ಪದೇ ಪದೇ ಬಾಗಿಲ ಮೂಲೆಯಲ್ಲಿ ಆಡುತ್ತಿದ್ದ ಮಗಳನ್ನು ಬುದ್ಧಿ ಹೇಳಲು ತಂದೆ ಮಾಡಿದ್ದೇನು? ವಿಡಿಯೋ ನೋಡಿ!!!

ಮನೆಯಲ್ಲಿ ಮಕ್ಕಳು ಇದ್ದರೆ ಚೆಂದ ಅನ್ನೋ ಮಾತನ್ನು ನಾವೆಲ್ಲರೂ ಕೇಳಿದ್ದೇವೆ. ತಂದೆ-ತಾಯಿಗಳು ತಮ್ಮ ಮಕ್ಕಳಿಗಾಗಿ ಏನೆಲ್ಲ ಕಷ್ಟಪಟ್ಟು ಅವರಿಗೆ ಒಳ್ಳೆಯ ಸಂಸ್ಕಾರ ಮತ್ತು ಉತ್ತಮ ಶಿಕ್ಷಣ ನೀಡುವ ಪ್ರಯತ್ನ ಮಾಡುತ್ತಾರೆ ಆದರೆ ಯೌವನದಲ್ಲಿ ಅವರ ಬಳಿಯಲ್ಲಿದ್ದ ಗುಣಗಳು ಒಂದೊಂದಾಗಿ ಹೊರಗಡೆ ಬರಲು ಶುರುಮಾಡುತ್ತವೆ. ನಮ್ಮ ಸಂಸ್ಕಾರವೇ ಅವರ ಮೇಲೆ ಬೀಳುತ್ತದೆ. ನಾವು ಮಕ್ಕಳನ್ನು ಚೆನ್ನಾಗಿ ನೋಡಿಕೊಂಡು ಅವರಿಗೆ ಒಳ್ಳೆಯ ಸಂಸ್ಕಾರ ನೀಡಿದರೆ ಮುಂದೆ ಆ ಮಗು ತಂದೆ ತಾಯಿಯರ ಹೆಸರು ಉಜ್ವಲಗೊಳಿಸುವದು. ತದ್ವಿರುದ್ಧವಾಗಿ ಸಂಸ್ಕಾರ ಸರಿಯಾಗಿ ಕೊಡದೆ ಇದ್ದರೆ ಮಕ್ಕಳು ತಮಗೆ ಬೇಕಾದ ಹಾಗೆ ವರ್ತನೆ ಮಾಡುತ್ತಾ ತಂದೆ ತಾಯಿಯರ ಹೆಸರನ್ನು ಕೆಟ್ಟದಾಗಿ ಮಾಡುತ್ತಾರೆ.

ಚಿಕ್ಕ ಮಕ್ಕಳಿಗೆ ಯಾವುದು ಸರಿ ಯಾವುದು ತಪ್ಪು ಎಂಬುದು ಅರ್ಥ ವಾಗುವದಿಲ್ಲ ಹೀಗಾಗಿ ತಮಗೆ ಬೇಕಾದ ಕೆಲಸ ಮಾಡುತ್ತಾರೆ. ಆದರೆ ಅದರಿಂದ ಆಗುವ ಪರಿಣಾಮ ಅವರಿಗೆ ಗೊತ್ತು ಇರುವದಿಲ್ಲ. ಮಕ್ಕಳು ಮಾಡುವ ವಿಶೇಷ ಕಾರ್ಯ ವೇನೆಂದರೆ ನಾವು ಯಾವದನ್ನು ಮಾಡಬೇಡಿ ಅಂಥ ಹೇಳಿರುತ್ತವೆಯೋ ಮಕ್ಕಳು ಹಠಮಾಡಿ ಅದೇ ಕಾರ್ಯ ಮಾಡಿರುತ್ತಾರೆ. ನಾವು ಅವರಿಗೆ ತಪ್ಪು ಮಾಡಿದರೆ ಅದನ್ನು ತಿದ್ದಿ ಹೇಳಿ ಕೊಡುವದು ಮತ್ತು ಸರಿಯಾದ ದಾರಿಗೆ ಕರೆದುಕೊಂಡು ಹೋಗುವದು ಪ್ರತಿಯೊಬ್ಬ ತಂದೆ ತಾಯಂದಿರ ಕರ್ತವ್ಯವಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಆಗ್ಗಾಗ್ಗೆ ಕೆಲವು ವೀಡಿಯೋಗಳು ತುಂಬಾನೇ ವೈರಲ್ ಆಗುತ್ತವೆ ಅದರಲ್ಲಿ ಉತ್ತಮ ಸಂದೇಶ ಅಥವಾ ವಿಚಿತ್ರವಾದ ಘಟನೆ ಇದ್ದರೆ ಆದಂತೂ ತುಂಬಾನೇ ವೈರಲ್ ಆಗುತ್ತೆ. ಸದ್ಯಕ್ಕೆ ಅಂತಹದೇ ಒಂದು ವೀಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಪ್ರಸ್ತುತ ವಿಡಿಯೋದಲ್ಲಿ ಒಂದು ಮನೆಯಲ್ಲಿ ಮಗು ಪದೇ ಪದೇ ಬಾಗಿಲ ಬಳಿ ಹೋಗಿ ಆಟ ಆಡುತ್ತಿರುತ್ತದೆ. ಇದನ್ನು ಕಂಡು ಮಗುವನ್ನು ಬಾಗಿಲ ಬಳಿ ಹೋಗಿ ಆಡುವದನ್ನು ನಿಲ್ಲಿಸಲು ತಂದೇ ತನ್ನ ಮಗಳಿಗೆ ಬಾಗಿಲ ಮೂಲೆಯಲ್ಲಿ ಆಟವಾಡಬೇಡ ಇದರಿಂದ ನಿನಗೆ ಅ#ಪಾಯವಿದೆ ಎಂದು ಹೇಳುತ್ತಾನೆ ಆದರೆ ಚಿಕ್ಕ ಮಕ್ಕಳು ತುಂಬಾ ಹಠಮಾರಿ ಇರುತ್ತವೆ ಎಂಬುದು ನಮಗೆಲ್ಲ ಗೊತ್ತಿರುವ ಸಂಗತಿಯಾಗಿದೆ. ಮತ್ತೆ ಮತ್ತೆ ಬಾಗಿಲ ಮಧ್ಯದಲ್ಲಿ ತನ್ನ ಬೆರಳನ್ನು ಇಟ್ಟು ಆಡುತ್ತಾಳೆ ಆಗ ತಂದೆ ಇದನ್ನು ಬಿಡಿಸುವ ಸಲುವಾಗಿ ಒಂದು ಹೊಸ ಉಪಾಯ ಮಾಡುತ್ತಾನೆ.

ತಂದೆ ಮಗಳನ್ನು ತನ್ನ ಬಳಿಗೆ ಕರೆದು ಬಾಗಿಲ ಬಳಿ ಕರೆದುಕೊಂಡು ಹೋಗುತ್ತಾನೆ. ತದನಂತರ ಆತನು ಒಂದು ಕೈಯಲ್ಲಿ ಸವತೆಕಾಯಿ ತಗೆದುಕೊಳ್ಳುತ್ತಾನೆ. ಸವತೆಕಾಯಿಯನ್ನು ಮೊದಲು ಆ ಮಗುವಿಗೆ ತೋರಿಸುತ್ತಾನೆ. ತದನಂತರ ಬಾಗಿಲ ನಡುವೆ ಇಟ್ಟು ನಂತರ ಬಾಗಿಲನ್ನು ಮುಚ್ಚುತ್ತಾನೆ ಬಾಗಿಲು ಮತ್ತು ಗೋಡೆಯ ನಡುವೆ ಸಿಕ್ಕು ಸವತೆಕಾಯಿ ಜಜ್ಜಿದಂತಾಗುತ್ತದೆ ಇದನ್ನು ತನ್ನ ಮಗಳಿಗೆ ತೋರಿಸಿ ಒಂದು ವೇಳೆ ನಿನ್ನ ಕೈಬೆರಳು ಸಹ ಬಾಗಿಲಲ್ಲಿ ಸಿಲುಕಿಕೊಂಡರೆ ನಿನ್ನ ಬೆರಳಿನ ಗತಿ ಸಹ ಇದೆ ಆಗುವದು ಎಂದು ಸನ್ನೆಯಲ್ಲಿ ತಿಳಿಸುತ್ತಾನೆ. ತದನಂತರ ಮಗುವನ್ನು ಬಾಗಿಲ ಬಳಿಗೆ ಹೋಗು ಎಂದು ತಬ್ಬಿದ್ದಾಗ ಮಗು ಹೆದರಿಕೊಂಡು ಅಲ್ಲಿಂದ ಓಡಿ ಹೋಗುತ್ತದೆ. ಮಗುಗೆ ಚೆನ್ನಾಗಿ ಅರ್ಥ ಆಗಿರಬಹುದು ಹೀಗಾಗಿ ಮತ್ತೆ ಬಾಗಿಲ ಬಳಿ ಎಂದಿಗೂ ಬರುವದಿಲ್ಲ ಅನಿಸುತ್ತೆ.

ವೀಡಿಯೋ ನೋಡಿ.