ನವಿಲಿನ ಮೊಟ್ಟೆಗಳನ್ನು ದೋಚಿಕೊಳ್ಳಲು ಯತ್ನಿಸಿದಾಗ ತಾಯಿ ನವಿಲು ಕಲಿಸಿತು ಸಾಲಿಡ್ ಪಾಠ! ಹೇಗೆ ನೋಡಿ ಈ ವಿಡಿಯೋದಲ್ಲಿ…
ಈ ಜೀವಜಗತ್ತಿನಲ್ಲಿ ತಾಯಿಯ ಪಾತ್ರವು ತುಂಬಾ ಮಹತ್ವದ್ದಾಗಿದೆ. ಕುಟುಂಬಕ್ಕೆ ಅಥವಾ ಮಕ್ಕಳ ಮೇಲೆ ಎಂತಹದೇ ಕಷ್ಟದ ಪ್ರಸಂಗ ಬರಲಿ ಅದನ್ನು ಸಮರ್ಥವಾಗಿ ನಿಭಾಯಿಸಿಕೊಳ್ಳಲು ತಯಾರಿರುತ್ತಾಳೆ. ತಾಯಿಯು ತನ್ನ ಜೀವನದ ಪ್ರತಿಯೊಂದು ಕ್ಷಣ ಮಕ್ಕಳಿಗಾಗಿ ತ್ಯಾಗ ಮಾಡಲು ಸಿದ್ಧಳಿರುತ್ತಾಳೆ. ಹುಟ್ಟಿನಿಂದಲೂ ತಾಯಿಯು ತನ್ನ ಮಗುವಿನ ಪ್ರತಿಯೊಂದು ಅವಶ್ಯಕತೆಗಳನ್ನು ಪೂರ್ಣ ಮಾಡಲು ರಾತ್ರಿ-ಹಗಲು ಶ್ರಮಿಸುತ್ತಾಳೆ. ಈ ವಾತ್ಸಲ್ಯ ಬರಿ ಮನುಷ್ಯ ಜೀವಿಯಲ್ಲಿ ಅಷ್ಟೇ ಇಲ್ಲ, ಜಗತ್ತಿನ ಪ್ರತಿಯೊಂದು ಜೀವರಾಶಿಯಲ್ಲಿ ಅಡಗಿರುತ್ತದೆ. ಇದೇ ರೀತಿ ತಾಯಿಯ ವಾತ್ಸಲ್ಯ ಮತ್ತು ಪ್ರೀತಿಯನ್ನು ತೋರಿಸುವ ನವಿಲಿನ ವಿಡಿಯೋ ಒಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ.
ತಾಯಿ ನವಿಲು ವ್ಯಕ್ತಿಯ ಮೇಲೆ ಅಟ್ಯಾಕ್ ಮಾಡಿದ ರೀತಿ ನೋಡಿ…
ಈ ವಿಡಿಯೋದಲ್ಲಿ ಒಂದು ನವಿಲು ಕಂಡುಬರುತ್ತಿದೆ. ನೆಲದ ಮೇಲೆ ಆ ನವಿಲಿನ ಕೆಲವು ಮೊಟ್ಟೆಗಳಿವೆ. ಅಲ್ಲಿ ವ್ಯಕ್ತಿಯೊಬ್ಬನು ಬಂದು ಆ ನವಿಲಿನ ಮೊಟ್ಟೆಗಳನ್ನು ಎತ್ತಿಕೊಳ್ಳಲು ಪ್ರಯತ್ನಿಸುತ್ತಾನೆ. ಇದನ್ನು ನೋಡಿದ ಮತ್ತು ಸಹಿಸಿಕೊಳ್ಳದ ತಾಯಿ ನವಿಲು ಭಯಂಕರವಾದ ಕೋಪದಿಂದ ಮೊಟ್ಟೆಗಳನ್ನು ಎತ್ತಿಕೊಳ್ಳುವ ವ್ಯಕ್ತಿಯ ಮೇಲೆ ಅಟ್ಯಾಕ್ ಮಾಡುತ್ತದೆ. ವಿಡಿಯೋದಲ್ಲಿ ಕಾಣುವಹಾಗೆ ನವಿಲು ತನ್ನ ಮೊಟ್ಟೆಗಳ ಹತ್ತಿರ ಕುಳಿತು ಕೊಂಡಿರುತ್ತದೆ. ಆಗ ಎಲ್ಲಿಂದಲೋ ಬಂದ ಒಬ್ಬ ವ್ಯಕ್ತಿಯು ನವಿಲನ್ನು ಎತ್ತಿ ದೂರ ಎಸೆದು ಅದರ ಮೊಟ್ಟೆಗಳನ್ನು ದೋಚಿಕೊಳ್ಳಲು ನೋಡುತ್ತಾನೆ. ವ್ಯಕ್ತಿಯ ಈ ಕೃತಿ ನವಿಲಿಗೆ ಸ್ವಲ್ಪವೂ ಹಿಡಿಸುವುದಿಲ್ಲ. ಹೀಗಾಗಿ ಅದು ಕೋಪದಿಂದ ವ್ಯಕ್ತಿಯ ಮೇಲೆ ಅಟ್ಯಾಕ್ ಮಾಡುತ್ತದೆ. ನವಿಲು ಮಾಡಿದ ಅನಿರೀಕ್ಷಿತ ಅಟ್ಯಾಕ್ ನಿಂದ ವ್ಯಕ್ತಿಯ ಬ್ಯಾಲೆನ್ಸ್ ತಪ್ಪಿ ಕೆಳಗೆ ಬೀಳುತ್ತಾನೆ.
ತಾಯಿಯ ಹೃದಯ ಪ್ರತಿಯೊಂದು ಜೀವಿಯಲ್ಲಿ ಇರುತ್ತದೆ.
ತನ್ನ ಕರುಳ ಕುಡಿಗಾಗಿ ತಾಯಿ ಏನು ಬೇಕಾದರೂ ಮಾಡಬಲ್ಲಳು ಎಂಬುದು ಈ ವಿಡಿಯೋದಿಂದ ತಿಳಿದುಬರುತ್ತದೆ. ಮಾನವನೇ ಆಗಿರಲಿ ಅಥವಾ ಬೇರೆ ಯಾವುದೇ ಜೀವವೇ ಆಗಿರಲಿ ತಾಯಿಯ ಮಮತೆ ತುಂಬಿದ ಹೃದಯ ಪ್ರತಿಯೊಂದು ಜೀವಿಯಲ್ಲಿ ಕಂಡುಬರುತ್ತದೆ. ಅದು ತನ್ನ ಕರುಳ ಕುಡಿಯ ಹಾನಿಯಾಗದಂತೆ ನೋಡಿಕೊಳ್ಳಲು ಯಾವತ್ತೂ ಸಮರ್ಥವಾಗಿರುತ್ತದೆ.
ವಿಡಿಯೋ ನೋಡಿ
ಈ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ doctor_priya_sharma ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಇಲ್ಲಿಯವರೆಗೆ ಈ ವಿಡಿಯೋವನ್ನು 66 ದಶಲಕ್ಷ ಜನರು ವೀಕ್ಷಿಸಿದ್ದಾರೆ. ಮತ್ತು 22 ಲಕ್ಷಕ್ಕಿಂತಲೂ ಹೆಚ್ಚು ನೇಟಿಜನ್ಸ್ ಗಳು ಈ ವಿಡಿಯೋಗೆ ಲೈಕ್ ಮಾಡಿದ್ದಾರೆ. ವಿಡಿಯೋ ನೋಡಿದ ಅನೇಕ ನೇಟಿಜನ್ಸ್ ಗಳು ಕಮೆಂಟ್ ಸಹ ಮಾಡಿ ತಮ್ಮ ಪ್ರತಿಕ್ರಿಯೆ ತಿಳಿಸಿದ್ದಾರೆ.