ಅತಿಯಾದ ಬುದ್ಧಿವಂತಿಕೆಯು ಕೆಲವೊಮ್ಮೆ ಮಣ್ಣು ತಿನ್ನುತ್ತದೆ; ನಡು ರಸ್ತೆಯಲ್ಲಿಯೇ ಟ್ರ್ಯಾಕ್ಟರ್ ನ ಪೋಸ್ಟ್ ಮಾರ್ಟಂ! ನೋಡಿ ಈ ವೈರಲ್ ವಿಡಿಯೋದಲ್ಲಿ…
ಕೆಲವೊಂದು ಸಲ ನಾವು ತೆಗೆದುಕೊಳ್ಳುವ ಶಾರ್ಟ್ ಕಟ್ ಐಡಿಯಾಗಳೇ ನಮ್ಮನ್ನು ಆಪತ್ತಿನಲ್ಲಿ ಸಿಲುಕಿಸಿ ಬಿಡುತ್ತವೆ. ಈಗ ಇಲ್ಲಿ ನೋಡುವ ವಿಡಿಯೋದಲ್ಲಿ ತೆಗೆದುಕೊಂಡ ಒಂದು ನಿರ್ಣಯವೇ ಟ್ರ್ಯಾಕ್ಟರ್ ಮಾಲೀಕನಿಗೆ ತುಂಬಾ ದುಬಾರಿಯಾಗಿ ಪರಿಣಮಿಸಿದೆ.
ಪ್ರಸ್ತುತ ವಿಡಿಯೋ ಪಂಚನದಿಗಳ ಬೀಡು ಪಂಜಾಬಿನಲ್ಲಿಯದಿದೆಯೆಂದು ತಿಳಿದುಬಂದಿದೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ tractor_bullet_loverz ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ ಸುಮಾರು 80 ಸಾವಿರಕ್ಕಿಂತಲೂ ಹೆಚ್ಚು ಜನರು ವೀಕ್ಷಿಸಿದ್ದಾರೆ.
ವಿಡಿಯೋದಲ್ಲಿ ಕಾಣುವ ಹಾಗೆ ನಡುರಸ್ತೆಯಲ್ಲಿ ಟ್ರ್ಯಾಕ್ಟರ್ ಕಬ್ಬನ್ನು ಹೇರಿಕೊಂಡು ನಿಂತಿದೆ. ಹೇರಿದ ಕಬ್ಬು ಟ್ರ್ಯಾಕ್ಟರ್ ಗೆ ಓವರ್ಲೋಡ್ ಆಗಿ ದಾರಿಯಲ್ಲಿ ಸಿಕ್ಕಿಬಿದ್ದಿದೆ. ಓವರ್ಲೋಡ್ ಆಗಿರುವ ಕಾರಣ ಟ್ರ್ಯಾಕ್ಟರ್ ನಿಂತ ಜಾಗದಲ್ಲಿಂದ ಸ್ವಲ್ಪವೂ ಹಿಂದೆ ಮುಂದೆ ಸರಿಯುತ್ತಿಲ್ಲ.
ಅನೇಕ ಪ್ರಯತ್ನಗಳ ನಂತರವೂ ಟ್ರಾಕ್ಟರ್ ಕದಲಿಸಲಿಕ್ಕೆ ಸಾಧ್ಯವಾಗದೇ ಇದ್ದಾಗ ಕೊನೆಗೆ ಟ್ರ್ಯಾಕ್ಟರ್ ನ್ನು ಬಲ ಪ್ರಯೋಗಿಸಿಯಾದರೂ ನಿಂತ ಜಾಗದಲ್ಲಿಂದ ಕದಲಿಸಲೇಬೇಕು ಎಂಬ ಛಲದಿಂದ ಕ್ರೇನ್ ಕರೆಯಿಸಿ ಕ್ರೇನ್ ಮತ್ತು ಟ್ರ್ಯಾಕ್ಟರ್ ನ ಎಂಜಿನ್ ಗೆ ಬಲವಾಗಿ ಹಗ್ಗವನ್ನು ಕಟ್ಟಿ ಎಳೆಯಲು ಶುರುಮಾಡಿದ್ದಾರೆ.
ಮುಂದಿನ ದೃಶ್ಯ ನಿಮ್ಮ ಕಣ್ಣ ಮುಂದೆಯೇ ಇದೆ ನೋಡಿ ಈ ವೈರಲ್ ವಿಡಿಯೋ…
ಇಲ್ಲಿ ತೋರಿಸಿದ ಅತಿಯಾದ ಬುದ್ಧಿವಂತಿಕೆಯ ಪರಿಣಾಮದಿಂದಾಗಿ ಟ್ರ್ಯಾಕ್ಟರ್ ದ ಎಂಜಿನ್ ಎರಡು ಹೋಳುಗಳಾಗಿ ರಸ್ತೆಯ ಮೇಲೆ ಬಿದ್ದು ಬಿಟ್ಟಿತು. ಈ ಕೆಲಸ ಮಾಡುವ ಮೊದಲೇ ಟ್ರಾಲಿಯಲ್ಲಿಯ ಸ್ವಲ್ಪ ಭಾರವನ್ನು ಕಡಿಮೆ ಮಾಡಿ ಈ ಪ್ರಯತ್ನ ಮಾಡಿದರೆ ಪ್ಲಾನ್ ಸಕ್ಸಸ್ ಆಗುತ್ತಿತ್ತು. ಆದರೆ ಟ್ರ್ಯಾಕ್ಟರ್ ಮಾಲಿಕನಿಗೆ ಮಾತ್ರ ಇಲ್ಲಿ ಸರಿಯಾಗಿ ಪಂಗನಾಮ ಬಿದ್ದಿದೆ, ಅಲ್ವಾ?