ಪುಟ್ಟ ಮಗು ಆಟ ಆಡುತ್ತಿರುವಾಗಲೇ ಹಠಾತ್ತನೆ ಬಿತ್ತು ಸ್ವಿಮ್ಮಿಂಗ್ ಪೂಲ್ ನಲ್ಲಿ! ಹೃದಯ ಬ#ಡಿತ ನಿಲ್ಲಿಸುವ ವೈರಲ್ ವಿಡಿಯೋ…

ಮನೆಯಲ್ಲೊಂದು ಮಗುವಿದ್ದರೆ ಎಂತಹ ಕಷ್ಟ ದುಃಖಗಳು ಇದ್ದರೂ ಅವುಗಳನ್ನು ಮರೆತು ಮಕ್ಕಳೊಂದಿಗೆ ಮನೆಯ ಸದಸ್ಯರು ಪ್ರಸನ್ನವಾಗಿರುತ್ತಾರೆ. ಮಕ್ಕಳಿದ್ದ ಮನೆ ಯಾವತ್ತೂ ಲವಲವಿಕೆಯಿಂದ ಕೂಡಿರುತ್ತದೆ. ಮಕ್ಕಳಿದ್ದ ಮನೆಯಲ್ಲಿಯ ಪೋಷಕರ ಜವಾಬ್ದಾರಿಯೂ ಸಹ ಅಷ್ಟೇ ಹೆಚ್ಚಾಗಿರುತ್ತದೆ. ಯಾಕೆಂದರೆ ಚಿಕ್ಕ ಮಕ್ಕಳು ತುಂಬಾ ತುಂಟ ಹಾಗೂ ಚೈತನ್ಯದಿಂದ ಕೂಡಿರುತ್ತವೆ. ಈ ಮಕ್ಕಳು ಎಂದಿಗೂ ಒಂದೇ ಸ್ಥಳದಲ್ಲಿ ಕೂಡುವುದಿಲ್ಲ. ಏನಾದರೊಂದು ಚಟುವಟಿಕೆಯಲ್ಲಿ ತೊಡಗಿರುತ್ತಾರೆ. ಮಕ್ಕಳು ಮಾಡುವ ಈ ತುಂಟಾಟ ಎಷ್ಟೋ ಸಲ ತಮ್ಮದೇ ಜೀವಕ್ಕೆ ಆಪತ್ತು ತಂದುಕೊಳ್ಳುತ್ತವೆ.

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಇದೇ ರೀತಿಯ ವಿಡಿಯೋ ಒಂದು ತುಂಬಾ ವೈರಲ್ ಆಗುತ್ತಿದೆ. ಈ ವಿಡಿಯೋ ಪೋಷಕರಿಗೆ ಒಳ್ಳೆಯ ಪಾಠವನ್ನು ಕಲಿಸುವ ಹಾಗಿದೆ.

ವಿಡಿಯೋದಲ್ಲಿ ಪುಟ್ಟ ಮಗು ಆಟ ಆಡುತ್ತಾ ಆಡುತ್ತಾ ಬಂದು ಹಠಾತ್ತನೆ ಸ್ವಿಮ್ಮಿಂಗ್ ಪೂಲ್ ನಲ್ಲಿ ಬೀಳುತ್ತದೆ. ಮಗು ಸ್ವಿಮ್ಮಿಂಗ್ ಪೂಲ್ ನಲ್ಲಿ ಬಿದ್ದ ನಂತರದ ದೃಶ್ಯವು ನಿಜಕ್ಕೂ ಮೈ ಬೆವರಿಸುವಂತಿದೆ. ಕಾರಣ ಸ್ವಿಮ್ಮಿಂಗ್ ಪೂಲ್ ನಲ್ಲಿ ಬಿದ್ದ ನಂತರ ಮಗು ಒಂದೇ ಸಮನೆ ಪ್ರಾಣ ಉಳಿಸಿಕೊಳ್ಳಲು ಹೋರಾಟ ಶುರು ಮಾಡುತ್ತದೆ. ಅಲ್ಲಿಯವರೆಗೆ ಯಾರೂ ಈ ಮಗುವಿನ ಕಡೆಗೆ ಗಮನವೇ ನೀಡಿರಲಿಲ್ಲ. ಬಿದ್ದ ಮಗು ನೀರಿನಲ್ಲಿ ಒದ್ದಾಡುತ್ತಿರುವ ಶಬ್ದ ಕೇಳಿ ಅಲ್ಲಿಯೇ ಒಳಗೆ ಇದ್ದ ತಂದೆ ಕ್ಷಣಾರ್ಧದಲ್ಲಿ ಬಂದು ನೀರಿನಲ್ಲಿ ಧುಮುಕಿ ತನ್ನ ಮಗುವಿನ ಪ್ರಾಣ ಉಳಿಸುತ್ತಾನೆ. ಮಗುವಿನ ಅದೃಷ್ಟ ಚೆನ್ನಾಗಿರುವುದರಿಂದ ಯಾವುದೇ ಹಾನಿಯಾಗದೆ ಪ್ರಾಣ ಉಳಿಯುತ್ತದೆ. ಆದರೆ ನೋಡುವ ಈ ದೃಶ್ಯ ಮಾತ್ರ ತುಂಬಾ ಗಾಬರಿಯನ್ನುಂಟು ಮಾಡುತ್ತದೆ.

ವಿಡಿಯೋ ನೋಡಿ

ಈ ಅದೃಷ್ಟದ ಮಗುವಿನ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಆದ ಇನ್ಸ್ಟಾಗ್ರಾಮ್ ನಲ್ಲಿ _.nnn.zziii ಈ ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋದ ಕ್ಯಾಪ್ಷನ್ ನಲ್ಲಿ ಅದೃಷ್ಟ ತುಂಬಾ ಚೆನ್ನಾಗಿದೆ, ದೇವರು ಎಲ್ಲವನ್ನೂ ನೋಡುತ್ತಾನೆ ಎಂದು ಬರೆದಿದ್ದಾರೆ. ಕೆಲವೇ ಗಂಟೆಗಳ ಹಿಂದೆ ಅಪ್ಲೋಡ್ ಮಾಡಿದ ಈ ವಿಡಿಯೋವನ್ನು ಈಗಾಗಲೇ ಸಾವಿರಾರು ಜನರು ನೋಡಿದ್ದಾರೆ ಹಾಗೂ ಬೇರೆ ಬೇರೆ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಈ ವಿಡಿಯೋ ನೋಡಿದ ಕೆಲವು ನೇಟಿಜನ್ಸ್ ಗಳು ಆ ಮಗುವಿನ ಪೋಷಕರ ಮೇಲೆ ರೇಗಾಡಿದ್ದಾರೆ. ಪಾಲಕರು ತುಂಬಾ ಬೇಜವಾಬ್ದಾರಿತನದ ವರ್ತನೆಯನ್ನು ತೋರಿಸಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಮಕ್ಕಳು ಸ್ವಿಮಿಂಗ್ ಫೂಲ್ ನ ಹತ್ತಿರವಿದ್ದಾಗ ಪೋಷಕರು ದಯವಿಟ್ಟು ಗಮನ ನೀಡಿ ಎಂದು ಕೆಲವರು ಸಲಹೆ ನೀಡಿದ್ದಾರೆ.