೇಳಿದ ಪ್ರಶ್ನೆಗಳಿಗೆ ತುಂಬಾ ಸರಿಯಾದ ಉತ್ತರ ನೀಡುತ್ತಾರೆ. ಈಗ ಒಬ್ಬ ಯೂಸರ್ ಕೇಳಿದ ಪ್ರಶ್ನೆಗೆ ಆನಂದ ಮಹಿಂದ್ರಾ ಅವರು ನೀಡಿದ ಸಖತ್ ಉತ್ತರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ದೇಶದಲ್ಲಿಯೇ ಹೆಸರಾಂತ ವಾಹನ ಉತ್ಪಾದಿಸುವ ಕಂಪನಿಯ ಮಾಲೀಕರಾದ ಆನಂದ್ ಮಹಿಂದ್ರ ಅವರಿಗೆ ‘ನಿಮ್ಮ ಸ್ವಂತದ ಕಂಪನಿ ತಯಾರಿಸಿದ ವಾಹನಗಳ ಹೊರತಾಗಿ ಬೇರೆ ಕಂಪನಿಯು ತಯಾರಿಸಿದ ವಾಹನಗಳನ್ನು ನೀವು ಉಪಯೋಗಿಸುತ್ತೀರಾ’? ಎಂಬ ಪ್ರಶ್ನೆ ಟ್ವಿಟರ್ ಯೂಸರ್ ನೊಬ್ಬ ಕೇಳಿದ್ದನು. ಆತನ ಈ ಪ್ರಶ್ನೆಗೆ ಮಹಿಂದ್ರಾ ಅವರು, “ಅಂದರೆ ಮಹಿಂದ್ರಾ ಕಂಪನಿ ಹೊರತಾಗಿ ಬೇರೆ ಕಂಪನಿಯ ವಾಹನಗಳು ಸಹ ಇವೆ ಎಂದು ನಿನಗೆ ಹೇಳಬೇಕಾಗಿದೆಯೇ?” ನನಗೆ ಈ ಬಗ್ಗೆ ಕಲ್ಪನೆಯೇ ಇಲ್ಲ. (ತಮಾಷೆ ಮಾಡುತ್ತಿದ್ದೇನೆ) ಎಂದು ಸಖತ್ ಉತ್ತರ ನೀಡಿದ್ದಾರೆ. ಅವರ ಈ ಉತ್ತರಕ್ಕೆ ಸುಮಾರು 10 ಸಾವಿರ ಲೈಕ್ಸ್ ಗಳು ಬಂದಿವೆ.

Leave a Comment

Your email address will not be published. Required fields are marked *