ಅದೃಷ್ಟ ಬಲಶಾಲಿಯಾಗಿದ್ದರೆ ಬಂದ ಯಮರಾಜನು empty ರಿಟರ್ನ್; ಟಾಟಾ ನೇಕ್ಸಾನ್ 200 ಅಡಿ ಕಣಿವೆಯಲ್ಲಿ ಬಿದ್ದರೂ ‘ಕಾರಿನೊಳಗಿನವರು’ OK!

ಎಷ್ಟೋ ಸಲ ಮನುಷ್ಯ ಅನಾಹುತ ಘಟನೆಗಳಲ್ಲಿ ಅಚ್ಚರಿ ಪಡುವ ರೀತಿಯಲ್ಲಿ ಬದುಕುಳಿದಿರುವದನ್ನು ಕೇಳಿದ್ದೇವೆ ಮತ್ತು ನೋಡಿದ್ದೇವೆ. ಇದೇ ರೀತಿಯ ಘಟನೆಯೊಂದು ಹಿಮಾಚಲ ಪ್ರದೇಶದಿಂದ ವರದಿಯಾಗಿದೆ. ಇಲ್ಲಿ ಟಾಟಾ ನೆಕ್ಸಾನ್ ಕಂಪನಿಯ ಕಾರು ಸುಮಾರು 200 ಅಡಿ ಆಳವಾದ ಪ್ರಪಾತಕ್ಕೆ ಬಿದ್ದರೂ ಡ್ರೈವರ್ ಹಾಗೂ ಇನ್ನೊಬ್ಬ ವ್ಯಕ್ತಿಗೆ ಒಂದೇ ಒಂದು ಚಿಕ್ಕ ಗಾಯವು ಆಗದೆ ತುಂಬಾ ಅಚ್ಚರಿ ಪಡುವ ರೀತಿಯಲ್ಲಿ ಬದುಕುಳಿದಿರುವ ಘಟನೆ ಬೆಳಕಿಗೆ ಬಂದಿದೆ.

ಕಾರು ಹಿಮದ ಮೇಲಿನಿಂದ ಚಲಿಸುವಾಗ ಜಾರಿದ ಪರಿಣಾಮವಾಗಿ 200 ಅಡಿ ಆಳದ ಕಣಿವೆಯಲ್ಲಿ ಬಿದ್ದು ಈ ಅಪಘಾತ ನಡೆದಿದೆ ಎಂದು ತಿಳಿದು ಬಂದಿದೆ. ಈ ಸಂದರ್ಭದಲ್ಲಿ ಕಾರು ಸುಮಾರು 5 ರಿಂದ 6 ಬಾರಿ ಹವೆಯಲ್ಲಿ ಗಿರಕಿ ಹೊಡೆದಿದೆ ಎನ್ನಲಾಗಿದೆ. ಈ ಅಪಘಾತದ ವಿಡಿಯೋ ನಿಖಿಲ್ ರಾಣಾ ತನ್ನ ಯುಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದ ನಂತರ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಯಿತು.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಈ ಅಪಘಾತದ ಸಮಯ ಕಾರಿನಲ್ಲಿ ಇಬ್ಬರು ವ್ಯಕ್ತಿಗಳು ಇದ್ದರು. ಈ ಅನಾಹುತದಲ್ಲಿ ಕಾರು ಜಖಮ್ ಗೊಂಡಿದೆ ಆದರೆ ಇಬ್ಬರೂ ಯಾವುದೇ ರೀತಿಯ ಚಿಕ್ಕಪುಟ್ಟ ಗಾಯವಿಲ್ಲದೆ ಬದುಕುಳಿದಿದ್ದಾರೆ ಎಂದು ಹೇಳಿದ್ದಾರೆ.

ನಂತರ ಈ ಕಾರನ್ನು ಕಣಿವೆಯಿಂದ ಕ್ರೇನ್ ಸಹಾಯದಿಂದ ಮೇಲಕ್ಕೆ ಎತ್ತಿ ಹೊರತೆಗೆಯಲಾಗಿದೆ. ವಿಶೇಷವೆಂದರೆ ಈ ಅಪಘಾತದಲ್ಲಿ ಕಾರಿಗೂ ಸಹ ಹೇಳಿಕೊಳ್ಳುವಂಥ ದೊಡ್ಡ ಹಾನಿ ಏನೂ ಆಗಿಲ್ಲ.

ಕಳೆದ ಕೆಲವು ವರ್ಷಗಳಿಂದ ಟಾಟಾ ಮೋಟಾರ್ಸ್ ಕಂಪನಿಯು ಗ್ರಾಹಕರ ಸುರಕ್ಷತೆಯನ್ನು ಗಮನದಲ್ಲಿಟ್ಟು ತಮ್ಮ ಕಾರುಗಳಲ್ಲಿ ಸುರಕ್ಷೆಗೆ ಸಂಬಂಧಿಸಿದಂತೆ ಆಮೂಲಾಗ್ರ ಬದಲಾವಣೆಗಳನ್ನು ಮಾಡುತ್ತ ಬಂದಿದೆ. ಇದೇ ಕಾರಣದಿಂದ ಗ್ಲೋಬಲ್ NCAP ನಲ್ಲಿ ಟಾಟಾ ಕಂಪನಿಯ ಹೆಚ್ಚು ಕಡಿಮೆ ಎಲ್ಲಾ ವಾಹನಗಳಿಗೆ ಸುರಕ್ಷೆಯ ವಿಷಯದಲ್ಲಿ 5 – ಸ್ಟಾರ್ ರೇಟಿಂಗ್ ದೊರೆಯುತ್ತಿದೆ. ಕಂಪನಿಯು ತಮ್ಮ ವಾಹನಗಳನ್ನು ಇನ್ನಷ್ಟು ಬಲಶಾಲಿಯನ್ನಾಗಿ ಮಾಡಲು ಹಾಗೂ ಸುರಕ್ಷೆಯ ಕಡೆಗೆ ಗಮನ ನೀಡುತ್ತಿದೆ ಎಂಬುದು ಕಂಡು ಬರುತ್ತಿದೆ. ಹಣಕ್ಕಾಗಿ ಗ್ರಾಹಕರ ಸುರಕ್ಷೆಯ ಜೊತೆಗೆ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳುತ್ತದೆ ಕಂಪನಿ.

Tata Nexon ಈ ಕಾರು ಗ್ಲೋಬಲ್ NCAP ಯ 5 – ಸ್ಟಾರ್ ರೇಟಿಂಗ್ ಪಡೆದ ಭಾರತದ ಮೊದಲ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸುರಕ್ಷೆಯ ವಿಷಯದಲ್ಲಿ ಈ ಕಾರು 17 ರಲ್ಲಿ 16.7 ಗುಣಗಳನ್ನು ಪಡೆದಿದೆ. ಎಲ್ಲಕ್ಕೂ ವಿಶೇಷವೆಂದರೆ ಈ ಕಾರು ಮೆಡ್ ಇನ್ ಇಂಡಿಯಾ ಆಗಿದೆ.