ಡಯಾಬಿಟಿಸ್ ರೋಗಿಗಳು ಬೆಲ್ಲು ತಿನ್ನುವುದರಿಂದ ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗುತ್ತದೆಯೇ? ತಿಳಿದುಕೊಳ್ಳಿ ಸತ್ಯವೇನು ಅಂತ?

ಮಧುಮೇಹ ಒಂದು ಮೇಟಾಬೊಲಿಕ್ ಡಿಸೋರ್ಡರ್ ಇದೆ. ದೇಹದಲ್ಲಿ ಇನ್ಸುಲಿನ್ ನ ಕೊರತೆಯಿಂದಾಗಿ ಮಧುಮೇಹ ಅಥವಾ ಡಯಾಬಿಟಿಸ್ ಆಗುತ್ತದೆ. ದೇಹದಲ್ಲಿ ಸಕ್ಕರೆ ಅಂಶವು ನಿಯಮಿತವಾಗಿ ಹೆಚ್ಚಾಗುವುದು ಮಧುಮೇಹದ ರೋಗಿಗಳಿಗೆ ಅಪಾಯಕಾರಿಯಾಗಿರುತ್ತದೆ. ಜಗತ್ತಿನಲ್ಲಿ 40 ಕೋಟಿಗಳಿಗಿಂತಲೂ ಹೆಚ್ಚು ಜನ ಈ ರೋಗದಿಂದ ಬಳಲುತ್ತಿದ್ದಾರೆ. ಭಾರತದಲ್ಲಿ ಈ ರೋಗದಿಂದ ಬಳಲುವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಹೀಗಾಗಿ ರಕ್ತದಲ್ಲಿಯ ಸಕ್ಕರೆ ಅಂಶ ಹೆಚ್ಚಾಗುವುದರಿಂದ ಹೇಗಾದರೂ ಮಾಡಿ ಮುಕ್ತಿ ಪಡೆದುಕೊಳ್ಳುವ ವಿಚಾರ ರೋಗಿಗಳ ಮನಸ್ಸಿನಲ್ಲಿ ಬಂದೇ ಬರುತ್ತಿರುತ್ತದೆ.

ಮಧುಮೇಹದ ರೋಗಿಗಳು ತಾವು ಸೇವಿಸುವ ತಮ್ಮ ಆಹಾರ ಪದಾರ್ಥಗಳ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅವಶ್ಯಕವಾಗಿದೆ. ಕಾರಣ ದೇಹದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾಗುವುದರಿಂದ ಅನೇಕ ಗಂಭೀರ ಸಮಸ್ಯೆಗಳು ಉದ್ಭವವಾಗುತ್ತವೆ. ಮಧುಮೇಹಿಗಳಿಗೆ ಸಕ್ಕರೆ ಬದಲಾಗಿ ಬೆಲ್ಲು ತಿನ್ನುವ ಸಲಹೆ ನೀಡಲಾಗುತ್ತದೆ. ಇಂಥ ಪರಿಸ್ಥಿತಿಯಲ್ಲಿ ಮಧುಮೇಹಿಗಳು ಬೆಲ್ಲನ್ನು ತಿನ್ನುವುದು ಎಷ್ಟು ಸರಿ ಅಥವಾ ಎಷ್ಟು ತಪ್ಪು ಎಂಬುದು ತಿಳಿದುಕೊಳ್ಳಿ.

ಕಬ್ಬಿನಿಂದ ಸಕ್ಕರೆ ತಯಾರಿಸುವ ಪ್ರಕ್ರಿಯೆಯಲ್ಲಿ ಕ್ರಿಸ್ಟಲೇಸೇಶನ್ ಆಗಿರುವುದರಿಂದ ಅದರಲ್ಲಿಯ ಎಲ್ಲ ಗುಣಧರ್ಮಗಳು ನಷ್ಟವಾಗುತ್ತದೆ ಎಂಬುದು ಆರೋಗ್ಯ ತಜ್ಞರ ವಿಚಾರವಾಗಿದೆ. ಆದರೆ ಬೆಲ್ಲನ್ನು ತಯಾರಿಸುವ ಪ್ರಕ್ರಿಯೆಯಲ್ಲಿ ಅದರಲ್ಲಿಯ ಪೋಷಕ ತತ್ವಗಳು ನಷ್ಟವಾಗುವುದಿಲ್ಲ. ಹೀಗಾಗಿ ಬೆಲ್ಲಿನಲ್ಲಿ ಕ್ಯಾಲ್ಸಿಯಂ, ಮೆಗ್ನೀಷಿಯಂ, ಪೊಟ್ಯಾಶಿಯಂ, ಫಾಸ್ಪರಸ್, ಕಬ್ಬಿಣಾಂಶ ಹೀಗೆ ಅನೇಕ ಪೌಷ್ಟಿಕ ಅಂಶಗಳು ಹಾಗೆಯೇ ಇರುತ್ತವೆ. ಹೀಗಾಗಿ ಬೆಲ್ಲವು ಪೌಷ್ಟಿಕವಾದ ಆಹಾರ ಪದಾರ್ಥವಾಗಿದೆ.

ಬೆಲ್ಲವು ಅನೇಕ ಪೋಷಕಾಂಶಗಳಿಂದ ಸಂಮಿಳಿತವಾಗಿದೆ. ಇದರಲ್ಲಿ 65 ರಿಂದ 85 ಪ್ರತಿಶತ ಸುಕ್ರೋಸ್ ಇರುತ್ತದೆ. ಮಧುಮೇಹ ರೋಗಿಗಳಿಗೆ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಇರುವ ಆಹಾರ ಪದಾರ್ಥಗಳನ್ನು ಸೇವಿಸುವ ಸಲಹೆ ನೀಡಲಾಗುತ್ತದೆ. ಆದರೆ ಬೆಲ್ಲಿನಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ತುಂಬಾ ಜಾಸ್ತಿಯಾಗಿರುತ್ತದೆ. ಈ ಕಾರಣದಿಂದ ಬೆಲ್ಲಿನ ಅತಿಸೇವನೆ ಮಧುಮೇಹಿಗಳಿಗೆ ಅಪಾಯವನ್ನು ತಂದೊಡ್ಡುತ್ತದೆ. ಆರೋಗ್ಯ ತಜ್ಞರು ನೀಡುವ ಸಲಹೆ ಪ್ರಕಾರ ಮಧುಮೇಹಿಗಳಿಗೆ ರುಚಿಕಟ್ಟಾದ ಪದಾರ್ಥಗಳನ್ನು ತಿನ್ನಬೇಕೆನಿಸಿದರೆ ಒಂದರಿಂದ ಎರಡು ಚಮಚ ಬೆಲ್ಲನ್ನು ಮರ್ಯಾದಿತ ಸ್ವರೂಪದಲ್ಲಿ ತಿಂದರೆ ಮಾತ್ರ ಯೋಗ್ಯ.

ಮಧುಮೇಹಿಗಳು ಬೆಲ್ಲವನ್ನು ತಿನ್ನಬಾರದೆಂದು ಆಯುರ್ವೇದವು ಹೇಳುತ್ತದೆ. ಆಯುರ್ವೇದದಲ್ಲಿ ಶ್ವಾಸಕೋಶದ ಸಂಸರ್ಗ, ಗಂಟಲು ನೋವು, ಮೈಗ್ರೇನ್ ಮತ್ತು ಅಸ್ತಮಾ ಚಿಕಿತ್ಸೆಗಾಗಿ ಬೆಲ್ಲದ ಉಪಯೋಗವಾಗುತ್ತದೆ. ಆದರೆ ಉಪಚಾರದ ಈ ಪ್ರಾಚೀನ ಪದ್ಧತಿಯು ಮಧುಮೇಹದ ರೋಗಿಗಳಿಗೆ ಮಾತ್ರ ಬೆಲ್ಲದ ಉಪಯೋಗ ಮಾಡಲು ವಿರೋಧಿಸುತ್ತದೆ.

ಆರೋಗ್ಯ ತಜ್ಞರು ನೀಡುವ ಸಲಹೆ ಪ್ರಕಾರ, ಹೆಚ್ಚು ಪೋಷಕ ತತ್ವಗಳು ಬೆಲ್ಲಿನಲ್ಲಿದ್ದರೂ ಸಹ ಅದರ ಬದಲಾಗಿ ಜೇನುತುಪ್ಪದ ಸೇವನೆ ಒಳ್ಳೆಯದೆಂದು ಹೇಳುತ್ತಾರೆ. ಸಕ್ಕರೆ ಬದಲಾಗಿ ಬೆಲ್ಲಿನ ಸೇವನೆ ಸುರಕ್ಷಿತವಾಗಿದೆ ಎಂಬ ತಪ್ಪು ಕಲ್ಪನೆ ಹೆಚ್ಚುವರಿ ಮಧುಮೇಹಿಗಳಲ್ಲಿ ಇದೆ. ಹೀಗಾಗಿ ಬೆಲ್ಲಿನ ಸೇವನೆ ಮಧುಮೇಹಿಗೆ ಅಪಾಯವನ್ನು ತಂದೊಡ್ಡುತ್ತದೆ.

ಮಧುಮೇಹದ ಸಮಸ್ಯೆ ಇಲ್ಲದ ವ್ಯಕ್ತಿಗಳಿಗೆ ಸಕ್ಕರೆ ಬದಲಾಗಿ ಬೆಲ್ಲನ್ನು ಉಪಯೋಗಿಸುವ ಆಪ್ಷನ್ ಚೆನ್ನಾಗಿ ಇದೆ, ಆದರೆ ಮಧುಮೇಹಿಗಳಿಗೆ ಅಲ್ಲ.