Video: ಸದ್ಯಕ್ಕೆ ಟ್ರೆಂಡ್ ನಲ್ಲಿರುವ ‘ಕಚ್ಚಾ ಬದಾಮ’ ಹಾಡಿನ ಮೂಲ ಗಾಯಕ ಇಲ್ಲಿದ್ದಾನೆ ನೋಡಿ, ನೀವು ಸಹ ಒರಿಜಿನಲ್ ಹಾಡು ಒಮ್ಮೆ ನೋಡಿ!!!!
ಸಾಮಾಜಿಕ ಜಾಲತಾಣಗಳಲ್ಲಿ ಯಾರು ಯಾವಾಗ ಫೇಮಸ್ ಆಗುತ್ತಾರೆ ಅಂತ ಹೇಳಲು ಸಾಧ್ಯವಿಲ್ಲ. ಸಾಮಾಜಿಕ ಜಾಲತಾಣ ಭಿಕ್ಷುಕರಿಗೆ ಶ್ರೀಮಂತ, ಶ್ರೀಮಂತರಿಗೆ ಭಿಕ್ಷುಕ ಮಾಡುವ ಸಾಮರ್ಥ್ಯ ಸಹ ಹೊಂದಿದೆ. ರಾಣು ಮಂಡೆಲಾ ಒಂದೇ ರಾತ್ರಿಯಲ್ಲಿ ತನ್ನ ಹಾಡಿನಿಂದ ಫೇಮಸ್ ಆಗಿ ಹಲವು ಬಾಲಿವುಡ್ ಚಿತ್ರಗಳಲ್ಲಿ ಹಾಡು ಸಹ ಹಾಡಿದ್ದಾರೆ ಇದೆಲ್ಲ ನಮಗೆ ಗೊತ್ತಿರುವ ಸಂಗತಿಯಾಗಿದೆ. ಸದ್ಯಕ್ಕೆ ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವೀಡಿಯೋ ತುಂಬಾ ಟ್ರೆಂಡ್ ಆಗುತ್ತಿದೆ. ಈ ಟ್ರೆಂಡ್ ನಲ್ಲಿರುವ ವೀಡಿಯೋದಲ್ಲಿಯ ಹಾಡು ಮಾತ್ರ ತುಂಬಾನೇ ಫೇಮಸ್ ಆಗಿದೆ. ಆ ಹಾಡಿನ ಮೂಲ ಹಾಡು ಹೇಗಿದೆ ಎಂಬುದು ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ.
ಸದ್ಯಕ್ಕೆ ವೈರಲ್ ನಲ್ಲಿರುವ ‘ಕಚ್ಚಾ ಬದಾಮ್’ ಈ ಹಾಡಿನ ಮೂಲ ಹಾಡುಗಾರ ಅಂದರೆ ಹಾಡಿರುವ ವ್ಯಕ್ತಿ ಯಾರು ಎಂಬುದು ನಿಮಗೆ ತೋರಿಸುವವರಿದ್ದೇವೆ. ಸದ್ಯಕ್ಕೆ ಎಲ್ಲ ಸಾಮಾಜಿಕ ಮಾಧ್ಯಮಗಳಲ್ಲಿ ರೀಲ್ ಮಾಡುವದು ತುಂಬಾ ಫೇಮಸ್ ಆಗಿದೆ. ರೀಲ್ ಮಾಡುವದರ ಮುಖಾಂತರ ಇಂದು ಪ್ರತಿಯೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಪರಿಚಯ ಮೂಡಿಸಿಕೊಳ್ಳುತ್ತಿದ್ದಾರೆ. ಒಂದು ವೇಳೆ ಅವರು ಮಾಡಿರುವ ರೀಲ್ಸ್ ವೈರಲ್ ಆದರೆ ಸಾಕು ಅವರು ರಾತ್ರೋರಾತ್ರಿ ಸ್ಟಾರ್ ಆಗುತ್ತಾರೆ. ಸದ್ಯಕ್ಕೆ ಕಚ್ಚಾ ಬದಾಮ್ ಹಾಡಿನ ಮೂಲ ಗಾಯಕ ಕೂಡಾ ತುಂಬಾ ಫೇಮಸ್ ಆಗಿದ್ದಾನೆ.
ಪ್ರಸ್ತುತ ವೀಡಿಯೋದಲ್ಲಿ ಒಬ್ಬ ವ್ಯಕ್ತಿ ಕಡಲೆಕಾಯಿ ವ್ಯಾಪಾರ ಮಾಡುತ್ತಾ ಈ ಹಾಡು ಹಾಡಿದ್ದಾನೆ. ಈ ಹಾಡು ತನ್ನ ಕಡಲೆಕಾಯಿ ವ್ಯಾಪಾರ ಹೆಚ್ಚಾಗ ಬೇಕೆಂದು ಜನರ ಗಮನ ಸೆಳೆಯುವ ಸಲುವಾಗಿ ಹಾಡಿದ್ದಾನೆ. ಅವನು ಹಾಡಿರುವ ಈ ಹಾಡು ಸದ್ಯಕ್ಕೆ ಸೋಶಿಯಲ್ ಮಿಡಿಯಾದಲ್ಲೋ ವೈರಲ್ ಆಗುತ್ತೆ ಅಂತ ಆತ ಅಂದುಕೊಂಡಿರಲಿಲ್ಲ ಆದರೆ ಆತನ ಹಾಡು ಮಾತ್ರ ತುಂಬಾ ಫೇಮಸ್ ಆಗುವದರ ಜೊತೆಗೆ ಆತನು ಸಹ ತುಂಬಾ ಫೇಮಸ್ ಆಗಿದ್ದಾನೆ. ಸದ್ಯಕ್ಕೆ ಆ ವ್ಯಕ್ತಿ ಎಲ್ಲೇ ಕಂಡರು ಸಹ ಆತನ ಜೊತೆಗೆ ವೀಡಿಯೋ ಮಾಡಿ ಅದನ್ನು ಸಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ. ಈ ವ್ಯಕ್ತಿಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ತುಂಬಾನೇ ಇವೆ. ಅವುಗಳಲ್ಲಿ ಮೊಟ್ಟ ಮೊದಲನೆಯ ವಿಡಿಯೋ ಇದಾಗಿದೆ.
ವೀಡಿಯೋ ನೋಡಿ.