ಮೇಕೆಗೆ ಎತ್ತರವಾದ ಮರದ ಮೇಲಿಂದ ಸಹಜವಾಗಿ ಕೆಳಗಿಳಿಯುವದನ್ನು ನೋಡಿದ್ದೀರಾ? ಇಲ್ಲವಾದರೆ ನೋಡಿ ಈ ವೈರಲ್ ವಿಡಿಯೋ!

ನ್ಯೂಟನ್ ನ ನಿಯಮದ ಪ್ರಕಾರ ಯಾವುದೇ ಎರಡು ಅಥವಾ ನಾಲ್ಕು ಕಾಲುಗಳಿರುವ ಪ್ರಾಣಿಯು ಎತ್ತರವಾದ ಗಿಡದ ಮೇಲೆ ಮತ್ತು ಕಟ್ಟಡದ ಮೇಲೆ ಸಹಜವಾಗಿ ನಡೆದುಕೊಂಡು ಏರುವದು ಅಥವಾ ಇಳಿಯುವುದು ಸಾಧ್ಯವಿಲ್ಲ. ಕಾರಣ ಪೃಥ್ವಿಯ ಗುರುತ್ವಾಕರ್ಷಣ ಶಕ್ತಿಯು ಆ ವ್ಯಕ್ತಿಗೆ ಅಥವಾ ಪ್ರಾಣಿಗೆ ತನ್ನ ಕಡೆಗೆ ಅಂದರೆ ಭೂಮಿಯು ತನ್ನಡೆಗೆ ಸೆಳೆದುಕೊಳ್ಳುತ್ತದೆ. ಚಲನಚಿತ್ರಗಳಲ್ಲಿ ನಾಯಕನಟ ಈ ರೀತಿಯ ಸ್ಟಂಟ್ ಮಾಡುವುದನ್ನು ನಾವು ನೋಡುತ್ತೇವೆ. ಆದರೆ ವಾಸ್ತವದಲ್ಲಿ ಈ ರೀತಿಯಾಗಿ ಮಾಡಲು ಸಾಧ್ಯವೇ ಇಲ್ಲ.

ಆದರೆ ಇಲ್ಲಿ ಮೇಕೆಯೊಂದು ಈ ರೀತಿಯ ಸ್ಟಂಟ್ ಅದಕ್ಕೆ ತಿಳಿಯದೇನೆ ತುಂಬಾ ಸಹಜವಾಗಿ ಮಾಡಿದೆ ಎಂದು ಹೇಳಬಹುದು. ಮೇಕೆ ಎತ್ತರವಾದ ಮರದ ಮೇಲಿಂದ ಸಹಜವಾಗಿ ಕೆಳಗೆ ಇಳಿಯುತ್ತಿರುವ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸದ್ಯ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದಾಗ ನಿಮಗೂ ಸಹ ಆಶ್ಚರ್ಯವಾಗದೇ ಇರಲಾರದು.

ನೋಡಿ ಈ ವಿಡಿಯೋ…

ಈ ವಿಡಿಯೋ ನೋಡಿದ ಅನೇಕ ನೇಟಿಜನ್ಸ್ ಗಳು ಇದು ಫೇಕ್ ವಿಡಿಯೋ ಅಂತೂ ಇರಲಿಕ್ಕಿಲ್ಲವಲ್ಲ ಎಂಬ ಸಂಶಯದಿಂದ ಅನೇಕ ಸಲ ಮೇಲಿಂದ ಮೇಲೆ ಈ ವಿಡಿಯೋ ನೋಡಿದ್ದಾರೆ. ಮರದ ಮೇಲಿನಿಂದ ಮೇಕೆಯು ಯಾವುದೇ ರೀತಿಯ ಭಯವಿಲ್ಲದೆ ಸಹಜವಾಗಿ ಕೆಳಗೆ ಇಳಿದು ಬರುತ್ತಿರುವುದು ವಿಡಿಯೋದಲ್ಲಿ ಕಂಡು ಬರುತ್ತದೆ.

ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಪ್ರಸ್ತುತ ವಿಡಿಯೋ ನೇಟಿಜನ್ಸ್ ಗಳಿಗೆ ತುಂಬಾ ಇಷ್ಟವಾಗಿ ಶೇರ್ ಸಹ ಮಾಡುತ್ತಿದ್ದಾರೆ.