ಹುಡುಗಿಯರು ರಾತ್ರಿ ವೇಳೆ ಏಕಾಂತದಲ್ಲಿದ್ದಾಗ ಮೊಬೈಲ್ ನಲ್ಲಿ ಏನು ಸರ್ಚ್ ಮಾಡುತ್ತಾರೆ? ಈ 4 ಸಬ್ಜೆಕ್ಟ್ ಗಳಿವೆ ಫೇವರೆಟ್!

ಇಂದಿನ ಯುಗದಲ್ಲಿ ಮೊಬೈಲ್ ಮತ್ತು ಇಂಟರ್ನೆಟ್ ಇವೆರಡು ಪ್ರತಿಯೊಬ್ಬರ ಜೀವನದ ಮಹತ್ವದ ಭಾಗಗಳಾಗಿವೆ. ಎಲ್ಲ ವರ್ಗದ ಎಲ್ಲ ವಯಸ್ಸಿನ ಜನರು ಇದರಲ್ಲಿ ತಮ್ಮ ಸಮಯವನ್ನು ಸ್ವಲ್ಪಾದರೂ ಕಳೆದೆ ಕಳೆಯುತ್ತಾರೆ. ಪ್ರತಿಯೊಬ್ಬರು ತಮಗೆ ಇಷ್ಟವಾದ ವಿಷಯಗಳ ಬಗ್ಗೆ ಸರ್ಚ್ ಮಾಡುತ್ತಲೇ ಇರುತ್ತಾರೆ.

ಇದರಲ್ಲಿ ಗೂಗಲ್ ಮೇಲೆ ಸರ್ಚ್ ಮಾಡುವ ಪ್ರಮಾಣ ಸಹಜವಾಗಿಯೇ ಹೆಚ್ಚಾಗಿದೆ. ಮೊಬೈಲ್ ನಲ್ಲಿ ಮಾಡುವ ಸರ್ಚ್ ನಿಂದಾಗಿ ಯಾರಿಗೆ ಯಾವ ವಿಷಯಗಳು ಇಷ್ಟವಾಗುತ್ತವೆ ಎಂಬುದು ಗೊತ್ತಾಗುತ್ತದೆ. ಇತ್ತೀಚೆಗಷ್ಟೇ ಗೂಗಲ್ ಈ ಬಗ್ಗೆ ಒಂದು ವರದಿಯನ್ನು ನೀಡಿತ್ತು. ಇದರಲ್ಲಿ ಯುವ ವಯಸ್ಸಿನ ಹುಡುಗಿಯರು ರಾತ್ರಿಯ ಸಮಯದಲ್ಲಿ ಒಬ್ಬರೇ ಇದ್ದಾಗ ಇಂಟರ್ನೆಟ್ನಲ್ಲಿ ಹೆಚ್ಚಾಗಿ ಏನನ್ನು ಸರ್ಚ್ ಮಾಡುತ್ತಾರೆ ಎಂಬುದನ್ನು ಹೇಳಿತ್ತು. ಇದಕ್ಕಾಗಿ ಗೂಗಲ್ ಯಾವ ಡಾಟಾ ಬೇಸ್ ಉಪಯೋಗಿಸಿತ್ತೋ ಅದರಲ್ಲಿ 75% ಮಹಿಳೆಯರು 15 ರಿಂದ 43 ವಯಸ್ಸಿನವರಾಗಿದ್ದರು.

*ಆನ್ಲೈನ್ ಶಾಪಿಂಗ್– ಶಾಪಿಂಗ್ ಇದು ಹುಡುಗಿಯರಿಗೆ ತುಂಬಾ ಇಷ್ಟವಾದ ಕೆಲಸವಾಗಿದೆ. ಹೊಸದಾದ ವಸ್ತುವನ್ನು ಖರೀದಿಸಬೇಕಾದರೆ ಸದ್ಯದ ಟ್ರೆಂಡ್ ನ್ನು ಬೇರೆ ಬೇರೆ ಸೈಟ್ ಗಳಲ್ಲಿ ಶೋಧಿಸುತ್ತಾರೆ. ಒಂದು ವೇಳೆ ಶಾಪಿಂಗ್ ಮಾಡುವ ಅವಶ್ಯಕತೆ ಇಲ್ಲದಿದ್ದರೂ ಮಾರ್ಕೆಟ್ನಲ್ಲಿ ಹೊಸದಾಗಿ ಏನೇನು ಬಂದಿದೆ ಎಂಬುದರ ಬಗ್ಗೆ ಶೋಧ ಜಾರಿಯಲ್ಲಿರುತ್ತದೆ. ಶಾಪಿಂಗ್ ನಲ್ಲಿರುವ ವಿವಿಧ ಆಫರ್ ಗಳು ಹಾಗೂ ಹೊಸದಾದ ಕಲೆಕ್ಷನ್ ಮತ್ತು ಲೇಟೆಸ್ಟ್ ಟ್ರೆಂಡ್ಸ್ ಇವುಗಳ ಬಗ್ಗೆ ಇಂಟರ್ನೆಟ್ನಲ್ಲಿ ಶೋಧ ನಡೆದಿರುತ್ತದೆ.

*ಬ್ಯೂಟಿ ಟಿಪ್ಸ್ – ರಾತ್ರಿ ಒಬ್ಬರೇ ಇದ್ದಾಗ ಇಂಟರ್ನೆಟ್ನಲ್ಲಿ ಬ್ಯೂಟಿ ಟಿಪ್ಸ್ ಗಳ ಬಗ್ಗೆ ಹುಡುಗಿಯರು ಹೆಚ್ಚಾಗಿ ತಲೆ ಕೆಡಿಸಿಕೊಳ್ಳುತ್ತಾರೆ. 17 ರಿಂದ 34 ವಯಸ್ಸಿನ ಹುಡುಗಿಯರಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ. ಇಂಟರ್ನೆಟ್ ನಲ್ಲಿ ವಿವಿಧ ಪ್ರಕಾರದ ಕಾಸ್ಮೆಟಿಕ್ಸ್, ಮೇಕಪ್ ಟಿಪ್ಸ್, ಮನೆಯಲ್ಲಿಯೇ ಮಾಡುವ ಸೌಂದರ್ಯ ಉಪಚಾರ, ಲೇಟೆಸ್ಟ್ ಬ್ಯೂಟಿ ಟ್ರೆಂಡ್ಸ್ ಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುವ ಈ ರೀತಿಯ ಕೆಲಸಗಳು ನಡೆದಿರುತ್ತವೆ ಎಂದು ಗೂಗಲ್ ಹೇಳುತ್ತದೆ. ಇದರಲ್ಲಿ ಹೆಚ್ಚಾಗಿ ಹುಡುಗಿಯರು ಕೊರಿಯನ್ ಬ್ಯೂಟಿ ಟ್ರೆಂಡ್ ಫಾಲೋ ಮಾಡುತ್ತಾರೆ ಎಂದು ತಿಳಿದುಬಂದಿದೆ.

  • ಹಾಡುಗಳನ್ನು ಕೇಳುವುದು– ಹೆಚ್ಚಾಗಿ ಹುಡುಗಿಯರಿಗೆ ಹಾಡುಗಳನ್ನು ಕೇಳುವುದು ತುಂಬಾ ಇಷ್ಟವಾಗುತ್ತದೆ. ದಿನಪೂರ್ತಿ ಕೆಲಸಗಳಲ್ಲಿ ಬಿಜಿ ಇರುವುದರಿಂದಾಗಿ ಹಾಡುಗಳನ್ನು ಕೇಳುವುದು ಆಗುವುದಿಲ್ಲ. ಹೀಗಾಗಿ ಅನೇಕ ಹುಡುಗಿಯರು ರಾತ್ರಿಯೇ ಏಕಾಂತದಲ್ಲಿ ತಮಗೆ ಇಷ್ಟವಾದ ಸುಂದರ ಹಾಡುಗಳನ್ನು ಕೇಳಲು ಇಷ್ಟಪಡುತ್ತಾರೆ. ರಾತ್ರಿಯ ಸಮಯದಲ್ಲಿ ಮನಸ್ಸಿಗೆ ನೆಮ್ಮದಿ ನೀಡುವ ಸುಮಧುರವಾದ ಸಂಗೀತ ಕೇಳಿ ನಿದ್ದೆಗೆ ಜಾರುವ ಯತ್ನ ಹುಡುಗಿಯರು, ಯುವತಿಯರು ಮಾಡುತ್ತಾರೆ ಎಂದು ಗೂಗಲ್ನಲ್ಲಿ ಕಂಡುಬಂದಿದೆ.
  • ಕರಿಯರ್ ಮತ್ತು ವಿವಿಧ ಪ್ರಕಾರದ ಸ್ಟಡಿ – ಮೊದಲಿಗಿಂತಲೂ ಈಗಿನ ಹುಡುಗಿಯರು ತಮ್ಮ ಕರಿಯರ್ ಬಗ್ಗೆ ಜಾಗೃತರಾಗಿರುವದಲ್ಲದೆ ತುಂಬಾ ತಲೆಯೂ ಕೆಡಿಸಿಕೊಳ್ಳುತ್ತಾರೆ. ಯಾವುದರಲ್ಲಿ ಒಳ್ಳೆಯ ಅವಕಾಶ ದೊರೆಯುತ್ತದೆಯೋ ಎಂಬ ಶೋಧದಲ್ಲಿ ಇರುತ್ತಾರೆ. ಈಗಂತೂ ಬೇರೆಬೇರೆ ಫೀಲ್ಡ್ ಗಳಲ್ಲಿ ಕರಿಯರ್ ಮಾಡುವ ಅವಕಾಶ ಯುವತಿ ಅಥವಾ ಹುಡುಗಿಯರಿಗೆ ತುಂಬಾ ಜಾಸ್ತಿಯಾಗಿದೆ. ಹೀಗಾಗಿ ತಮಗೆ ಇಷ್ಟವಾದ ಫೀಲ್ಡ್ ಗಳಲ್ಲಿ ಕರಿಯರ್ ಮಾಡುವ ಉದ್ದೇಶದಿಂದ ಈಗಿನ ಹುಡುಗಿಯರು ಪ್ರಯತ್ನಶೀಲರಾಗಿದ್ದಾರೆ.