ಈ ಕಾರ್ಮಿಕನ ವೈರಲ್ ಡ್ಯಾನ್ಸ್ ನೋಡಲು ಸ್ವಲ್ಪ ನೆಟ್ ಖರ್ಚಾದರೂ ಪರ್ವಾಗಿಲ್ಲ ನೋಡಿ; ಮೀಡಿಯಾದಲ್ಲಾದ ಒಂದೇ ರಾತ್ರಿಯಲ್ಲಿ ಹೀರೋ..!
ಡಾನ್ಸ್ ಮಾಡುವುದೊಂದು ಚಿಕ್ಕ ಪುಟ್ಟ ಕೆಲಸವಲ್ಲ. ಇದಕ್ಕಾಗಿ ಇಡೀ ದೇಹ ಫ್ಲೆಕ್ಸಿಬಲ್ ಆಗಿರುವುದು ತುಂಬಾ ಅವಶ್ಯಕವಾಗಿದೆ. ವಿಡಿಯೋದಲ್ಲಿ ಕಾಣುವ ಈ ಕಾರ್ಮಿಕನ ಡ್ಯಾನ್ಸ್ ನಿಜಕ್ಕೂ ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿದೆ. ಒಂದು ಸಮಯದಲ್ಲಿ ಜನರು ಈ ಡ್ಯಾನ್ಸ್ ನಂತಹ ವಿಷಯಗಳಿಗೆ ಅಷ್ಟೊಂದು ಬೆಲೆ ನೀಡುತ್ತಿರಲಿಲ್ಲ. ಆದರೆ ಸದ್ಯದ ಸಮಯದಲ್ಲಿ ಡಾನ್ಸ್, ಗಾಯನ ಮತ್ತು ಇನ್ನಿತರ ಕಲೆಗಳಿಗೆ ಸೋಶಿಯಲ್ ಮೀಡಿಯಾದಿಂದಾಗಿ ತುಂಬಾ ಕ್ರೇಜ್ ನಿರ್ಮಾಣವಾಗಿದೆ. ಇತ್ತೀಚೆಗೆ ಹದಿಹರೆಯದ ಯುವಕರಂತೂ ಬಿಡಿ ಚಿಕ್ಕ ಮಕ್ಕಳು ಸಹಿತ ತುಂಬಾ ಭರ್ಜರಿಯಾಗಿ ಡ್ಯಾನ್ಸ್ ಮಾಡುತ್ತಿದ್ದಾರೆ. ಇಂಥ ಕಾರಣಗಳಿಂದಾಗಿಯೇ ಟಿವಿಯಲ್ಲಿಯೂ ಡಾನ್ಸಿಂಗ್ ಶೋಗಳು ತುಂಬಾ ಜನಪ್ರಿಯವಾಗುತ್ತಿವೆ. ಎಷ್ಟೋ ನತದೃಷ್ಟರಿಗೆ ಟ್ಯಾಲೆಂಟ್ ಇದ್ದರೂ ದೊಡ್ಡದೊಡ್ಡ ಶೋಗಳಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಅಥವಾ ಅವರಿಗೆ ಅಂಥ ಅವಕಾಶಗಳು ದೊರೆಯುವುದಿಲ್ಲ. ಆದರೆ ಸೋಶಿಯಲ್ ಮೀಡಿಯಾದ ಈ ಯುಗದಲ್ಲಿ ಇಂಥ ಕೆಲಸಗಳು ತುಂಬಾ ಸರಳವಾಗಿವೆ. ಈಗಿನ ಕಾಲದಲ್ಲಿ ಯಾರ ಟ್ಯಾಲೆಂಟು ಸಹ ಮುಚ್ಚಿಡಲು ಸಾಧ್ಯವಿಲ್ಲ. ಹೀಗಾಗಿ ದಿನನಿತ್ಯ ಜನರ ಟ್ಯಾಲೆಂಟ್ ಪ್ರದರ್ಶಿಸುವ ಅನೇಕ ಪ್ರಕಾರದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಈಗ ಈ ಕಾರ್ಮಿಕನೊಬ್ಬ ಲೀಲಾಜಾಲವಾಗಿ ಕಾಲುಗಳನ್ನು ಹರಿದಾಡಿಸಿ ಮಾಡುತ್ತಿರುವ ಡಾನ್ಸಿನ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಈ ವ್ಯಕ್ತಿಯ ಡಾನ್ಸ್ ನೋಡಿದಾಗ ಅಚ್ಚರಿಯಾಗುವುದು ನಿಜ.
ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಕೆಲವರು ಕಟ್ಟಡ ನಿರ್ಮಾಣದ ಕೆಲಸದ ಮಧ್ಯೆ ಬ್ರೇಕ್ ತೆಗೆದುಕೊಂಡು ಕುಳಿತಿದ್ದಾರೆ. ಅವರಲ್ಲಿ ವ್ಯಕ್ತಿಯೊಬ್ಬನು ಆಕಸ್ಮಿಕವಾಗಿ ಎದ್ದು ಡ್ಯಾನ್ಸ್ ಮಾಡಲು ಶುರು ಮಾಡುತ್ತಾನೆ. ಆತ ನಿಜವಾಗಿಯೂ ಅದ್ಭುತವಾಗಿ ಡ್ಯಾನ್ಸ್ ಮಾಡುತ್ತಾನೆ. ಆತನ ಡಾನ್ಸ್ ನೋಡುಗರಿಗೆ ನಿಜಕ್ಕೂ ಆಶ್ಚರ್ಯವನ್ನುಂಟು ಮಾಡುತ್ತದೆ. ಆತ ತುಂಬಾ ಅದ್ಭುತವಾಗಿ ಬ್ಯಾಲೆನ್ಸ್ ಮಾಡಿಕೊಂಡು ದೇಹದ ಜೊತೆಗೆ ಕಾಲುಗಳನ್ನು ಅಚ್ಚರಿ ಪಡುವ ರೀತಿಯಲ್ಲಿ ಆಡಿಸಿದ್ದಾನೆ.
ಈ ರೀತಿ ಡಾನ್ಸ್ ಮಾಡಬೇಕಾದರೆ ಒಳ್ಳೆಯ ಡಾನ್ಸರ್ ಸಹಿತ ಸಾಕಷ್ಟು ಬೆವರು ಹರಿಸಬೇಕಾಗುತ್ತದೆ. ಈತನ ಡ್ಯಾನ್ಸ್ ನಲ್ಲಿ ಅನೇಕ ಅದ್ಭುತವಾದ ಮೂವ್ ಮೆಂಟ್ ಗಳು ಕಂಡುಬರುತ್ತವೆ. ಇಂಥ ಈ ಅದ್ಭುತವಾಗಿ ಡಾನ್ಸ್ ಮಾಡುತ್ತಿರುವ ಕಾರ್ಮಿಕನ ವಿಡಿಯೋ ಐಎಎಸ್ ಆಫೀಸರ್ ಡಾಕ್ಟರ್ ಎಂವಿ ರಾವ್ ಅವರು ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಆದ ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ. 37 ಸೆಕೆಂಡಿನ ಈ ವಿಡಿಯೋವನ್ನು ಇಲ್ಲಿಯವರೆಗೆ ಸಾವಿರಾರು ಜನರು ನೋಡಿ ಆನಂದಿಸಿದ್ದಾರೆ. ಅಷ್ಟೇ ಅಲ್ಲ ಸಾವಿರಾರು ಜನರು ಈ ವಿಡಿಯೋಗೆ ಲೈಕ್ ಸಹ ಮಾಡಿದ್ದಾರೆ. ಅನೇಕರು ಈ ಕಾರ್ಮಿಕನ ಡ್ಯಾನ್ಸ್ ನೋಡಿ ತಮ್ಮ ಕಮೆಂಟ್ ಗಳಲ್ಲಿ ಈ ವ್ಯಕ್ತಿಯ ಸ್ತುತಿ ಮಾಡಿದ್ದಾರೆ.
ವೀಡಿಯೋ ನೋಡಿ
Work with relaxation better ?@suryanandannet pic.twitter.com/bx3XEO81JB
— Dr. M V Rao, IAS (@mvraoforindia) January 24, 2022