ಹುಟ್ಟುಹಬ್ಬದಂದು ಪತಿಗೆ ನೀಡಿದ ಸರ್ಪ್ರೈಸ್ ಗಿಫ್ಟ್ ಪತ್ನಿಗೆ ಬಿತ್ತು ದುಬಾರಿ; ಪತ್ನಿಯ ಈ ಉಪದ್ವ್ಯಾಪತನದಿಂದ ತಲೆಚಚ್ಚಿಕೊಂಡ ಗಂಡ!

ಇತ್ತೀಚೆಗೆ ತಮ್ಮ ಆತ್ಮೀಯರಿಗೆ ಸರ್ಪ್ರೈಸ್ ಗಿಫ್ಟ್ ಗಳನ್ನು ನೀಡುವ ಟ್ರೆಂಡ್ ತುಂಬಾ ಹೆಚ್ಚಾಗಿದೆ. ಅದರಲ್ಲೂ ಪತಿ ಪತ್ನಿಯರಲ್ಲಿ ಮತ್ತು ಪ್ರೇಮಿಗಳಲ್ಲಿ ಈ ರೀತಿಯ ಪ್ರೀತಿ ಹೆಚ್ಚಾಗಿ ನೋಡಲು ಸಿಗುತ್ತದೆ.

ಹೀಗೆ ಪತ್ನಿಯೊಬ್ಬಳು ತನ್ನ ಪತಿಗೆ ಸರ್ಪ್ರೈಜ್ ಗಿಫ್ಟ್ ನೀಡಲು ಹೋಗಿ ತನ್ನ ಜೊತೆಗೆ ಗಂಡನಿಗೂ ಸಹ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿಸಿರುವ ಘಟನೆ ರಾಜಸ್ಥಾನದ ಜೋಧಪುರದಿಂದ ವರದಿಯಾಗಿದೆ. ಈ ಪ್ರಯತ್ನದಲ್ಲಿ ಲಕ್ಷಾವಧಿ ರೂಪಾಯಿಗಳ ಮೋಸಕ್ಕೆ ಈ ಗಂಡ ಹೆಂಡಿರ ಜೋಡಿಯೊಂದು ಗುರಿಯಾಗಿದೆ. ತನ್ನ ಗಂಡನ ಹುಟ್ಟುಹಬ್ಬವನ್ನು ವಿಶೇಷವಾಗಿ ಸಂಭ್ರಮಿಸುವ ಸಲುವಾಗಿ ಹೆಂಡತಿಯು ಆರೋಪಿಗಳು ಹೆಣದ ಜಾಲದಲ್ಲಿ ಸಿಕ್ಕು ಮೋಸಕ್ಕೆ ಗುರಿಯಾಗಿದ್ದಾಳೆ. ಈಗ ಗಂಡ-ಹೆಂಡತಿಯರಿಬ್ಬರೂ ಕೂಡಿ ಪೊಲೀಸ್ ಸ್ಟೇಷನ್ ಅಲೆದಾಡುವ ಹಾಗೂ ನ್ಯಾಯಕ್ಕಾಗಿ ಹೋರಾಟ ಮಾಡುವ ಪ್ರಸಂಗ ಒದಗಿ ಬಂದಿದೆ.

ತನ್ನ ಪತಿಯ ಹುಟ್ಟುಹಬ್ಬದಂದು ಪತ್ನಿಯು ಸರ್ಪ್ರೈಸ್ ಗಿಫ್ಟ್ ನಲ್ಲಿ ಒಂದು ಫ್ಲಾಟ್ ನೀಡಬೇಕೆಂದು ಇಚ್ಛಿಸಿದ್ದಳು. ಈ ಪ್ರಯತ್ನದಲ್ಲಿ ಪತ್ನಿಯು ಘೋರ ಮೋಸಕ್ಕೆ ಬಲಿಯಾಗಿ ಈಗ ಗಂಡನ ಜೊತೆಗೆ ಪೊಲೀಸರ ಮೊರೆ ಹೋಗಿದ್ದಾಳೆ.

ಪೊಲೀಸ್ ಅಧಿಕಾರಿ ದಿನೇಶ್ ಲಖಾವತ್ ಅವರು ನೀಡಿದ ಮಾಹಿತಿಯ ಪ್ರಕಾರ, ಅಭಿಷೇಕ ಜೈನ್ ಮತ್ತು ಪ್ರಿಯಾಂಕಾ ಜೈನ್ ಇಬ್ಬರು ಪತಿ-ಪತ್ನಿಯರು ನಿತಿನ್ ಸಿಂಗ್ ಸಿಸೋದಿಯಾ, ಮನಸುಖ್ ಸೋನಿ ಇವರ ವಿರುದ್ಧ ಕೇಸ್ ದಾಖಲಿಸಿದ್ದಾರೆ.

ಪ್ರಿಯಾಂಕಾ ಜೈನ್ ಳು ತನ್ನ ಪತಿ ಅಭಿಷೇಕ್ ನಿಗೆ 17 ಡಿಸೆಂಬರ್ 2021 ರಂದು ಹುಟ್ಟುಹಬ್ಬದ ನಿಮಿತ್ತವಾಗಿ ಸರ್ಪ್ರೈಸ್ ಗಿಫ್ಟ್ ನೀಡಲು ಪ್ಲಾನ್ ಮಾಡುತ್ತಿದ್ದಳು. ಇದಕ್ಕಾಗಿ ಆಕೆ ತಮ್ಮ ಕುಟುಂಬ ಮಿತ್ರನಾದ ನಿತಿನ್ ಸಿಂಹನಿಗೆ ಪತಿಯಾದ ಅಭಿಷೇಕನಿಗೆ ಫ್ಲ್ಯಾಟ್ ನೀಡುವ ವಿಷಯವಾಗಿ ಹೇಳಿದಳು. ಆಗ ನಿತಿನ್ ಸಿಂಗನು ಮನಸುಖ್ ಸೋನಿ ಹೆಸರಿನ ವ್ಯಕ್ತಿಯ ಜೊತೆಗೆ ಪ್ರಿಯಾಂಕಾಳ ಭೇಟಿ ಮಾಡಿಸಿದನು.

ನಿತಿನ್ ಸಿಂಗ್ ಸಿಸೋದಿಯಾ ಪ್ರಿಯಾಂಕಾಳಿಗೆ, ಸದ್ಯ ಮನಸುಖ್ ಸೋನಿಗೆ ಹಣದ ಅವಶ್ಯಕತೆ ಇದೆ, ಒಂದು ವೇಳೆ ನೀವು ಈ ವ್ಯಕ್ತಿಯ ಫ್ಲ್ಯಾಟ್ ಖರೀದಿಸಿದರೆ ಇದರಲ್ಲಿ ನಿಮಗೆ ತುಂಬಾ ಲಾಭವಾಗಲಿದೆ ಎಂದು ಹೇಳಿದ್ದಾನೆ.

ಇದನ್ನು ಕೇಳಿದ ಪತ್ನಿ ಪ್ರಿಯಾಂಕಾಳು ತನ್ನ ಪತಿ ಅಭಿಷೇಕನಿಗೆ ಹೇಳದೆ 5 ಡಿಸೆಂಬರ್ 2019 ರಂದು ವಕೀಲರಾದ ಅನಿಲ್ ಶರ್ಮ ಅವರ ಸಮಕ್ಷ 9 ಲಕ್ಷ ರೂಪಾಯಿಗಳನ್ನು ನೀಡಿ ಮನಸುಖ್ ಸೋನಿ ಜೊತೆಗೆ ವ್ಯವಹಾರವನ್ನು ಮಾಡಿದಳು. ತದನಂತರ ಫೆಬ್ರುವರಿ 2020 ರಿಂದ ನಿತಿನ್ ಸಿಂಗ್ ಪ್ರಿಯಾಂಕಳಿಗೆ ಮನೆಯ ಕಟ್ಟಡದ ಕೆಲಸ ವೇಗದಲ್ಲಿ ಶುರುವಾಗಿದೆ ಎಂದು ಹೇಳುತ್ತಿದ್ದನು. ಮತ್ತು ಶೀಘ್ರದಲ್ಲಿಯೇ ನಿಮಗೆ ಮನೆ ಸಿಗಲಿದೆ ಹಾಗೂ 20 ಸಾವಿರ ರೂಪಾಯಿಗಳು EMI ಕೊಡಬೇಕಾಗಿದೆ ಎಂದು ಹೇಳಿದ್ದಾನೆ.

ಮುಂದೆ ಪ್ರಿಯಾಂಕಾಳು ಸುಮಾರು ಕಳೆದ ವರ್ಷ ಅಂದರೆ 2021 ಆಗಸ್ಟ್ ತಿಂಗಳವರೆಗೆ ಪ್ರತಿ ತಿಂಗಳು 20 ಸಾವಿರ ರೂಪಾಯಿಗಳನ್ನು ನಿತಿನ್ ಸಿಂಗನಿಗೆ ಕೊಡುತ್ತಾ ಬಂದಿದ್ದಾಳೆ. ಮುಂದೆ ಒಂದು ದಿನ ಪ್ರಿಯಾಂಕಾಳು ಸಂಬಂಧಪಟ್ಟ ಕರಾರು ಪತ್ರಗಳನ್ನು ಡಿಮಾಂಡ್ ಮಾಡಿದಾಗ ನಿತಿನ್ ಸಿಂಗ್ ಸಮರ್ಪಕವಾಗಿ ಉತ್ತರ ನೀಡದೇ ಇದ್ದಾಗ ಈ ಮೇಲಿನ ರಾದ್ಧಾಂತ ಹೊರಗೆ ಬಿತ್ತು. ಆಗ ನಿತಿನ್ ಸಿಂಗ್ ಅಷ್ಟಕ್ಕೆ ನಿಲ್ಲದೆ ಪ್ರಿಯಾಂಕಾಳಿಗೆ ಪದೇ ಪದೇ ನಿನ್ನ ಮಕ್ಕಳನ್ನು ಅಪಹರಿಸುತ್ತೇನೆ ಎಂಬ ಹೆದರಿಕೆ ಬೇರೆ ಹಾಕಲು ಶುರು ಮಾಡಿದನು. ಆಗ ಪ್ರಿಯಾಂಕಾಳು ನಡೆದ ಎಲ್ಲ ಘಟನೆಯನ್ನು ತನ್ನ ಪತಿ ಅಭಿಷೇಕನಿಗೆ ಹೇಳಿದಳು. ಆಗ ಅಭಿಷೇಕ್ ನು ನಿತಿನ್ ಸಿಂಗ್ ಮತ್ತು ಮನಸುಖ್ ಸೋನಿ ಇಬ್ಬರ ಕಡೆಗೆ ದಾಖಲೆಪತ್ರಗಳ ವಿಚಾರಣೆ ಮಾಡಿದಾಗ ಸರಿಯಾದ ದಾಖಲೆ ಪತ್ರಗಳನ್ನು ನೀಡಲು ಸ್ಪಷ್ಟವಾಗಿ ನಿರಾಕರಿಸಿದರು. ನಿತಿನ್ ಸಿಂಗ್ ಹೆಸರಿನ ವ್ಯಕ್ತಿಯು ಸರಕಾರಿ ನೌಕರನಾಗಿದ್ದಾನೆ. ಪ್ರಿಯಾಂಕಾಳು ಖರೀದಿಸುವ ಫ್ಲಾಟ್ ಬಗ್ಗೆ ತಿಳಿದುಕೊಳ್ಳಲು ಯತ್ನಿಸಿದಾಗ ಮನಸುಖ್ ಸೋನಿ ಅಗಸ್ಟ್ 2020 ರಲ್ಲಿ ತನ್ನದೇ ಆದ ಇದೇ ಫ್ಲ್ಯಾಟ್ ಮೇಲೆ ಲೋನ್ ತೆಗೆದಿರುವುದು ಬೆಳಕಿಗೆ ಬಂತು. ಸದ್ಯ ಈ ಇಬ್ಬರ ವಿರುದ್ಧ ಪೊಲೀಸರು 420 ಕೇಸ್ ದಾಖಲಿಸಿ ಮುಂದಿನ ತನಿಖೆ ನಡೆಸಿದ್ದಾರೆ.