ನಿಶ್ಚಿಂತೆಯಿಂದ ಹರಟೆ ಹೊಡೆಯುತ್ತ ಕುಳಿತಿರುವಾಗ ಇದ್ದಕ್ಕಿದ್ದಂತೆ ಕುಸಿದುಬಿತ್ತು ಮೇಲಿನಿಂದ ಫ್ಯಾನ್! ನೋಡಿ ಈ ವೈರಲ್ ವಿಡಿಯೋ…
ಯಾವ ಸಮಯದಲ್ಲಿ ಯಾರ ಜೊತೆಗೆ ಏನು ನಡೆಯುತ್ತದೆ? ಯಾವಾಗ ಎಂಥ ಅಪಾಯ ಎದುರಾಗುತ್ತದೆ? ಎಂದು ಕಲ್ಪಿಸಲು ಸಾಧ್ಯವಿಲ್ಲ. ಏಕೆಂದರೆ ಎಲ್ಲವೂ ಆಕಸ್ಮಿಕವಾಗಿ ನಡೆದುಹೋಗಿರುತ್ತದೆ. ಈ ಆಕಸ್ಮಿಕವಾಗಿ ನಡೆದ ಅನಾಹುತ ಘಟನೆಗಳ ಅನೇಕ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ನೋಡಲು ಸಿಗುತ್ತವೆ. ಅವುಗಳನ್ನು ನೋಡಿದಾಗ ನೋಡುಗರಿಗೆ ಶಾಕ್ ಕಾದಿರುತ್ತದೆ. ಫ್ಯಾನಿನ ಕೆಳಗೆ ಕುಳಿತು ಲೋಕಾಭಿರಾಮದ ಮಾತುಗಳನ್ನು ಆಡುವಾಗ ಅದೇ ಫ್ಯಾನ್ ಆಕಸ್ಮಿಕವಾಗಿ ಕೆಳಗೆ ಕುಸಿದು ಬಿದ್ದಾಗ ಅಲ್ಲಿ ಕುಳಿತು ಬದುಕುಳಿದವರಿಗೆ ಹೇಗಾಗಿರಬೇಡ? ಸ್ವಲ್ಪ ಇಮ್ಯಾಜಿನ್ ಮಾಡಿದರೂ ಮೈಯಲ್ಲಿ ನಡುಕ ಹುಟ್ಟುತ್ತದೆ. ಇಂಥದ್ದೇ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಕಾಣಲು ಸಿಗುತ್ತಿದೆ.
ಎದೆಯಲ್ಲಿ ಡವಡವ…
ವಿಡಿಯೋದಲ್ಲಿ ಕಾಣುವ ಹಾಗೆ ಮೂವರು ಸಂಬಂಧಿಕರು ನಿಶ್ಚಿಂತೆಯಿಂದ ಫ್ಯಾನಿನ ತಂಪಾದ ಗಾಳಿಯ ಸುಖವನ್ನು ಸವಿಯುತ್ತ ಮಾತನಾಡುತ್ತ ಕುಳಿತಿದ್ದಾರೆ. ಸರಿಯಾಗಿ ಅದೇ ಸಮಯಕ್ಕೆ ತಲೆಯ ಮೇಲೆ ತಿರುಗುತ್ತಿರುವ ಫ್ಯಾನ್ ಇದ್ದಕ್ಕಿದ್ದಂತೆ ಮೂವರ ಮಧ್ಯದಲ್ಲಿ ಕುಸಿದುಬಿದ್ದಿದೆ. ಸುದೈವದಿಂದ ಯಾರಿಗೂ ಯಾವುದೇ ರೀತಿಯ ಚಿಕ್ಕ ಗಾಯವು ಸಹ ಆಗಿಲ್ಲ. ಆದರೆ ಫ್ಯಾನ್ ಬಿದ್ದ ರಭಸಕ್ಕೆ ಎದೆ ಡವಡವ ಎಂದು ಒಂದೇ ಸಮನೆ ಬಡಿದುಕೊಳ್ಳುತ್ತಿತ್ತು. ವಿಡಿಯೋದಲ್ಲಿ ಕಾಣಿಸುವ ಹಾಗೆ ಫ್ಯಾನ್ ತುಂಬಾ ಹಳೆಯದಾಗಿದೆ. ಪ್ರಸ್ತುತ ವಿಡಿಯೋ ನೋಡಿದ ನೇಟಿಜನ್ಸ್ ಗಳು ಸಹ ಗಾಬರಿಯಾಗಿದ್ದಾರೆ.
ವೀಡಿಯೋ ನೋಡಿ
ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಆದ ಇನ್ಸ್ಟಾಗ್ರಾಮ್ ನಲ್ಲಿ ಘಂಟಾ ಹೆಸರಿನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋಗೆ ಇಲ್ಲಿಯವರೆಗೆ ಸಾವಿರಾರು ಲೈಕ್ಸ್ ಗಳ ಜೊತೆಗೆ ಕಮೆಂಟ್ಸ್ ಗಳು ಬಂದಿವೆ. ಒಬ್ಬ ಯೂಸರ್ ತನ್ನ ಪ್ರತಿಕ್ರಿಯೆಯಲ್ಲಿ ಈ ವಿಡಿಯೋ ನೋಡಿದ ನಂತರ ನಾನು ನನ್ನ ರೂಮಿನಲ್ಲಿಯ ಫ್ಯಾನ್ ಕಡೆಗೆ ನೋಡಿದೆ. ಇನ್ನೊಬ್ಬ ಯೂಸರ್ ನನ್ನ ಮನೆಯಲ್ಲಿರುವ ಫ್ಯಾನ್ ಮೊದಲು ತೆಗೆದು ಹಾಕುತ್ತೇನೆ ಎಂದು ಕಮೆಂಟ್ ಮಾಡಿದ್ದಾನೆ.