Video: ಕಣ್ಣು ಮುಚ್ಚಿಕೊಂಡು ಮಡಿಕೆ ಒಡೆಯಲು ಹೋಗುತ್ತಿದ್ದಾಗ ನಾಯಿ ಅಡ್ಡ ಬಂದಿತು, ಹುಡುಗ ಮಡಿಕೆ ಒಡೆಯುವದನ್ನು ಬಿಟ್ಟು ನಾಯಿಯನ್ನು……!!!

ಸಾಮಾನ್ಯವಾಗಿ ಸ್ಪರ್ಧೆ ಅಂದರೆ ಎಲ್ಲರೂ ಅದರಲ್ಲಿ ಉತ್ಸುಕತೆಯಿಂದ ಸಹಭಾಗ ತಗೆದುಕೊಳ್ಳುತ್ತಾರೆ. ಪ್ರತಿಯೊಂದು ಸ್ಪರ್ಧೆಯ ವಿವಿಧ ಪ್ರಕಾರದ ನಿಯೋಜನೆ ಅನುಸಾರವಾಗಿ ನಡೆಸಲಾಗುತ್ತದೆ. ಶಾಲೆಯಲ್ಲಿಯ ಸ್ಪರ್ಧೆ, ಸಾಮಾಜಿಕ ಸ್ಪರ್ಧೆಗಳು, ಓಣಿಯಲ್ಲಿಯ ಸ್ಪರ್ಧೆ ಹೀಗೆ ಹತ್ತು ಹಲವಾರು ಸ್ಪರ್ಧೆಗಳು ಆಯೋಜನೆ ಮಾಡುವದನ್ನು ನಾವು ನೋಡಿದ್ದೇವೆ. ಆದರೆ ಹೆಚ್ಚಾಗಿ ಓಣಿಯ ಸ್ಪರ್ಧೆಯಲ್ಲಿ ಎಲ್ಲರೂ ಸಹಭಾಗ ತಗೆದುಕೊಳ್ಳುವರು ಏಕೆಂದರೆ ತಮ್ಮದೇ ಆದ ವಾಸಿಸುವ ಸ್ಥಳವಾಗಿದ್ದು ಅದರಿಂದ ಅವರು ಯಾರಿಗೂ ನಾಚಿಕೆ ಪಡದೆ, ಹೆದರದೆ ಸಹಭಾಗ ತಗೆದುಕೊಳ್ಳುವರು.

ಪ್ರಸ್ತುತವಾಗಿ ಒಂದು ವೀಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಒಂದು ಸ್ಪರ್ಧೆಯ ಆಯೋಜನೆನ್ನು ಮಾಡಲಾಗುತ್ತದೆ. ಓಣಿಯಲ್ಲಿಯ ರಾತ್ರಿ ಸ್ಪರ್ಧೆಯ ಆಯೋಜನೆ ಮಾಡಲಾಗಿರುತ್ತದೆ. ಈ ಸ್ಪರ್ಧೆಯ ವಿಶೇಷತೆ ಏನೆಂದರೆ ಒಂದು ಮಡಿಕೆ ಇಟ್ಟು ಅದನ್ನು ಕಣ್ಣು ಮುಚ್ಚಿ ಒಂದು ಕೋಲಿನಿಂದ ಒಡೆಯುವದು. ಯಾರು ಈ ಮಡಿಕೆನ್ನು ಒಡೆಯುವರು ಅವರಿಗೆ ಬಹುಮಾನ ನೀಡಲಾಗುವದು ಎಂಬುದು ಈ ಆಟದ ನಿಯಮ ವಾಗಿತ್ತು.

ಆಟದಲ್ಲಿ ಮೊದಲಿಗೆ ಒಂದು ಹುಡುಗನಿಗೆ ಕಣ್ಣಿಗೆ ಬಟ್ಟೆ ಕಟ್ಟಿ ಆತನ ಕೈಯಲ್ಲಿ ಒಂದು ಕೋಲನ್ನು ಕೊಡಲಾಯಿತು. ತದನಂತರ ಹುಡುಗನಿಗೆ ಮಡಿಕೆ ಒಡೆಯಲು ಹೇಳಲಾಯಿತು. ಇನ್ನೇನು ತನ್ನ ಗುರಿಯನ್ನು ಹಿಡಿದುಕೊಂಡು ಹುಡುಗ ಮಡಿಕೆಯತ್ತ ಸಾಗುತ್ತಿದ್ದ ಅಷ್ಟರಲ್ಲಿ ಒಂದು ನಾಯಿ ಬಂದು ಆತನ ಗುರಿಯ ಮಧ್ಯದಲ್ಲಿ ನಿಂತಿತು ಎಲ್ಲರೂ ನಾಯಿಯನ್ನು ಕಂಡು ನಗತೊಡಗಿದರು ಆದರೆ ಹುಡುಗನ ಕಣ್ಣು ಮುಚ್ಚಿದ್ದರಿಂದ ಆತನಿಗೆ ಏನು ಅರಿವೇ ಆಗಲಿಲ್ಲ. ಹುಡುಗ ಸ್ವಲ್ಪ ಮುಂದೆ ಬಂದು ಆ ಮಡಿಕೆ ಬಂದಿದೆ ಅಂದುಕೊಂಡು ಅಲ್ಲಿದ್ದ ನಾಯಿಯನ್ನು ಜೋರಾಗಿ ಹೊಡೆದನು ನಾಯಿಯು ನೋವಿನಿಂದ ನರಳುತ್ತಾ ಅಲ್ಲಿಂದ ಓಡಿ ಹೋಯಿತು.

ವಿಡಿಯೋ ನೋಡಿ.