T-20 World Cup 2022 ಟೈಮ್ ಟೇಬಲ್ ಜಾಹೀರು! ಈ ದಿನ ನಡೆಯಲಿದೆ ಭಾರತ-ಪಾಕ್ ಹಣಾಹಣಿ…

ಐಸಿಸಿಯು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ 2022 ರ t20 ವರ್ಲ್ಡ್ ಕಪ್ ಟೈಮ್ ಟೇಬಲ್ ಜಾಹೀರು ಪಡಿಸಿದೆ. 16 ಅಕ್ಟೋಬರ್ ನಿಂದ ನವೆಂಬರ್ 13 ರವರೆಗೆ ಆಸ್ಟ್ರೇಲಿಯಾದ ಏಳು ಪಟ್ಟಣಗಳಲ್ಲಿ ಈ ಸ್ಪರ್ಧೆ ನಡೆಯಲಿದೆ. ಈ ಸ್ಪರ್ಧೆಯ ಫೈನಲ್ ಪಂದ್ಯ ಮೆಲ್ಬೋರ್ನ್ ದ MCG ಮೈದಾನದಲ್ಲಿ ನಡೆಯಲಿದೆ.

ಭಾರತ-ಪಾಕ್ ಮತ್ತೊಮ್ಮೆ ಹಣಾಹಣಿ?

ಈ ಸ್ಪರ್ಧೆಯಲ್ಲಿಯ ಭಾರತ-ಪಾಕ್ ನಡುವಿನ ರೋಚಕ ಹಣಾಹಣಿ ಮೆಲ್ಬೋರ್ನ್ ನ ಎಂಸಿಜಿ ಗ್ರೌಂಡ್ ಮೇಲೆ ಅಕ್ಟೋಬರ್ 23 ರಂದು ನಡೆಯಲಿದೆ. ಕಳೆದ ವರ್ಷ ಪಾಕ್ ವಿರುದ್ಧದ ಸೋಲಿನ ಸೇಡುತೀರಿಸಿಕೊಳ್ಳಲು ಭಾರತಕ್ಕೆ ಇದೊಂದು ಒಳ್ಳೆಯ ಅವಕಾಶವೆಂದೇ ಹೇಳಬಹುದು.

T20 ವರ್ಲ್ಡ್ ಕಪ್ ನ ಈ ಸ್ಪರ್ಧೆಯಲ್ಲಿ ಒಟ್ಟು 12 ದೇಶಗಳ ತಂಡಗಳು ಭಾಗವಹಿಸಲಿವೆ. ಈ ಸ್ಪರ್ಧೆಯಲ್ಲಿ ಕೆಳಗಿನಂತೆ ಎರಡು ಗುಂಪುಗಳನ್ನು ಮಾಡಲಾಗಿದೆ.

ಗ್ರೂಪ್ 1 – ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಇಂಗ್ಲೆಂಡ್ ಮತ್ತು ಅಫ್ಘಾನಿಸ್ತಾನ

ಗ್ರೂಪ್ 2 – ಭಾರತ, ದಕ್ಷಿಣ ಆಫ್ರಿಕಾ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ

ಪ್ರತಿಯೊಂದು ಗ್ರೂಪಿನಲ್ಲಿ ಇನ್ನೆರಡು ತಂಡಗಳು ಅರ್ಹತಾ ಸುತ್ತಿನ ಪಂದ್ಯಗಳನ್ನು ಗೆದ್ದು ಪ್ರವೇಶ ಮಾಡಲಿವೆ. ಅರ್ಹತಾ ಸುತ್ತಿಗಾಗಿ ಸೆಣಸಲಿರುವ ಮುಖ್ಯ ತಂಡಗಳಲ್ಲಿ ವೆಸ್ಟ್ ಇಂಡೀಸ್, ಶ್ರೀಲಂಕಾ, ನಮೀಬಿಯಾ, ಸ್ಕಾಟ್ಲೆಂಡ್ ಈ ದೇಶಗಳು ಇವೆ.