ಅಲ್ಲು ಅರ್ಜುನ್ ಹಾಕಿದ ಸ್ಟೆಪ್ಸ್ ಗಳನ್ನು ಹಾಕುತ್ತಾ ಮುಂಬಯಿ ಲೋಕಲ್ ನಲ್ಲಿ ಗ್ರ್ಯಾಂಡ್ ಎಂಟ್ರಿ ಮಾಡಿದ ಪುಷ್ಪ! ವೈರಲ್ ಆಯಿತು ವಿಡಿಯೋ…

ಸದ್ಯ ಎಲ್ಲಿ ನೋಡಿದಲ್ಲಿ ಪುಷ್ಪ ಚಿತ್ರದಲ್ಲಿಯ ಹಾಡಿನ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮುಂಬಯಿಯ ಲೈಫ್ ಲೈನ್ ಎಂದೇ ಚಿರಪರಿಚಿತವಾದ ಲೋಕಲ್ ಟ್ರೈನ್ ನಲ್ಲಿ ಪ್ರವಾಸಿಗರು ಯಾವ ರೀತಿ ನುಗ್ಗುತ್ತಾರೆ ಎಂಬುದು ಹೇಳಲಿಕ್ಕೆ ಸಾಧ್ಯವಿಲ್ಲ. ಈ ಅನುಭವವನ್ನು ಸ್ವಂತ ಕಣ್ಣುಗಳಿಂದ ನೋಡಿದಾಗಲೇ ಅರ್ಥವಾಗುತ್ತದೆ. ಇಂಥ ಜನರಿಂದ ಕಿಕ್ಕಿರಿದು ತುಂಬಿದ ಲೋಕಲ್ ಪ್ರತಿಯೊಂದು ಸ್ಟೇಷನ್ ಮೇಲೆ ನಿಲ್ಲುವ ಸಮಯ ಹೆಚ್ಚೆಂದರೆ 15 ರಿಂದ 20 ಸೆಕೆಂಡುಗಳು ಮಾತ್ರ. ಈ 15 ರಿಂದ 20 ಸೆಕೆಂಡುಗಳಲ್ಲಿ ಲೋಕಲ್ ನಲ್ಲಿಯ ಪ್ರವಾಸಿಗರು ಇಳಿದು, ಪ್ಲಾಟ್ ಫಾರ್ಮ್ ನಲ್ಲಿ ನಿಂತ ಪ್ರವಾಸಿಗರು ಟ್ರೈನ್ ನೊಳಗೆ ಏರಬೇಕು. ಇಷ್ಟೊಂದು ಕಡಿಮೆ ಸಮಯದಲ್ಲಿ ಹೆಗಲಿಗೆ ಬ್ಯಾಗ್ ಹೊತ್ತುಕೊಂಡು ಸರಸರನೆ ಟ್ರೈನಿಗೆ ಪ್ರವಾಸ ಹೇಗೆ ಮಾಡುವುದು? ಎಂದರೆ ಅದು ಬರೀ ಮುಂಬಯಿ ನಿವಾಸಿಗಳಿಗೆ ಮಾತ್ರ ಗೊತ್ತು ಎಂದೇ ಹೇಳಬೇಕು.

ಈಗ ಹುಡುಗನೊಬ್ಬ ಮುಂಬಯಿ ಲೋಕಲ್ ನಲ್ಲಿ ಪ್ರವಾಸಿಗರು ಹೇಗೆ ನುಗ್ಗುತ್ತಾರೆ ಎಂಬುದನ್ನು ತೋರಿಸಲು ಅಲ್ಲು ಅರ್ಜುನ್ ಅವರ ಪುಷ್ಪ ಚಿತ್ರದಲ್ಲಿಯ ಫೇಮಸ್ ಡ್ಯಾನ್ಸ್ ಕಾಪಿ ಮಾಡಿದ್ದಾನೆ. ವೀಡಿಯೋ ನೋಡಲು ತುಂಬಾ ತಮಾಷೆಯಾಗಿದೆ. ಹುಡುಗನ ಈ ವಿಡಿಯೋ ನೇಟಿಜನ್ಸ್ ಗಳಿಗೆ ತುಂಬಾ ಇಷ್ಟವಾಗಿದೆ.

ಪ್ರಸ್ತುತ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ dhirajjjjj_ ಹೆಸರಿನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ ನೋಡಿದವರ ಸಂಖ್ಯೆ ಸುಮಾರು 1 ಮಿಲಿಯನ್ ದಾಟಿದೆ. ವಿಡಿಯೋಗೆ 90 ಸಾವಿರಕ್ಕೂ ಹೆಚ್ಚು ಲೈಕ್ ಗಳು ಬಂದಿವೆ.

ಪ್ರಸ್ತುತ ವಿಡಿಯೋ ಮುಖಾಂತರ ಮುಂಬಯಿ ನಿವಾಸಿಗಳು ಜನರಿಂದ ತುಂಬಿದ ಈ ಸ್ಟೇಷನ್ ನಲ್ಲಿ ತಮ್ಮ ದಾರಿಯನ್ನು ಹೇಗೆ ಹುಡುಕಿಕೊಳ್ಳುತ್ತಾರೆ ಎಂಬುದನ್ನು ಈ ಫೇಮಸ್ ಹಾಡಿನಿಂದ ತೋರಿಸಿದ್ದಾನೆ.

ನೋಡಿ ಈ ವೈರಲ್ ವಿಡಿಯೋ…